ಚಿನ್ನದ ಪಕದ ತರುವಂತೆ ಪಿ.ವಿ.ಸಿಂಧುಗೆ ಆಲ್ ದಿ ಬೆಸ್ಟ್ ಹೇಳಿದ್ದ ಪುಟ್ಟ ಸೋದರಳಿಯ…
ಟೋಕಿಯೊ ಒಲಂಪಿಕ್ಸ್ ಗೆ ತೆರಳುತ್ತಿದ್ದ ಬ್ಯಾಡ್ಮಿಂಟನ್ ಸ್ಟಾರ್ ಪಿ.ವಿ.ಸಿಂಧು ಅವರಿಗೆ ಸೋದರಳಿಯ ಆರ್ಯನ್ ಶುಭ ಹಾರೈಸಿದ್ದರು. ಈ ಬಾರಿ ಚಿನ್ನದ ಪಕದ ಗೆದ್ದು ತರುವಂತೆ ಚಿಕ್ಕಮ್ಮನಿಗೆ ಆಲ್ ದಿ ಬೆಸ್ಟ್ ಅಂತಾ ಹೇಳಿದ್ದರು. ಭಾನುವಾರ ನಡೆದ ಪಂದ್ಯದಲ್ಲಿ ಚೀನಾದ ಆಟಗಾರ್ತಿಯನ್ನು ಸೋಲಿಸುವ ಮೂಲಕ ಸಿಂಧು ಕಂಚಿನ ಪದಕಕ್ಕೆ ಮುತ್ತಿಕ್ಕಿದ್ದಾರೆ.
ಪಿ.ವಿ.ಸಿಂಧು ತಮ್ಮ ಸೋದರಳಿಯನ ಜೊತೆಗಿರುವ ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದರು. ಟೋಕಿಯೊ ಒಲಂಪಿಕ್ಸ್ ನಲ್ಲಿ ಚಿನ್ನದ ಪಕದದ ನಿರೀಕ್ಷೆಯಲ್ಲಿದ್ದ ಸಿಂಧುಗೆ ನಿರಾಸೆಯುಂಟಾಗಿದೆ.
ಪಿ.ವಿ.ಸಿಂಧು ತನ್ನ ಸೋದರಳಿಯನಲ್ಲಿ ಜೊತೆಗೆ ಅತ್ಯುತ್ತಮ ಕ್ಷಣಗಳನ್ನು ಕಳೆದಿದ್ದಾರೆ. ಈ ಫೋಟೋ ಇಬ್ಬರ ನಡುವಿನ ಬಾಂಧವ್ಯವನ್ನು ತೋರಿಸುತ್ತದೆ.
ಇತ್ತೀಚೆಗಷ್ಟೇ ಪಿ.ವಿ.ಸಿಂಧು ಅವರ ಕ್ಯೂಟ್ ಕ್ಯೂಟ್ ಸೋದರಳಿಯನ ಹುಟ್ಟುಹಬ್ಬವನ್ನು ಕುಟುಂಬಸ್ಥರ ಸಮ್ಮುಖದಲ್ಲಿ ಆಚರಿಸಲಾಯಿತು. ಸೋದರಳಿಯನ 2ನೇ ಹುಟ್ಟುಹಬ್ಬಂದು ಸಿಂಧು ಅತ್ಯಂತ ಖುಷಿಯಾಗಿದ್ದರು.
ಸೋದರಳಿಯನ ಹುಟ್ಟುಹಬ್ಬದ ಸಂಭ್ರದಲ್ಲಿ ಪಿ.ವಿ.ಸಿಂಧು ಕುಟುಂಬ ಸದಸ್ಯರೆಲ್ಲರೂ ಭಾಗಿಯಾಗಿದ್ದರು. ಕುಟುಂಬ ಸದಸ್ಯರೆಲ್ಲ ಸೇರಿ ಒಟ್ಟಿಗೆ ಸಂತೋಷದ ಕ್ಷಣಗಳನ್ನು ಕಳೆದಿದ್ದರು.
‘ಲವ್ ಯು ಬೇಬಿ ಬೂ’ ಎಂದು ಪಿ.ವಿ.ಸಿಂಧು ತಮ್ಮ ಸೋದರಳಿಯನ ಹುಟ್ಟುಹಬ್ಬದ ಕೆಲ ಫೋಟೋಗಳನ್ನು ತಮ್ಮ ಸೋಷಿಯಲ್ ಮೀಡಿಯಾ ಖಾತೆಗಳಲ್ಲಿ ಹಂಚಿಕೊಂಡಿದ್ದರು.