ಭಾರತ ತಂಡದ ಆಟಗಾರರ ಬೆವರಿಳಿಸಿದ ಬಾಂಗ್ಲಾದೇಶದ ಬೌಲರ್! ರೋಹಿತ್, ಕೊಹ್ಲಿ, ಶುಭಮನ್ ಗಿಲ್ ವಿಕೆಟ್ ಪಡೆದು ಮಿಂಚಿದ ಈ 24 ವರ್ಷದ ವೇಗಿ ಯಾರು ಗೊತ್ತಾ?
ಸುದೀರ್ಘ ವಿರಾಮದ ಬಳಿಕ ಟೆಸ್ಟ್ ಕ್ರಿಕೆಟ್ ಪ್ರವೇಶಿಸಿರುವ ಭಾರತಕ್ಕೆ ನಿರೀಕ್ಷೆಯಂತೆ ಉತ್ತಮ ಆರಂಭ ಸಿಗಲಿಲ್ಲ. ಬಾಂಗ್ಲಾದೇಶ ವಿರುದ್ಧದ ಮೊದಲ ಟೆಸ್ಟ್ ಇಂದು ಚೆನ್ನೈನಲ್ಲಿ ಆರಂಭವಾಗಿದೆ. ಬಾಂಗ್ಲಾದೇಶ ಟಾಸ್ ಗೆದ್ದು ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿತ್ತು. ಇದರಿಂದ ಭಾರತ ತಂಡ ಮೊದಲ ಬ್ಯಾಟಿಂಗ್ ಮಾಡಬೇಕಾಗಿ ಬಂತು. ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಜೈಶ್ವಾಲ್ ಮತ್ತು ಗಿಲ್ ಅವರಂತಹ ಆಟಗಾರರನ್ನು ಹೊಂದಿರುವ ಭಾರತ ಉತ್ತಮ ಆರಂಭವನ್ನು ಪಡೆಯುತ್ತದೆ ಎಂದು ಎಲ್ಲರೂ ಭಾವಿಸಿದ್ದರು. ಆದರೆ ಮೊದಲ ಟೆಸ್ಟ್‌ನ ಮೊದಲ ಸೆಷನ್‌ನಲ್ಲಿ ಭಾರತ ಅನಿರೀಕ್ಷಿತವಾಗಿ 10 ಓವರ್‌ಗಳ ಅಂತ್ಯಕ್ಕೆ 3 ವಿಕೆಟ್‌ಗಳನ್ನು ಕಳೆದುಕೊಂಡಿದೆ. ನಾಯಕ ರೋಹಿತ್ ಶರ್ಮಾ, ಶುಭಮನ್ ಗಿಲ್ ಮತ್ತು ವಿರಾಟ್ ಕೊಹ್ಲಿ ಅವರ ವಿಕೆಟ್ ಉರುಳಿಸುವ ಮೂಲಕ ಬಾಂಗ್ಲಾದೇಶದ 24 ವರ್ಷದ ಬೌಲರ್ ಹಸನ್ ಮೊಹಮ್ಮದ್ ಸಿಕ್ಕಾಪಟ್ಟೆ ಸುದ್ದಿಯಲ್ಲಿದ್ದಾರೆ.
ನಾಯಕ ರೋಹಿತ್ ಶರ್ಮಾ 19 ಎಸೆತಗಳಲ್ಲಿ 6 ರನ್ ಗಳಿಸಿ ಔಟಾದರೆ, ಶುಭಮನ್ ಗಿಲ್ ಡಕ್ ಔಟ್ ಆದರು. ಸ್ಟಾರ್ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ 6 ಎಸೆತಗಳಲ್ಲಿ 6 ರನ್ ಗಳಿಸಿ ಔಟಾಗುವ ಮೂಲಕ ತಮ್ಮ ವಿಕೆಟ್ ಒಪ್ಪಿಸಿ ಫೀಲ್ಡ್‌ನಿಂದ ಹೊರ ನಡೆದಿದ್ದಾರೆ. ಅಚ್ಚರಿ ಏನೆಂದರೆ ಈ ಮೂವರು ಸ್ಟಾರ್ ಆಟಗಾರರು ಕೇವಲ ಒಂದು ಬೌಲರ್‌ಗೆ ತಮ್ಮ ವಿಕೆಟ್‌ಗಳನ್ನು ಒಪ್ಪಿಸಿದ್ದಾರೆ.
24 ವರ್ಷದ ಹಸನ್ ಮಹಮೂದ್ ತಮ್ಮ ವೇಗದ ಬೌಲಿಂಗ್‌ನಿಂದ ಈ ಮೂವರ ವಿಕೆಟ್‌ಗಳನ್ನು ಉರುಳಿಸಿದ್ದಾರೆ. ಈ ಮೂವರೂ ಪೆವಿಲಿಯನ್ ಗೆ ಕ್ಯಾಚ್ ನೀಡಿ ಔಟಾಗಿದ್ದಾರೆ. ಇದರಿಂದಾಗಿ ಭಾರತ 34 ರನ್ ಗಳಿಗೆ 3 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದೆ.
24 ವರ್ಷದ ಹಸನ್ ಮೊಹಮ್ಮದ್ ತಮ್ಮ ವೇಗದ ಬೌಲಿಂಗ್ ಮೂಲಕ ತಂಡದ ಪ್ರಮುಖ ಆಟಗಾರನಾಗಿ ಹೊರಹೊಮ್ಮುತ್ತಿದ್ದಾರೆ. ಚೆಂಡನ್ನು ಸ್ವಿಂಗ್ ಮಾಡುವ ಕೌಶಲಕ್ಕೆ ಹೆಸರಾದ ಈ ವೇಗಿ ತಮ್ಮ ಅವಧಿಯಲ್ಲಿ ತಂಡದಲ್ಲಿ ಸ್ಥಿರ ಸ್ಥಾನ ಗಳಿಸಿದ್ದರು.
20 ನೇ ವಯಸ್ಸಿನಲ್ಲಿ 2020 ರಲ್ಲಿ ಬಾಂಗ್ಲಾದೇಶಕ್ಕೆ ಪಾದಾರ್ಪಣೆ ಮಾಡಿದರು. ಆ ಬಳಿಕ ಏಕದಿನ ಹಾಗೂ ಟೆಸ್ಟ್ ತಂಡವನ್ನೂ ಸೇರಿಕೊಂಡರು. ಈ ವರ್ಷದ ಮಾರ್ಚ್‌ನಲ್ಲಿ ಶ್ರೀಲಂಕಾ ವಿರುದ್ಧದ ಟೆಸ್ಟ್ ಸರಣಿಯೊಂದಿಗೆ ಅವರು ಸುದೀರ್ಘ ಸ್ವರೂಪಕ್ಕೆ ಪ್ರವೇಶಿಸಿದರು.
ಇದುವರೆಗೆ ಬಾಂಗ್ಲಾದೇಶ ಪರ 22 ಏಕದಿನ, 18 ಟಿ20 ಹಾಗೂ 3 ಟೆಸ್ಟ್ ಪಂದ್ಯಗಳನ್ನು ಆಡಿರುವ ಅವರು, ಟೆಸ್ಟ್‌ನಲ್ಲಿ 14 ವಿಕೆಟ್ ಪಡೆದಿದ್ದಾರೆ.
ಇನ್ನೂ ಈ ಯುವ ವೇಗಿ 30 ಮತ್ತು ಟಿ20ಯಲ್ಲಿ 18 ವಿಕೆಟ್ ಪಡೆದಿದ್ದಾರೆ. ಅವರ ಅದ್ಭುತ ಪ್ರದರ್ಶನದಿಂದಾಗಿ ಅವರು 2024 ರ T20 ವಿಶ್ವಕಪ್‌ಗೆ ಮೀಸಲು ಆಟಗಾರರಾಗಿ ಆಯ್ಕೆಯಾದರು. ಅದರಲ್ಲೂ ಬಾಂಗ್ಲಾದೇಶ ತಂಡ ಪಾಕಿಸ್ತಾನ ವಿರುದ್ಧದ ಮೊದಲ ಟೆಸ್ಟ್ ಸರಣಿ ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.
ಎರಡನೇ ಇನ್ನಿಂಗ್ಸ್‌ನಲ್ಲಿ ಅವರು 5 ವಿಕೆಟ್ ಪಡೆದ ಕಾರಣ ಪಾಕಿಸ್ತಾನ 172 ರನ್‌ಗಳಿಗೆ ಕುಸಿಯಿತು. ಅಂತರಾಷ್ಟ್ರೀಯ ಕ್ರಿಕೆಟ್ ಗೆ ಕಾಲಿಟ್ಟ ಕೆಲವೇ ದಿನಗಳಲ್ಲಿ ಪ್ರಮುಖ ಆಟಗಾರ ಎನಿಸಿಕೊಂಡಿರುವ ಹಸನ್ ಬಾಂಗ್ಲಾದೇಶದ ಭವಿಷ್ಯದ ಭರವಸೆಯ ಕಿರಣದಂತೆ ಕಾಣುತ್ತಿದ್ದಾರೆ.