Ayushman Yog 2024: ನಾಳೆ ಆಯುಷ್ಮಾನ್ ಸೇರಿದಂತೆ ಹಲವು ಶುಭ ಯೋಗಗಳ ರಚನೆ, ಈ ಜನರಿಗೆ ಭಾರಿ ಧನಲಾಭ!
Ayushman Yoga 2024: ನಾಳೆ ಫೆಬ್ರುವರಿ 20 ಚಂದ್ರನು ಮಿಥುನ ರಾಶಿಯಲ್ಲಿ ಸಂಚರಿಸಲಿದ್ದಾನೆ. ಅಲ್ಲದೆ ನಾಳೆ ಮಾಘ ಮಾಸದ ಶುಕ್ಲ ಪಕ್ಷದ ಏಕಾದಶಿಯ ದಿನವಾಗಿದ್ದು ಈ ದಿನವನ್ನು ಜಯಾ ಏಕಾದಶಿ ಎಂದೂ ಕೂಡ ಕರೆಯುತ್ತಾರೆ. ಜಯ ಏಕಾದಶಿಯಂದು ಪ್ರೀತಿ ಯೋಗ, ಆಯುಷ್ಮಾನ್ ಯೋಗ, ರವಿ ಯೋಗ ಮತ್ತು ಆರ್ದ್ರಾ ನಕ್ಷತ್ರದ ಶುಭ ಸಂಯೋಗ ನೆರೆವೆರುತ್ತಿರುವ ಕಾರಣ, ನಾಳಿನ ದಿನದ ಮಹತ್ವ ಮತ್ತಷ್ಟು ಹೆಚ್ಚಾಗಿದೆ. ವೈದಿಕ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ನಾಲ್ಕು ರಾಶಿಗಳ ಜನರಿಗೆ ಈ ಮಂಗಳಕರ ಯೋಗಗಳ ಲಾಭ ಸಿಗಲಿದೆ. ನಾಳೆ ಯಾವ ರಾಶಿಗಳ ಜನರ ಜೀವನದಲ್ಲಿ ಒಳ್ಳೆಯ ದಿನಗಳು ಆರಭಗೊಳ್ಳಲಿವೆ ತಿಳಿದುಕೊಳ್ಳೋಣ ಬನ್ನಿ (Spiritual News In Kannada)
ಮಿಥುನ ರಾಶಿ: ಮಿಥುನ ರಾಶಿಯವರಿಗೆ ಎಲ್ಲಾ ಶುಭಯೋಗಗಳು ಲಾಭದಾಯಕವಾಗಿರುತ್ತದೆ. ಮಿಥುನ ರಾಶಿಯ ಜನರು ನಾಳೆ ಎಲ್ಲಾ ರೀತಿಯಲ್ಲೂ ಹಣವನ್ನು ಗಳಿಸುವಲ್ಲಿ ಮತ್ತು ಕೂಡಿಹಾಕುವಲ್ಲಿ ಯಶಸ್ವಿಯಾಗುತ್ತಾರೆ ಮತ್ತು ನಿಮ್ಮ ಸೌಕರ್ಯಗಳು ಸಹ ಹೆಚ್ಚಾಗುತ್ತವೆ. ನಿಮ್ಮ ಕೆಲಸವನ್ನು ಬದಲಾಯಿಸಲು ನೀವು ಯೋಜಿಸುತ್ತಿದ್ದರೆ, ನಿಮ್ಮ ಆಸೆ ನಾಳೆ ಈಡೇರಬಹುದು. ವ್ಯಾಪಾರಸ್ಥರು ನಾಳೆ ದೊಡ್ಡ ಡೀಲ್ ಪಡೆಯಬಹುದು, ಅದು ನಿಮ್ಮ ಆರ್ಥಿಕ ಸ್ಥಿತಿಯನ್ನು ಬಲಪಡಿಸುತ್ತದೆ. ಕೌಟುಂಬಿಕ ಜೀವನದ ಬಗ್ಗೆ ಹೇಳುವುದಾದರೆ, ಕುಟುಂಬದಲ್ಲಿ ಸಂತೋಷ ಮತ್ತು ಶಾಂತಿ ಇರುತ್ತದೆ ಮತ್ತು ಕುಟುಂಬ ಸದಸ್ಯರಲ್ಲಿ ಪರಸ್ಪರ ಪ್ರೀತಿ ಇರುತ್ತದೆ.
ತುಲಾ ರಾಶಿ: ಈ ಶುಭಯೋಗಗಳು ನಿಮಗೂ ಕೂಡ ಒಳ್ಳೆಯ ಸುದ್ದಿಗಳನ್ನು ನೀಡಲಿವೆ. ನಾಳೆ ಆಂಜನೇಯನ ಕೃಪೆಯಿಂದ ತುಲಾ ರಾಶಿಯವರ ಬ್ಯಾಂಕ್ ಬ್ಯಾಲೆನ್ಸ್‌ನಲ್ಲಿ ಹೆಚ್ಚಾಗಲಿದೆ ಮತ್ತು ನಿಮ್ಮ ಎಲ್ಲಾ ಕೆಲಸಗಳು ಯಾವುದೇ ಅಡೆತಡೆಯಿಲ್ಲದೆ ಪೂರ್ಣಗೊಳ್ಳಲಿವೆ. ಉದ್ಯೋಗದಲ್ಲಿರುವ ಜನರು ನಾಳೆ ಸಹೋದ್ಯೋಗಿಗಳಿಂದ ಎಲ್ಲಾ ರೀತಿಯ ಬೆಂಬಲವನ್ನು ಪಡೆಯುತ್ತಾರೆ ಮತ್ತು ಪ್ರಗತಿಯ ಹೊಸ ಮಾರ್ಗಗಳು ನಿಮಗಾಗಿ ತೆರೆದುಕೊಳ್ಳಲಿವೆ. ನಿಮ್ಮ ಮಕ್ಕಳ ಪ್ರಗತಿಯಿಂದ ನೀವು ಖುಷಿಪಡುವಿರಿ ಮತ್ತು ನಾಳೆ ಹೊಸ ವಾಹನ ಅಥವಾ ಭೂಮಿಯನ್ನು ಸಹ ಖರೀದಿಸಬಹುದು. ವ್ಯಾಪಾರಸ್ಥರಿಗೆ ಉತ್ತಮ ಲಾಭಸಿಗಲಿದೆ ಮತ್ತು ವ್ಯಾಪಾರ ವಿಸ್ತರಣೆಗೆ ಯೋಜಿಸಲು ಸಾಧ್ಯವಾಗುತ್ತದೆ. ಹೊಸ ಆಸ್ತಿಯನ್ನು ಖರೀದಿಸುವ ಕನಸು ನಾಳೆ ನನಸಾಗಬಹುದು.
ಮಕರ ರಾಶಿ: ಮಕರ ರಾಶಿಯವರ ವಿದೇಶಕ್ಕೆ ಹೋಗುವ ಕನಸು ಈ ಅವಧಿಯಲ್ಲಿ ನನಸಾಗಲಿದ್ದು, ಹಣ ಸಂಪಾದನೆಯ ಹೊಸ ಮಾರ್ಗಗಳೂ ಸೃಷ್ಟಿಯಾಗಲಿವೆ. ಕೆಲಸದ ಸ್ಥಳದಲ್ಲಿ, ನೀವು ನಿಮ್ಮ ಹಿರಿತನವನ್ನು ತೋರಿಸಬೇಕು ಮತ್ತು ಕಿರಿಯರ ತಪ್ಪುಗಳನ್ನು ಕ್ಷಮಿಸಬೇಕು, ಆಗ ಮಾತ್ರ ಎಲ್ಲರ ಮೇಲೆ ನಿಮ್ಮ ಪ್ರಭಾವ ಹೆಚ್ಚಾಗುತ್ತದೆ. ನೀವು ಈ ಹಿಂದೆ ಯಾರೊಂದಿಗಾದರೂ ಹಣವನ್ನು ಎರವಲು ಪಡೆದಿದ್ದರೆ, ಅದನ್ನು ಮರುಪಾವತಿ ಮಾಡುವಲ್ಲಿ ನೀವು ಯಶಸ್ವಿಯಾಗುತ್ತೀರಿ ಮತ್ತು ನೀವು ಸ್ನೇಹಿತರೊಂದಿಗೆ ಸಾಮಾಜಿಕ ಸಮಾರಂಭದಲ್ಲಿ ಭಾಗವಹಿಸಬಹುದು. ಕುಟುಂಬದಲ್ಲಿ ಕೆಲವು ಶುಭ ಅಥವಾ ಮಂಗಳಕರ ಘಟನೆಗಳು ಸಂಭವಿಸಬಹುದು,
(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಯಾವುದೇ ಮಾಹಿತಿಯ ನಿಖರತೆ ಅಥವಾ ಸ್ಪಷ್ಟತೆಯನ್ನು ಜೀ ಕನ್ನಡ ನ್ಯೂಸ್ ಖಚಿತಪಡಿಸುವುದಿಲ್ಲ. ಜೋತಿಷಿಗಳು, ಪಂಚಾಂಗ, ಮಾನ್ಯತೆಗಳು ಅಥವಾ ಧರ್ಮ ಗ್ರಂಥಗಳಂತಹ ವಿವಿಧ ಮಾಧ್ಯಮಗಳಿಂದ ಸಂಗ್ರಹಿಸಲಾಗಿರುವ ಮಾಹಿತಿಯನ್ನು ನಿಮ್ಮ ಬಳಿ ತಲುಪಿಸುವುದು ಮಾತ್ರ ನಮ್ಮ ಉದ್ದೇಶವಾಗಿದೆ. ಈ ಮಾಹಿತಿಯ ನೈಜತೆ ಹಾಗೂ ಸ್ಪಷ್ಟತೆಯನ್ನು ಖಚಿತಪಡಿಸಲಾಗುವುದಿಲ್ಲ. ಹೀಗಾಗಿ ಯಾವುದೇ ರೀತಿಯಲ್ಲಿ ಈ ಮಾಹಿತಿಯನ್ನು ಬಳಸುವ ಮುನ್ನ ಸಂಬಂಧಿತ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ)