Bad Time Indications: ಕೆಟ್ಟ ಕಾಲ ಬರುವುದಕ್ಕೂ ಮುನ್ನ ಸಿಗುತ್ತವೆ ಈ 7 ಸಂಕೇತಗಳು

Sun, 08 Aug 2021-12:34 pm,

1. ಶನಿಯ ಅಶುಭ ಪ್ರಭಾವ - ಜ್ಯೋತಿಷ್ಯ ಶಾಸ್ತ್ರದಲ್ಲಿ ಶನಿಯನ್ನು (Shani Dev) ನ್ಯಾಯದ ದೇವರು ಎಂದು ಕರೆಯಲಾಗುತ್ತದೆ. ವ್ಯಕ್ತಿಗಳ ಕರ್ಮಕ್ಕೆ ಅನುಗುಣವಾಗಿ ಶನಿದೇವ ಫಲಗಳನ್ನು ನೀಡುತ್ತಾನೆ ಎನ್ನಲಾಗಿದೆ.  ಅಲ್ಲದೆ, ಶನಿಯ ವಕ್ರ ದೃಷ್ಟಿ ವ್ಯಕ್ತಿಯ ಜೀವನದಲ್ಲಿ ಹಲವು ರೀತಿಯ ತೊಂದರೆಗಳಿಗೆ ಕಾರಣವಾಗುತ್ತದೆ. ಶನಿ (Shani Vakri) ಅಶುಭ ಪ್ರಭಾವ ಜೀವನದಲ್ಲಿ ಮುಂದೆ ನಡೆಯುವ ಕೆಟ್ಟ ಘಟನೆಗಳ ಮುನ್ಸೂಚನೆ ನೀಡುತ್ತದೆ.

2. ಶೂ ಹಾಗೂ ಪಾದರಕ್ಷೆ ಕಳ್ಳತನವಾಗುವುದು - ಒಂದು ವೇಳೆ ಯಾವುದೇ ಓರ್ವ ಜಾತಕದ (Astrology)  ವ್ಯಕ್ತಿಯ ಶೂ ಅಥವಾ ಚಪ್ಪಲ್ ಕಳ್ಳತನ ವಾಗುತ್ತಿದ್ದರೆ, ಆ ವ್ಯಕ್ತಿ ಶನಿಯ ಪ್ರಕೋಪಕ್ಕೆ ತುತ್ತಾಗಿದ್ದಾನೆ ಎಂಬುದರ ಮುನ್ಸೂಚನೆ. ಇದರಿಂದ ಪಾರಾಗಲು ಅಥವಾ ಶನಿಯ ಅಶುಭ ಪ್ರಭಾವದಿಂದ ಪಾರಾಗಲು ಉಪಾಯಗಳನ್ನು ಅನುಸರಿಸಿ.

3. ಕೆಟ್ಟ ಕನಸುಗಳು ಬೀಳುವುದು - ಒಂದು ವೇಳೆ ನಿತ್ಯ ನಿಮಗೆ ಕೆಟ್ಟ ಕನಸುಗಳು ಬೀಳಲು ಆರಂಭಿಸಿದರೆ, ಅದು ಮನೆಯಲ್ಲಿ ಜಗಳ ಅಥವಾ ಮನೆಯ ಸದಸ್ಯನಿಗೆ ಕೆಟ್ಟ ಕಾಲ ಬಂದೊದಗಲಿದೆ ಎಂಬುದರ ಸಂಕೇತವಾಗಿದೆ.

4. ಅನಾವಶ್ಯಕ ಹಾನಿ ಸಂಭವಿಸುವುದು - ಒಂದು ವೇಳೆ ಪದೇ ಪದೇ ನಿಮಗೆ ಅನಾವಶ್ಯಕ ಹಾನಿ ಸಂಭವಿಸುತ್ತಿದ್ದರೆ, ಬರಬೇಕಿರುವ ಹಣ ನಿಂತುಹೋದರೆ, ಎಲ್ಲಿಂದಲೂ ಯಾವುದೇ ರೀತಿಯ ಆದಾಯ ಬರುತ್ತಿಲ್ಲ ಎಂದಾದಲ್ಲಿ ನೀವು ಶನಿಯ ಕೆಟ್ಟ ಪ್ರಭಾವಕ್ಕೆ ಒಳಗಗಿದ್ದಿರಿ ಎಂದರ್ಥ. ಶನಿಯ ಕೆಟ್ಟ ಪ್ರಭಾವ ವ್ಯಕ್ತಿಯ ಧನಾಗಮನಕ್ಕೆ ಯಾವ ರೀತಿಯ ಪೆಟ್ಟು ನೀಡುತ್ತದೆ ಎಂದರೆ. ದಿನನಿತ್ಯದ ಖರ್ಚಿಗಾಗಿ ಕೂಡಿಟ್ಟ ಹಣದ ಸಹಾಯ ಪಡೆಯಬೇಕಾಗುವ ಕಾಲ ಬಂದೊದಗುತ್ತದೆ.

5. ಕಣ್ಣು ಹೊಡೆದುಕೊಳ್ಳುವುದು - ಮಹಿಳೆಯರ ಬಲಗಣ್ಣು ಅಥವಾ ಪುರುಷರ ಎಡಗಣ್ಣು ಹೊಡೆದುಕೊಳ್ಳುವುದು ಒಳ್ಳೆಯ ಸಂಕೇತವಲ್ಲ. ಇದು ಸಂಭವಿಸಿದಾಗ, ದೇವರನ್ನು ಪ್ರಾರ್ಥಿಸಿ ಮತ್ತು ಸಕಾರಾತ್ಮಕವಾಗಿ ಯೋಚಿಸಿ.

6. ಹಲ್ಲಿಗಳ ಕಾದಾಟ - ಹಳ್ಳಿಗಳ ಕಾದಾಟ ಕೂಡ ಕೆಟ್ಟ ಕಾಲ ಬರುವುದರ ಸಂಕೇತವಾಗಿದೆ. ಇದು ಸಂಭವಿಸುತ್ತಿದ್ದರೆ. ಹಲ್ಲಿಗಳನ್ನು ತಕ್ಷಣ ಪರಸ್ಪರ ಬೇರ್ಪಡಿಸಿ ಓಡಿಸಿ.

7. ನಶೆಯ ಅಭ್ಯಾಸ ಹೆಚ್ಚಾಗುವುದು - ಆಕಸ್ಮಿಕ ವಾಗಿ ವ್ಯಕ್ತಿಯ ನಶೆ ಮಾಡುವ ಪ್ರವೃತ್ತಿ ಹೆಚ್ಚಾದರೆ ಮತ್ತು ಒಳ್ಳೆಯದು ಮತ್ತು ಕೆಟ್ಟದ್ದು ಎಂಬ ಅರಿವು ಮರೆತುಹೋದರೆ, ಆ ವ್ಯಕ್ತಿಗೆ ಶೀಘ್ರದಲ್ಲಿಯೇ ಕೆಟ್ಟ ಕಾಲ ಬರಲಿದೆ ಎಂಬುದನ್ನು ಸಂಕೇತಿಸುತ್ತದೆ. ಹೀಗಿರುವಾಗ ಆ ವ್ಯಕ್ತಿ ಕಾಲ ಇರುವಾಗಲೇ ಎಚ್ಚೆತ್ತುಕೊಳ್ಳುವುದು ಉತ್ತಮ.

8. ನಿದ್ರೆ ಹಾರಿಹೊಗುವುದು - ಮನೆಯಲ್ಲಿ ಆಕಸ್ಮಿಕವಾಗಿ ಯಾವುದೇ ಸದಸ್ಯರೊಬ್ಬರ ನಿದ್ರೆ ಹಾರಿಹೋಗುವುದು ಕೂಡ ಒಂದು ಕೆಟ್ಟ ಕಾಲ ಬಂದೊದಗುವ ಸಂಕೇತ. ಹೀಗಿರುವಾಗ ನಿತ್ಯ ರಾತ್ರಿ ಹನುಮಾನ ಚಾಲಿಸಾ ಅಥವಾ ದೇವರ ಧ್ಯಾನ ಮಾಡಿ ಮಲಗಬೇಕು. 

ZEENEWS TRENDING STORIES

By continuing to use the site, you agree to the use of cookies. You can find out more by Tapping this link