ಜೂನಿಯರ್ ಅನುಷ್ಕಾ ಶರ್ಮಾ ಜೊತೆ ಬಾಬರ್ ಅಜಮ್ ಡೇಟಿಂಗ್.. ಕೊಹ್ಲಿ ಪತ್ನಿಯಂತೆ ಕಾಣೊ ಈ ಸುಂದರಿ ಯಾರು ಗೊತ್ತಾ?
ಭಾರತ ಮತ್ತು ಪಾಕಿಸ್ತಾನದ ನಡುವಿನ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಭಾರತ 19 ಓವರ್‌ಗಳಲ್ಲಿ 119 ರನ್‌ಗಳಿಗೆ ಆಲೌಟಾಯಿತು. ಬಳಿಕ ಪಾಕಿಸ್ತಾನ 20 ಓವರ್‌ಗಳಲ್ಲಿ 113 ರನ್‌ಗಳಿಗೆ ಸೀಮಿತವಾಯಿತು.
ಪಾಕ್ ನಾಯಕ ಬಾಬರ್ ಅಜಮ್ 13 ರನ್ ಗಳಿಸಿ ಔಟಾದರು. ಟಿ20 ವಿಶ್ವಕಪ್‌ನಲ್ಲಿ ಪಾಕಿಸ್ತಾನಕ್ಕೆ ಇದು ಸತತ ಎರಡನೇ ಸೋಲನ್ನು ತಂದುಕೊಟ್ಟಿತು..
ಇನ್ನು ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಮತ್ತು ಕೇನ್ ವಿಲಿಯಮ್ಸನ್ ತಮ್ಮ ನೆಚ್ಚಿನ ಕ್ರಿಕೆಟ್ ಆಟಗಾರರು ಎಂದು ಬಾಬರ್ ಅಜಮ್ ಹೇಳಿದ್ದಾರೆ.
ವಿರಾಟ್ ಅವರ ಪತ್ನಿ ಅನುಷ್ಕಾ ಶರ್ಮಾ ಅವರಂತೆಯೇ ಕಾಣುವ ಪಾಕ್ ಮಾಡೆಲ್ ಕಂಪನಿಯ ನಟಿ ಹನಿಯಾ ಅಮೀರ್ ಅವರೊಂದಿಗೆ ಬಾಬರ್ ಡೇಟಿಂಗ್ ಮಾಡುತ್ತಿದ್ದಾರೆ.
ಹನಿಯಾ ಅವರನ್ನು ಪಾಕಿಸ್ತಾನಿ ಅಭಿಮಾನಿಗಳು 'ಜೂನಿಯರ್ ಅನುಷ್ಕಾ ಶರ್ಮಾ' ಎಂದೇ ಕರೆಯುತ್ತಾರೆ. ಸದ್ಯ ಬಾಬರ್ ಆಜಮ್ ಜೂನಿಯರ್ ಅನುಷ್ಕಾ ಶರ್ಮಾ ಜೊತೆ ಡೇಟಿಂಗ್ ಮಾಡುತ್ತಿದ್ದಾರೆ ಎಂದು ವದಂತಿಗಳಿವೆ.