ಬೋಳು ತಲೆಯವರಿಗೆ ಕರೋನಾ ವೈರಸ್ ಅಪಾಯ ಹೆಚ್ಚು ..!
ತಜ್ಞರ ಪ್ರಕಾರ, ಯಾವ ಪುರುಷರಲ್ಲಿ ಹಾರ್ಮೋನ್ ಸೆನ್ಸೆಟಿವಿಟಿ ಲೆವೆಲ್ 22 ಕ್ಕಿಂತ ಹೆಚ್ಚಾಗಿರುತ್ತದೆಯೋ, ಅವರಿಗೆ ರೋಗದ ಅಪಾಯವೂ ಹೆಚ್ಚು ಎನ್ನಲಾಗಿದೆ. ಈ ಬಗ್ಗೆ ನಡೆಸಿರುವ ಅಧ್ಯಯನದಲ್ಲಿ 65 ಜನರನ್ನು ಸೇರಿಸಲಾಗಿತ್ತು.
ವರದಿಯ ಪ್ರಕಾರ, ಅಧ್ಯಯನಕ್ಕೆ ಒಳಪಟ್ಟವರ ಅನುವಂಶೀಯತೆ ಮತ್ತು ಡಿಎನ್ಎ ಸ್ಯಾಂಪಲ್ ಟೆಸ್ಟ್ ಮಾಡಲಾಗಿತ್ತು. ಅಲ್ಲದೆ ಬೋಳು ತಲೆಯ ಪ್ಯಾಟರ್ನ್ ಬಗ್ಗೆಯೂ ಅಧ್ಯಯನ ನಡೆಸಲಾಗಿತ್ತು. ಇದಕ್ಕೆ androgenetic alopecia ಎನ್ನುತ್ತಾರೆ. ಇದರ ಪ್ರಕಾರ ವಿಶ್ವದಲ್ಲಿ ಶೇ 50ರಷ್ಟು ಜನ 50 ವರ್ಷದ ಮೇಲೆ ಬೋಳು ತಲೆಯ ಸಮಸ್ಯೆಯನ್ನು ಎದುರಿಸುತ್ತಾರೆ. androgenetic alopeciaಗೆ ಒಳಗಾದವರಲ್ಲಿ ಆಂಟ್ರೋಜೆನ್ಸ್ ಪ್ರಮಾಣವೂ ಹೆಚ್ಚಾಗಿರುತ್ತದೆ.
ಅಧ್ಯಯನದ ಪ್ರಕಾರ, ಕರೋನಾ ರೋಗಿಗಳ ಚಿಕಿತ್ಸೆಗಾಗಿ ಇಲ್ಲಿ ಹೊಸ ಮಾರ್ಗವನ್ನು ಕಂಡು ಹಿಡಿಯಲಾಗಿದೆ. ಅಧ್ಯಯನ ತಂಡದ ಪ್ರಕಾರ, ಈ ಪ್ಯಾಟರ್ನ್ ಮೂಲಕ ಚಿಕಿತ್ಸೆ ಆರಂಭಿಸಿದರೆ, ಕರೋನಾ ಪ್ರಭಾವ ಕಡಿಮೆಯಾಗುವ ಸಾಧ್ಯತೆ ಹೆಚ್ಚಿದೆಯಂತೆ.
ಪುರುಷರಲ್ಲಿ ಬೋಳುತನವನ್ನು ಆಂಡ್ರೋಜನ್ ರಿಸೆಪ್ಟರ್ ಕಂಟ್ರೋಲ್ ಮಾಡುತ್ತದೆ. ಇದರಿಂದ ಯಾವ ವ್ಯಕ್ತಿಯ ದೇಹವು ಆಂಡ್ರೀಜೆನ್ಸ್ ಗೆ ಎಷ್ಟು ಸೆನ್ಸೆಟಿವ್ ಎಂದು ತಿಳಿಯುತ್ತದೆ. ಆಂಡ್ರೋಜೆನ್ಸ್ TMPRSS2 ಎಂಜಾಯಿಮ್ ಗೂ ಸಂಬಂಧವಿದೆ. ಇದು ಕರೋನ ವೈರಸ್ ಸಾಂಕ್ರಮಿಕದಲ್ಲಿ ಮಹತ್ವದ ಪಾತ್ರ ವಹಿಸುತ್ತದೆ.