ವರ್ಷಕ್ಕೆ ಒಂದೇ ಬಾರಿ ಸಿಗುವ ಈ ಹಣ್ಣು ಮಧುಮೇಹಕ್ಕೆ ಸಂಜೀವಿನಿ.. ಈ ಒಂದು ವಸ್ತು ಬೆರೆಸಿ ತಿಂದರೆ ಹೆಚ್ಚಾಗೋದೇ ಇಲ್ಲ ಬ್ಲಡ್ ಶುಗರ್ !
ಬೇಲದ ಹಣ್ಣು ಪೋಷಕಾಂಶಗಳು ಮತ್ತು ಜೀವಸತ್ವಗಳ ಆಗರವಾಗಿದೆ. ಇದು ವರ್ಷಕ್ಕೆ ಒಂದೇ ಬಾರಿ ಸಿಗುವುದರಿಂದ ತಪ್ಪದೇ ತಿನ್ನಬೇಕು. ಈ ಹಣ್ಣಿನ ಸಿಪ್ಪೆ ತುಂಬಾ ಗಟ್ಟಿಯಾಗಿರುತ್ತದೆ. ಬೇಲದ ಹಣ್ಣು ಸಿಹಿಯಾದ ನಾರಿನ ತಿರುಳನ್ನು ಹೊಂದಿರುತ್ತದೆ.
ಬೇಲದ ಹಣ್ಣಿನ ತಿರುಳನ್ನು ತೆಗೆದು ಇದಕ್ಕೆ ಬೆಲ್ಲ ಬೆರೆಸಿ ತಿಂದರೆ ರುಚಿ ಅದ್ಭುತವಾಗಿರುತ್ತದೆ. ಕೆಲವು ಇದರ ಪಾನಕ ಮಾಡಿ ಕುಡಿಯುತ್ತಾರೆ.
ಬೇಲದ ಹಣ್ಣಿನ ತಿರುಳು ತಿನ್ನುವುದು ಮಧುಮೇಹಿಗಳಿಗೆ ಸಾಕಷ್ಟು ಪ್ರಯೋಜನಕಾರಿಯಾಗಿದೆ.
ಹೊಟ್ಟೆಯ ಕರುಳನ್ನು ಸ್ವಚ್ಛಗೊಳಿಸಲು ಬೇಲದ ಹಣ್ಣು ಸಹಾಯ ಮಾಡುತ್ತದೆ. ಇದರ ತಿರುಳನ್ನು ಹಾಲು ಮತ್ತು ಸಕ್ಕರೆಯೊಂದಿಗೆ ಬೆರೆಸಿ ಸೇವಿಸಿದರೆ ಅಜೀರ್ಣತೆ ಕಡಿಮೆಯಾಗುವುದು.
ಹಸಿಯಾದ ಬೇಲದ ಹಣ್ಣುಗಳನ್ನು ಕತ್ತರಿಸಿ ಒಣಗಿಸಬೇಕು. ಬಿಸಿನೀರು ಮತ್ತು ಸಕ್ಕರೆ ದ್ರಾವಣದಲ್ಲಿ ಬೆರೆಸಿ ಇಡಬೇಕು. ಇದನ್ನು ದಿನಕ್ಕೊಮ್ಮೆ ತಿಂದರೆ ಅತಿಸಾರ ವಾಸಿಯಾಗುತ್ತದೆ.
ಬೇಲದ ಹಣ್ಣು ಸಾಕಷ್ಟು ಉತ್ಕರ್ಷಣ ನಿರೋಧಕಗಳನ್ನು ಹೊಂದಿರುತ್ತದೆ. ಇದರ ತಿರುಳನ್ನು ತಿನ್ನುವುದರಿಂದ ಬ್ಲಡ್ ಶುಗರ್ ಕಂಟ್ರೋಲ್‌ನಲ್ಲಿರುತ್ತದೆ.
ಸೂಚನೆ: ಪ್ರಿಯ ಓದುಗರೇ, ಈ ಲೇಖನವು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಇದನ್ನು ಖಚಿತಪಡಿಸುವುದಿಲ್ಲ. ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತಪ್ಪದೇ ತೆಗೆದುಕೊಳ್ಳಿ.