ರೋಹಿತ್ ಶರ್ಮಾ ವಿಕೆಟ್ ಕಬಳಿಸಿ ಮಿಂಚಿದ ದ.ಆಫ್ರಿಕಾದ ಕೇಶವ್ ಮಹಾರಾಜ್ ಹಿನ್ನೆಲೆ ಏನು ಗೊತ್ತಾ? ಈತ ಆಂಜನೇಯನ ಪರಮಭಕ್ತ!
ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಟಿ20 ವಿಶ್ವಕಪ್ ಪಂದ್ಯದಲ್ಲಿ ರೋಹಿತ್ ಶರ್ಮಾ ವಿಕೆಟ್ ಕಬಳಿಸಿ ಮಿಂಚಿದ ಕೇಶವ್ ಮಹಾರಾಜ್ ಹಿನ್ನೆಲೆ ಏನೆಂಬುದನ್ನು ಈ ವರದಿಯಲ್ಲಿ ತಿಳಿದುಕೊಳ್ಳೋಣ.
ಕೇಶವ್ ಮಹಾರಾಜ್ ದಕ್ಷಿಣ ಆಫ್ರಿಕಾ ಪರ ಕ್ರಿಕೆಟ್ ಆಡುತ್ತಿದ್ದರೂ ಸಹ, ಇವರು ಭಾರತೀಯ ಮೂಲದವರು. ಫೆಬ್ರವರಿ 7, 1990 ರಂದು ಡರ್ಬನ್’ನಲ್ಲಿ ಜನಿಸಿದ ಕೇಶವ್, ಹನುಮಂತ ದೇವರ ಪರಮ ಭಕ್ತ.
ತಮ್ಮ ಇನ್‌ಸ್ಟಾಗ್ರಾಂ ಬಯೋದಲ್ಲಿ ಜೈ ಶ್ರೀ ರಾಮ್, ಜೈ ಶ್ರೀಹನುಮಾನ್ ಎಂದು ಬರೆದುಕೊಂಡಿರುವ ಕೇಶವ್, ತಮ್ಮ ಬ್ಯಾಟ್ ಮೇಲೆ ಕೂಡ ‘ಓಂ’ ಎಂದು ಬರೆದಿರುವುದು ಈ ಹಿಂದೆ ವೈರಲ್ ಆಗಿತ್ತು.
ಇನ್ನು ಕೇಶವ್ ಮಹಾರಾಜ್ ಆಟದ ಬಗ್ಗೆ ಹೇಳುವುದಾದರೆ, 2016 ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್ ಆಡುವ ಮೂಲಕ ಕ್ರಿಕೆಟ್’ಗೆ ಪಾದಾರ್ಪಣೆ ಮಾಡಿದರು. ಮೊದಲ ಪಂದ್ಯದಲ್ಲೇ 4 ವಿಕೆಟ್ ಕಬಳಿಸಿದ್ದ ಕೇಶವ್, 2017 ರಲ್ಲಿ ಇಂಗ್ಲೆಂಡ್ ವಿರುದ್ಧ ತಮ್ಮ ODI’ಗೆ ಪಾದಾರ್ಪಣೆ ಮಾಡಿದರು. ಬೌಲಿಂಗ್ ಜೊತೆಗೆ ಬ್ಯಾಟಿಂಗ್’ನಲ್ಲೂ ಮಿಂಚಿರುವ ಕೇಶವ್ ಮಹಾರಾಜ್ ಇದೀಗ ದಕ್ಷಿಣ ಆಫ್ರಿಕಾ ತಂಡದ ಪ್ರಮುಖ ಆಟಗಾರ ಎನಿಸಿಕೊಂಡಿದ್ದಾರೆ.
ತನ್ನ ಮೂಲವನ್ನು ಮರೆಯದ ಈ ಸ್ಟಾರ್ ಆಲ್’ರೌಂಡರ್ ಆಗಾಗ ಭಾರತಕ್ಕೆ ಬಂದು ಇಲ್ಲಿನ ಹನುಮಾನ್ ದೇಗುಲಗಳಿಗೆ ಭೇಟಿ ನೀಡುತ್ತಾ ಪೂಜೆ ಸಲ್ಲಿಸುತ್ತಾರೆ.