ಹಳದಿ ಹಲ್ಲನ್ನು ಬೆಳ್ಳಗಾಗಿಸಲು ಕೇವಲ ಬಾಳೆಹಣ್ಣಿನ ಸಿಪ್ಪೆಯಿದ್ದರೆ ಸಾಕು!
ಹಳದಿ ಹಲ್ಲುಗಳು ವ್ಯಕ್ತಿಯ ಆತ್ಮವಿಶ್ವಾಸವನ್ನೇ ಕುಗ್ಗಿಸುತ್ತದೆ. ಮಾತ್ರವಲ್ಲ, ದೀರ್ಘಾವಧಿಯಲ್ಲಿ ಇದು ನಾನಾ ರೀತಿಯ ಆರೋಗ್ಯ ಸಮಸ್ಯೆಗಳಿಗೂ ಕಾರಣವಾಗಬಹುದು.
ಕೆಲವರು ಹಲ್ಲನ್ನು ಬಿಳುಪಾಗಿಸಲು ಹೆಚ್ಚು ಬ್ರಶ್ ಮಾಡುತ್ತಾರೆ. ಆದರೂ, ಹಲ್ಲುಗಳಲ್ಲಿನ ಹಳದಿ ಕಲೆ ಹೋಗುವುದಿಲ್ಲ. ಆದರೆ, ಚಿಂತೆಬೇಡ. ಕೇವಲ ಬಾಳೆಹಣ್ಣಿನ ಸಿಪ್ಪೆ ಬಿಳುಪಾದ ಹಲ್ಲುಗಳನ್ನು ನೀಡಬಲ್ಲದು.
ಬಾಳೆಹಣ್ಣಿನ ಸಿಪ್ಪೆಯಲ್ಲಿ ಮೆಗ್ನೀಸಿಯಮ್ ಮತ್ತು ಪೊಟ್ಯಾಸಿಯಮ್‌ನಂತಹ ಖನಿಜಗಳಲ್ಲಿ ಸಮೃದ್ಧವಾಗಿದೆ. ಇದು ಹಲ್ಲುಗಳನ್ನು ಬೆಳ್ಳಗಾಗಿಸಲು ಪರಿಣಾಮಕಾರಿ ಆಗಿದೆ. ಆದರೆ, ಇದಕ್ಕಾಗಿ ಬಾಳೆಹಣ್ಣಿನ ಸಿಪ್ಪೆಯಲ್ಲಿ ಕೆಲವು ಪದಾರ್ಥಗಳನ್ನು ಮಿಶ್ರಣ ಮಾಡಬೇಕು.
ಅಡಿಗೆ ಸೋಡಾ ನೈಸರ್ಗಿಕ ಸ್ಕ್ರಬ್ಬರ್ ಆಗಿದೆ. ಇದು ಹಲ್ಲುಗಳಲ್ಲಿ ಕಲೆಗಳನ್ನು ನಿವಾರಿಸಲು ಸಹಾಯ ಮಾಡುತ್ತದೆ.
ಅಡಿಗೆ ಸೋಡಾಕ್ಕೆ ನೀರನ್ನು ಮಿಶ್ರಣ ಮಾಡಿ ಪೇಸ್ಟ್ ತಯಾರಿಸಿ ಇದನ್ನು ಬಾಳೆಹಣ್ಣಿನ ಸಿಪ್ಪೆಯಲ್ಲಿ ಬೆರೆಸಿ ಎರಡ್ಮೂರು ನಿಮಿಷ ಹಲ್ಲುಗಳಿಗೆ ಉಜ್ಜಿ ಬಾಯಿ ಮುಕ್ಕಳಿಸಿದರೆ ಹಳದಿ ಹಲ್ಲು ಬೆಳ್ಳಗಾಗುತ್ತದೆ.
ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.