ಬಾಳೆ ಹಣ್ಣಿನಿಂದ ಆರೋಗ್ಯಕ್ಕಿದೆ ಭರಪೂರ ಪ್ರಯೋಜನ
ನಿತ್ಯ ಬಾಳೆ ಹಣ್ಣನ್ನು ಸೀಮಿತ ಪ್ರಮಾಣದಲ್ಲಿ ಸೇವಿಸುವುದರಿಂದ ರಕ್ತದೊತ್ತಡವನ್ನು ನಿಯಂತ್ರಿಸಬಹುದು ಎಂದು ಹಲವು ಅಧ್ಯಯನಗಳಿಂದ ತಿಳಿದುಬಂದಿದೆ.
ಬಲಿಷ್ಠ ಮೂಳೆಗಳನ್ನು ಪಡೆಯಲು ದೇಹದಲ್ಲಿ ಮಿತ ಪ್ರಮಾಣದ ಪೊಟ್ಯಾಶಿಯಂ ಕೂಡ ಅಗತ್ಯ. ಬಾಳೆಹಣ್ಣುಗಳು ಪೊಟ್ಯಾಸಿಯಮ್ ಅನ್ನು ಹೊಂದಿರುತ್ತವೆ. ಹಾಗಾಗಿ, ಕೆಲವು ಸಂಶೋಧನೆಗಳ ಪ್ರಕಾರ, ಬಾಳೆಹಣ್ಣಿನ ಸೇವನೆಯಿಂದ ಮೂಳೆಗಳು ಬಲಗೊಳ್ಳುತ್ತವೆ ಎಂದು ಹೇಳಲಾಗಿದೆ.
ಬಾಳೆಹಣ್ಣು ಉತ್ತಮ ಎನರ್ಜಿ ಬೂಸ್ಟರ್ ಆಗಿಯೂ ಕೆಲ್ಸ ಮಾಡುತ್ತದೆ. ವಾಸ್ತವವಾಗಿ, ಬಾಳೆಹಣ್ಣಿನಲ್ಲಿ ಸಾಕಷ್ಟು ಪ್ರಮಾಣದ ಕರಗುವ ಫೈಬರ್, ಪೊಟ್ಯಾಸಿಯಮ್, ವಿಟಮಿನ್ಗಳು, ಸಕ್ಕರೆ ಮತ್ತು ಕಾರ್ಬೋಹೈಡ್ರೇಟ್ಗಳಿದ್ದು ಇದು ದೇಹದಲ್ಲಿ ಶಕ್ತಿಯ ಮಟ್ಟವನ್ನು ಸುಧಾರಿಸುತ್ತದೆ.
ಕೆಲವು ಅಧ್ಯಯನಗಳ ಪ್ರಕಾರ, ಪ್ರತಿದಿನ ಬಾಳೆಹಣ್ಣುಗಳನ್ನು ತಿನ್ನುವುದರಿಂದ ಕ್ರಮೇಣ ಕಣ್ಣುಗಳ ಆರೋಗ್ಯ ಸುಧಾರಿಸುತ್ತದೆ.
ಬಾಳೆಹಣ್ಣುಗಳು ಕರಗಬಲ್ಲ ಫೈಬರ್ ಮತ್ತು ಪೊಟ್ಯಾಸಿಯಮ್‌ನಿಂದ ತುಂಬಿರುವುದರಿಂದ ಇದು ಹೃದಯದ ಆರೋಗ್ಯವನ್ನು ಸುಧಾರಿಸುವಲ್ಲಿಯೂ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಹೇಳಲಾಗುತ್ತದೆ.
ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಇದನ್ನು Zee ಮೀಡಿಯಾ ಖಚಿತಪಡಿಸುವುದಿಲ್ಲ.