ಈ ಹಣ್ಣನ್ನು ಮೊಸರಿನಲ್ಲಿ ಬೆರೆಸಿ ತಿನ್ನಿ.. ಕೀಲುಗಳಲ್ಲಿ ಅಂಟಿದ ಯುರಿಕ್ ಆಸಿಡ್ ಕರಗಿ ಹೋಗುವುದು! ಕಿಡ್ನಿ ಸ್ಟೋನ್ ಕೂಡ ಹೊರಬರುವುದು
ಅಧಿಕ ಯುರಿಕ್ ಆಸಿಡ್ ಸಮಸ್ಯೆ ಸಂಧಿವಾತ ಮತ್ತು ಕಿಡ್ನಿ ಸ್ಟೋನ್‌ಗೂ ಕಾರಣವಾಗಬಹುದು. ಅಲ್ಲದೇ ಕೀಲುಗಳಲ್ಲಿ ನೋವು, ಊತ ಮತ್ತು ಬಿಗಿತವನ್ನು ಹೆಚ್ಚಿಸಬಹುದು. ಸರಿಯಾದ ಆಹಾರ ಮಾತ್ರ ಈ ಅಪಾಯದಿಂದ ನಿಮ್ಮನ್ನು ಪಾರು ಮಾಡುತ್ತದೆ.
ಬಾಳೆಹಣ್ಣಿನಲ್ಲಿ ಪ್ಯೂರಿನ್ ಬಹಳ ಕಡಿಮೆ ಪ್ರಮಾಣದಲ್ಲಿ ಕಂಡುಬರುತ್ತದೆ. ಪ್ರತಿದಿನ ಬಾಳೆಹಣ್ಣನ್ನು ಸೇವಿಸಬೇಕು. ಬಾಳೆಹಣ್ಣನ್ನು ಸೇವಿಸುವುದು ಅಧಿಕ ಯುರಿಕ್ ಆಸಿಡ್ ಸಮಸ್ಯೆಗೆ ಪರಿಹಾರ ನೀಡಬಹುದಾಗಿದೆ.
ಬಾಳೆಹಣ್ಣಿನಲ್ಲಿರುವ ಪೊಟ್ಯಾಸಿಯಮ್ ಮತ್ತು ಇತರ ಪೋಷಕಾಂಶಗಳು ಯುರಿಕ್ ಆಸಿಡ್‌ನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಪೊಟ್ಯಾಸಿಯಮ್ ಯೂರಿಕ್ ಆಸಿಡ್ ಸ್ಫಟಿಕಗಳ ರಚನೆಯನ್ನು ತಡೆಯುತ್ತದೆ. ಇದು ಮೂತ್ರದ ಮೂಲಕ ವಿಷವನ್ನು ತೆಗೆದುಹಾಕುತ್ತದೆ.
ಬಾಳೆಹಣ್ಣಿನಲ್ಲಿ ಫೈಬರ್ ಹೇರಳವಾಗಿ ಕಂಡುಬರುತ್ತದೆ. ಇದು ಪ್ಯೂರಿನ್‌ಗಳನ್ನು ಹೀರಿಕೊಳ್ಳುವ ಮೂಲಕ ಯೂರಿಕ್ ಆಮ್ಲವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಬಾಳೆಹಣ್ಣಿನಲ್ಲಿ ಉರಿಯೂತ ನಿವಾರಕ ಗುಣಗಳು ಕಂಡುಬರುತ್ತವೆ. ಸಂಧಿವಾತದ ನೋವು ಮತ್ತು ಊತವನ್ನು ನಿಯಂತ್ರಿಸುತ್ತದೆ.
ಮೊಸರಿನೊಂದಿಗೆ ಬಾಳೆಹಣ್ಣನ್ನು ಸೇವಿಸುವುದು ಯುರಿಕ್ ಆಸಿಡ್ ನಿಯಂತ್ರಣಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ. ಇದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಯುರಿಕ್ ಆಸಿಡ್ ಸಮಸ್ಯೆಯನ್ನು ಕ್ರಮೇಣ ನಿವಾರಿಸುತ್ತದೆ.
ಯುರಿಕ್ ಆಸಿಡ್ ನಿಯಂತ್ರಿಸಲು ಬಾಳೆಹಣ್ಣನ್ನು ಹಲವು ವಿಧಗಳಲ್ಲಿ ಸೇವಿಸಬಹುದು. ಇವುಗಳನ್ನು ಮೊಸರಿನ ಜೊತೆ ಸೇವಿಸುವುದು ತುಂಬಾ ಪ್ರಯೋಜನಕಾರಿ. ಕಡಿಮೆ ಕೊಬ್ಬಿನ ಮೊಸರಿನೊಂದಿಗೆ ಬಾಳೆಹಣ್ಣು ತಿನ್ನುವುದರಿಂದ ಪ್ಯೂರಿನ್ ಉತ್ಪತ್ತಿಯಾಗುವುದಿಲ್ಲ.
ಇದಲ್ಲದೆ ಬಾಳೆಹಣ್ಣನ್ನು ಹಾಲಿನ ಜೊತೆ ಬೆರೆಸಿ ತಿನ್ನಬಹುದು. ಅಥವಾ ಸ್ಮೂಥಿ ಮಾಡುವ ಮೂಲಕವೂ ಸೇವಿಸಬಹುದು.
ಸೂಚನೆ: ಈ ಲೇಖನವು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಇದನ್ನು ಖಚಿತಪಡಿಸುವುದಿಲ್ಲ. ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತಪ್ಪದೇ ತೆಗೆದುಕೊಳ್ಳಿ.