ಮುಂದಿನ ತಿಂಗಳಿನಿಂದ ಈ ರಾಶಿಯವರು ಕಾಲಿಟ್ಟಲೆಲ್ಲಾ ಕಷ್ಟ.! ಯಾಕೆ ಹೀಗೆ ?
ಕುಂಭ ರಾಶಿ : ಶನಿದೇವ ಮತ್ತು ಸೂರ್ಯನ ಮೈತ್ರಿಯು ಕುಂಭ ರಾಶಿಯಲ್ಲಿಯೇ ರಚನೆಯಾಗುತ್ತಿದೆ. ಈ ಎರಡು ಶಕ್ತಿಶಾಲಿ ಗ್ರಹಗಳ ಮಿಲನದಿಂದಾಗಿ ಕುಂಭ ರಾಶಿಯವರಿಗೆ ಸಂಕಷ್ಟದ ಕಾಲ ಆರಂಭವಾಗಲಿದೆ. ಸ್ನೇಹಿತರೊಂದಿಗಿನ ಸಂಬಂಧಗಳು ಹಾಳಾಗಬಹುದು. ಈ ಸಂದರ್ಭದಲ್ಲಿ ಮಾತಿನ ಮೇಲೆ ಹಿಡಿತ ಇಟ್ಟುಕೊಳ್ಳುತ್ತೀರಿ ಅಷ್ಟು ಒಳ್ಳೆಯದು. ಹಣಕಾಸಿನ ವಿಚಾರ ಬಂದಾಗ ಯೋಚಿಸಿ ಹೆಜ್ಜೆಯಿಡಿ. ಹೊಸ ವ್ಯವಹಾರವನ್ನು ಪ್ರಾರಂಭಿಸಲು ಇದು ಶುಭ ಸಮಯವಲ್ಲ.
ವೃಶ್ಚಿಕ ರಾಶಿ : ಈ ರಾಶಿಯವರ ಮೇಲೆ ಈಗಾಗಲೇ ಶನಿಯ ಪ್ರಭಾವ ಕಾಣುತ್ತಿದೆ. ಅದರ ಜೊತೆಯಲ್ಲಿ ಶನಿ ಮತ್ತು ಸೂರ್ಯ ಜೊತೆಯಾದಾಗ ಈ ರಾಶಿಯವರ ಕಷ್ಟ ಇನ್ನಷ್ಟು ಹೆಚ್ಚಲಿದೆ. ಈ ರಾಶಿಯವರು ಜಾಗರೂಕತೆಯ ಹೆಜ್ಜೆಯನ್ನಿಡಬೇಕು. ಅಳೆದು ತೂಗಿ ಮಾತನಾಡುವುದು ಒಳ್ಳೆಯದು. ಇಲ್ಲವಾದಲ್ಲಿ ನಿಮ್ಮ ಮಾತೇ ನಿಮಗೆ ಮುಳ್ಳಾಗಬಹುದು. ಜೀವನಕ್ಕೆ ಸಂಬಂಧಿಸಿದ ನಿರ್ಧಾರಗಳನ್ನು ಎಚ್ಚರಿಕೆಯಿಂದ ತೆಗೆದುಕೊಳ್ಳಬೇಕು. ಅವರ ಒಂದು ಸಣ್ಣ ತಪ್ಪು ದೊಡ್ಡ ಆರ್ಥಿಕ ನಷ್ಟವನ್ನು ಉಂಟುಮಾಡಬಹುದು. ಆರೋಗ್ಯದ ಬಗ್ಗೆ ಎಚ್ಚರದಿಂದಿರಬೇಕು.
ಕರ್ಕಾಟಕ ರಾಶಿ : ಶನಿ-ಸೂರ್ಯ ಸಂಯೋಗದ ವೇಳೆ ಅಪಘಾತ ಸಂಭವಿಸುವ ಸಾಧ್ಯತೆಯಿದೆ. ಅದಕ್ಕಾಗಿಯೇ ಈ ರಾಶಿಯವರು ವಾಹನ ಚಲಾಯಿಸುವಾಗ ಜಾಗರೂಕರಾಗಿರಬೇಕು. ಕೆಲಸದ ಸ್ಥಳದಲ್ಲಿ ಸಹೋದ್ಯೋಗಿಗಳೊಂದಿಗಿನ ಸಂಬಂಧವು ಹದಗೆಡಬಹುದು. ಯಾರಿಗೇ ಆದರೂ ಸಾಲ ಕೊಡುವ ತಪ್ಪು ಮಾಡಬೇಡಿ. ಹೂಡಿಕೆ ಮಾಡುವಾಗ ಬುದ್ಧಿವಂತಿಕೆ ಬಳಸಿಕೊಳ್ಳಿ. ಹೊಸ ಜನರೊಂದಿಗೆ ಹೆಚ್ಚಿನ ಒಡನಾಟ ಬೇಡ.
( ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.)