Rajasthan Bala Quila: ಈ ಕೋಟೆಯ ಸುತ್ತ ಶ್ವೇತ ವರ್ಣದ ಅಲಂಕಾರ: ಸೌಂದರ್ಯಕ್ಕೆ ಮತ್ತೊಂದು ಹೆಸರು ಇದೇ ಇರಬೇಕು!

Sun, 08 Jan 2023-9:07 am,

ಬಾಲಾ ಕ್ವಿಲಾ ಅಲ್ವಾರ್ ನಗರದ ಬೆಟ್ಟದ ಮೇಲೆ ನೆಲೆಗೊಂಡಿದೆ. ಬೆಟ್ಟದ ಮೇಲೆ ನೆಲೆಸಿರುವುದರಿಂದ ಇಲ್ಲಿಂದ ಒಂದು ಸುಂದರ ನೋಟ ಗೋಚರಿಸುತ್ತದೆ. ಚಳಿಗಾಲದಲ್ಲಿ ಈ ಕೋಟೆಯ ಮೇಲೆ ಮಂಜು ಆವರಿಸಿಕೊಳ್ಳುತ್ತದೆ. ಈ ವೇಳೆ ಬಾಲಾ ಕೋಟೆಯ ಸೌಂದರ್ಯವನ್ನು ಹೆಚ್ಚಿಸಿದೆ.

ಅಲ್ವಾರ್ ನ ಬಾಲಾ ಕೋಟೆಯನ್ನು ಅಲ್ವಾರ್ ಕೋಟೆ ಎಂದೂ ಕರೆಯುತ್ತಾರೆ. ಇದಲ್ಲದೆ, ಇದನ್ನು ಕುನ್ವಾರ ಕಿಲಾ ಎಂದೂ ಕರೆಯುತ್ತಾರೆ. ಈ ಕೋಟೆಯ ಮೇಲೆ ಯಾವುದೇ ಯುದ್ಧ ನಡೆದಿಲ್ಲ ಎಂದು ಹೇಳಲಾಗುತ್ತದೆ.

ರಾಜಸ್ಥಾನದ ಅಲ್ವಾರ್ ನಗರವನ್ನು ನಿರ್ಮಿಸುವ ಮೊದಲೇ ಬಾಲಾ ಕೋಟೆಯನ್ನು ನಿರ್ಮಿಸಲಾಗಿದೆ. ಆದ್ದರಿಂದ ಇದನ್ನು ಇಲ್ಲಿ ಪರಂಪರೆ ಎಂದು ಪರಿಗಣಿಸಲಾಗಿದೆ. ಮೊಘಲರ ಜೊತೆಗೆ ಮರಾಠರು ಮತ್ತು ಜಾಟರು ಕೂಡ ಈ ಕೋಟೆಯನ್ನು ಆಳಿದ್ದಾರೆ.

ಬಾಲಾ ಕೋಟೆಯು 6 ಪ್ರವೇಶದ್ವಾರಗಳನ್ನು ಹೊಂದಿದೆ. ಇವುಗಳಿಗೆ ಸೂರಜ್ ಪೋಲ್, ಅಂಧೇರಿ ಗೇಟ್, ಚಾಂದ್ ಪೋಲ್, ಕೃಷ್ಣ ಪೋಲ್, ಲಕ್ಷ್ಮಣ್ ಪೋಲ್ ಮತ್ತು ಜೈ ಪೋಲ್ ಮುಂತಾದ ಆಡಳಿತಗಾರರ ಹೆಸರನ್ನು ಇಡಲಾಗಿದೆ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link