ಪ್ರಧಾನಿ ಮೋದಿ ಸೇರಿದಂತೆ ಈ ವರ್ಷ ಬಾಬಾ ವಂಗಾ ನುಡಿದಿರುವ ಭಯಾನಕ ಭವಿಷ್ಯವಾಣಿಗಳಿವು..!
ಬಾಬಾ ವಂಗಾ ಅವರ ಅಭಿಮಾನಿಗಳ ಪ್ರಕಾರ, ಅವರು ಈಗಾಗಲೇ ಬ್ರಿಟನ್‌ನ ರಾಜಕುಮಾರಿ ಡಯಾನಾ ಸಾವು, ರಷ್ಯಾದ ಪರಮಾಣು ರಿಯಾಕ್ಟರ್ ಚೆರ್ನೋಬಿಲ್‌ನಲ್ಲಿನ ದುರ್ಘಟನೆ, ಬ್ರೆಕ್ಸಿಟ್ ಮತ್ತು ಅಮೆರಿಕದ ಮೇಲೆ 9/11 ಭಯೋತ್ಪಾದಕ ದಾಳಿಯ ಭವಿಷ್ಯ ನುಡಿದಿದ್ದರಂತೆ. ಅವುಗಳು ನಂತರ ನಿಜವೆಂದು ಸಾಬೀತಾಗಿವೆಯಂತೆ. ಅವರು ಸಾವಿರಾರು ವರ್ಷಗಳ ಭವಿಷ್ಯವಾಣಿಗಳನ್ನು ಹೇಳಿದ್ದು, ಈ ವರ್ಷ ಸಂಭವಿಸಲಿರುವ ಟಾಪ್ ಭವಿಷ್ಯವಾಣಿಗಳ ಬಗ್ಗೆ ಇದೀಗ ವ್ಯಾಪಕ ಚರ್ಚೆಯಾಗುತ್ತಿದೆಯಂತೆ. ಹಂಗಾದ್ರೆ ಈ ವರ್ಷ ವಂಗಾ ನುಡಿದಿರುವ ಟಾಪ್ ಭವಿಷ್ಯವಾಣಿಗಳು ಯಾವುವು ಅಂತಾ ತಿಳಿಯಿರಿ.
ವರದಿಯ ಪ್ರಕಾರ ಬಾಬಾ ವೈಂಗಾ ಈ ವರ್ಷ 5 ದೊಡ್ಡ ಭವಿಷ್ಯಗಳನ್ನು ನುಡಿದಿದ್ದಾರೆ. ಈ ವರ್ಷ ಜಗತ್ತು ದೊಡ್ಡ ಆರ್ಥಿಕ ಬಿಕ್ಕಟ್ಟನ್ನು ಎದುರಿಸಲಿದೆ ಎಂದು ಅವರು ಹೇಳಿದ್ದಾರಂತೆ. ಇದು ಜಪಾನ್ ಮತ್ತು ಬ್ರಿಟನ್‌ನಿಂದ ಪ್ರಾರಂಭವಾಗಲಿದ್ದು, ಇಡೀ ಪ್ರಪಂಚವೇ ಅದರ ಹಿಡಿತಕ್ಕೆ ಸಿಲುಕಲಿದೆಯಂತೆ. ಜಗತ್ತಿನಲ್ಲಿ ಹೆಚ್ಚುತ್ತಿರುವ ಸಾಲದ ಮಟ್ಟ ಮತ್ತು ಹೆಚ್ಚುತ್ತಿರುವ ಭೌಗೋಳಿಕ ರಾಜಕೀಯ ಒತ್ತಡವು ಇದಕ್ಕೆ ಪ್ರಮುಖ ಕಾರಣವಾಗಿದೆ.
ವರದಿಯ ಪ್ರಕಾರ 2024ರಲ್ಲಿ ಕ್ಯಾನ್ಸರ್ ಮತ್ತು ಆಲ್ಝೈಮರ್‌ನಂತಹ ಗುಣಪಡಿಸಲಾಗದ ಕಾಯಿಲೆಗಳಿಗೆ ಚಿಕಿತ್ಸೆ ಲಭ್ಯವಿರಲಿದೆಯಂತೆ. ಇದು ಇಡೀ ಮನುಕುಲಕ್ಕೆ ಹೆಚ್ಚಿನ ಪ್ರಯೋಜನವನ್ನು ನೀಡುತ್ತದೆ ಮತ್ತು ಲಕ್ಷಾಂತರ ಜನರ ಜೀವಗಳನ್ನು ಉಳಿಸುತ್ತದೆ ಎಂದು ಬಾಬಾ ವಂಗಾ ಭವಿಷ್ಯ ನುಡಿದಿದ್ದಾರೆ. ವಿಶ್ವದ ಜನರು ಇದರಿಂದ ಖುಷಿಯಾಗಲಿದ್ದಾರಂತೆ.
ಬಾಬಾ ವೈಂಗಾರ ಅಭಿಮಾನಿಗಳ ಪ್ರಕಾರ, ಈ ವರ್ಷ ಪ್ರಪಂಚದಾದ್ಯಂತ ಸೈಬರ್ ದಾಳಿಗಳು ಹೆಚ್ಚಾಗುತ್ತವೆ. ಇದರಿಂದಾಗಿ ಹೆಚ್ಚಿನ ಸಂಖ್ಯೆಯ ಜನರು ತಮ್ಮ ಆಸ್ತಿಯನ್ನು ಕಳೆದುಕೊಳ್ಳಬೇಕಾಗುತ್ತದೆ. ಈ ಸೈಬರ್ ಹ್ಯಾಕರ್‌ಗಳು ಪವರ್ ಗ್ರಿಡ್‌ಗಳು ಮತ್ತು ವಾಟರ್ ಪ್ಲಾಂಟ್‌ಗಳಂತಹ ಮೂಲಸೌಕರ್ಯಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸುತ್ತಾರಂತೆ. ಇದು ದೇಶಗಳ ರಾಷ್ಟ್ರೀಯ ಭದ್ರತೆಗೆ ದೊಡ್ಡ ಅಪಾಯವನ್ನುಂಟುಮಾಡುತ್ತದೆ.
ಈ ವರ್ಷ ಯುರೋಪ್‌ನಲ್ಲಿ ಅನೇಕ ಭಯೋತ್ಪಾದಕ ದಾಳಿಗಳು ನಡೆಯಲಿವೆ ಎಂದು ಬಾಬಾ ವೈಂಗಾ ಭವಿಷ್ಯ ನುಡಿದಿದ್ದಾರೆ. ಈ ದಾಳಿಗಳನ್ನು ನಿಭಾಯಿಸುವಲ್ಲಿ ಈ ದೇಶಗಳ ಸರ್ಕಾರಗಳು ಅಸಹಾಯಕತೆಯನ್ನು ಅನುಭವಿಸುತ್ತವೆ. ಇದರೊಂದಿಗೆ ವಿಶ್ವದ ದೊಡ್ಡ ದೇಶ (ಬಹುಶಃ ಚೀನಾ) ಜೈವಿಕ ಶಸ್ತ್ರಾಸ್ತ್ರಗಳನ್ನು ಪರೀಕ್ಷಿಸುತ್ತದೆ. ಇದರಿಂದ ಜಗತ್ತಿನಲ್ಲಿ ಭಯದ ವಾತಾವರಣ ಹೆಚ್ಚುತ್ತದೆ ಎಂದು ಹೇಳಲಾಗಿದೆ.
ಪ್ರಧಾನಿ ಮೋದಿಯವರ ಸ್ನೇಹಿತ ವ್ಲಾಡಿಮಿರ್ ಪುಟಿನ್ ಬಗ್ಗೆ ಬಾಬಾ ವೈಂಗಾ ಅಪಾಯಕಾರಿ ಭವಿಷ್ಯ ನುಡಿದಿದ್ದಾರೆ. ಈ ವರ್ಷ ರಷ್ಯಾ ಅಧ್ಯಕ್ಷ ಪುಟಿನ್ ಅವರನ್ನು ಹತ್ಯೆ ಮಾಡುವ ಪ್ರಯತ್ನಗಳು ನಡೆಯಬಹುದು ಎಂದು ಅವರು ಹೇಳಿದ್ದಾರಂತೆ. ಇದು ಸಂಭವಿಸಿದಲ್ಲಿ ರಷ್ಯಾ ಮತ್ತು ವಿಶ್ವದ ರಾಜಕೀಯದಲ್ಲಿ ದೊಡ್ಡ ಬದಲಾವಣೆಗಳಾಗುತ್ತವೆ. ಈ ಕಾರಣದಿಂದ ರಷ್ಯಾದ ವಿದೇಶಾಂಗ ನೀತಿಗಳಲ್ಲಿ ಆಗಿರುವ ಬದಲಾವಣೆಗಳನ್ನು ನಾವು ಕಾಣಬಹುದು.