Bajaj Pulsar: ಹೊಸ ಲುಕ್‌ನಲ್ಲಿ ಬಿಡುಗಡೆಯಾದ ಪಲ್ಸರ್‌ನ ಹಳೆಯ ಮಾಡೆಲ್‌ಗಳು!

Sun, 16 Jun 2024-1:47 pm,

ಹೊಸ ಪಲ್ಸರ್ N160 ಸ್ಟೈಲಿಶ್, ಸ್ಪೋರ್ಟಿ ಬೈಕ್ ಹೊಸ ಡಿಸೈನ್‌ನೊಂದಿಗೆ ಎಲ್ಲರನ್ನು ತನ್ನತ್ತ ಸೆಳೆಯುವಂತೆ ಮಾಡಿದೆ. ನಿಖರ ನಿರ್ವಹಣೆ ಮತ್ತು ಸಾಟಿಯಿಲ್ಲದ ಸವಾರಿ ಅನುಭವಕ್ಕೆ ಈ ಹೊಸ ಪಲ್ಸರ್ N160 ಶಾಂಪೇನ್ ಗೋಲ್ಡ್ 33mm USD ಫೋರ್ಕ್‌ಗಳನ್ನು ಹೊಂದಿದೆ. ಇದು ರೈನ್, ರೋಡ್ ಮತ್ತು ಆಫ್, ರೋಡ್ ರೈಡ್ ಮೋಡ್‌ಗಳನ್ನು ಹೊಂದಿದೆ. ವಿವಿಧ ರೀತಿಯ ರಸ್ತೆ ಪರಿಸ್ಥಿತಿಗಳಲ್ಲಿ ಸವಾರರಿಗೆ ಗರಿಷ್ಠ ನಿಯಂತ್ರಣ ನೀಡಲು ಪ್ರತಿ ರೈಡ್ ಮೋಡ್‌ನಲ್ಲಿ ABS ಮಟ್ಟವನ್ನು ಹೊಂದುವಂತೆ ಮಾಡಲಾಗಿದೆ.

ಪ್ರಮಾಣಿತವಾಗಿ ರೋಡ್ ಮೋಡ್ ಹೊಂದಿಸಲಾಗಿದ್ದು, ಇದು ನಗರ ಅಥವಾ ಹೆದ್ದಾರಿಯಲ್ಲಿ ನಿಯಮಿತ ಸವಾರಿಗೆ ಸೂಕ್ತವಾಗಿರುತ್ತದೆ. ತೇವಾಂಶದ ರಸ್ತೆಗಳಿಗೆ ರೈನ್‌ಮೋಡ್ ಸೂಕ್ತವಾಗಿದ್ದು, ಜಾರು ಮೇಲ್ಮೈಗಳಲ್ಲಿ ಹೆಚ್ಚು ಆತ್ಮವಿಶ್ವಾಸ ಮತ್ತು ಸ್ಥಿರವಾದ ಬ್ರೇಕಿಂಗ್ ಅನ್ನು ಖಾತ್ರಿಗೊಳಿಸುತ್ತದೆ. ಆಫ್ ರೋಡ್ ಮೋಡ್ ಭೂಪ್ರದೇಶ ಮತ್ತು ರಸ್ತೆ ಪರಿಸ್ಥಿತಿಗಳಿಗೆ ಸೂಕ್ತವಾಗಿದ್ದು, ಒಟ್ಟಾರೆ ನಿರ್ವಹಣೆ ಅನುಭವಕ್ಕೆ ಉತ್ತಮ ನಿಯಂತ್ರಣ ನೀಡುತ್ತದೆ.

ಬಜಾಜ್‌ನ ಹೊಸ ಪಲ್ಸರ್ N160 ರೂಪಾಂತರವು 1,39,693 ರೂ. (ಎಕ್ಸ್ ಶೋರೂಂ) ಬೆಲೆಯಲ್ಲಿ ಖರೀದಿಗೆ ಸಿಗಲಿದೆ. ಇದು 164.82cc ಆಯಿಲ್ ಕೂಲ್ಡ್ ಎಂಜಿನ್‌ನಿಂದ ಚಾಲಿತವಾಗಿದ್ದು, 11.7 kW(16PS @8750rpm ವರೆಗೆ ಪವರ್ ನೀಡಲು ಟ್ಯೂನ್ ಮಾಡಲಾಗಿದೆ. ಬ್ರೇಕಿಂಗ್ ವಿಷಯಕ್ಕೆ ಬಂದರೆ ಎರಡೂ ತುದಿಗಳಲ್ಲಿ ಡಿಸ್ಕ್ ಬ್ರೇಕ್‌ ಜೊತೆಗೆ ಡ್ಯುಯಲ್-ಚಾನೆಲ್ ABS ನೀಡಲಾಗಿದೆ.

ಪಲ್ಸರ್ 125ರ ಕಾರ್ಬನ್ ಫೈಬರ್ ಸಿಂಗಲ್ ಮತ್ತು ಸ್ಪ್ಲಿಟ್ ಸೀಟ್ ರೂಪಾಂತರಗಳು ಈಗ ಸಂಪೂರ್ಣ ಡಿಜಿಟಲ್ ಬ್ಲೂಟೂತ್ ಕನ್ಸೋಲ್, USB ಚಾರ್ಜರ್ ಮತ್ತು ಹೊಸ ಗ್ರಾಫಿಕ್ಸ್‌ನೊಂದಿಗೆ ಬರುತ್ತವೆ. ಇದೇ ರೀತಿಯ ರೂಪಾಂತರದ ಆಯ್ಕೆಯು ಪಲ್ಸರ್ 150ನಲ್ಲಿಯೂ ಲಭ್ಯವಿದೆ. ವೈಶಿಷ್ಟ್ಯಗಳು ಮತ್ತು ರಿಫ್ರೆಶ್ ಮಾಡಿದ ಸ್ಟೈಲಿಂಗ್ 220Fಗೆ ಪ್ರಮಾಣಿತವಾಗಿದೆ.

ಹೊಸ ನವೀಕೃತ ಪಲ್ಸರ್ 125 ಕಾರ್ಬನ್ ಫೈಬರ್ ಸಿಂಗಲ್ ಸೀಟ್ ಬೆಲೆಯು 92,883 ರೂ., ಹೊಸ ನವೀಕೃತ ಪಲ್ಸರ್ 150 ಸಿಂಗಲ್ ಡಿಸ್ಕ್ ಬೆಲೆಯು 1,13,696 ರೂ. & ಹೊಸ ಪಲ್ಸರ್ 220 ಬೆಲೆಯು 1,41,024 ರೂ. ಇದೆ. ಇವೆಲ್ಲವು ದೆಹಲಿಯ ಎಕ್ಸ್‌ ಶೂರೂಂ ಬೆಲೆಗಳಾಗಿವೆ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link