Bank fraud : ಸೂಕ್ತ ಸಮಯದಲ್ಲಿ ಈ ಕೆಲಸ ಮಾಡಿದ್ರೆ ಸಿಗಲಿದೆ refund
ಬ್ಯಾಂಕ್ ಫ್ರಾಡ್ ಆದ ತಕ್ಷಣ ದೂರು ಸಲ್ಲಿಸುವುದರ ಮೂಲಕ ಮರುಪಾವತಿ ಪಡೆಯುವುದು ಸಾಧ್ಯವಾಗುತ್ತದೆ. ಎಷ್ಟು ಬೇಗ ದೂರು ಸಲ್ಲಿಸಲಾಗುತ್ತದೆ ಅಷ್ಟು ಬೇಗ ಮರುಪಾವತಿ ಪಡೆಯುವುದು ಸುಲಭವಾಗುತ್ತದೆ. ಬ್ಯಾಂಕ್ ಫ್ರುಡ್ ಗೆ ಗುರಿಯಾದರೆ ಮರುಪಾವತಿ ಪಡೆಯುವುದು ಅಷ್ಟೊಂದು ಸುಲಭವಲ್ಲ. ಆದ್ರೆ ಸೂಕ್ತ ಸಮಯದಲ್ಲಿ ಕ್ರಮ ಕೈಗೊಂಡರೆ ಮರುಪಾವತಿಯ ಸಂಭವ ಹೆಚ್ಚಾಗಿರುತ್ತದೆ.
ಬ್ಯಾಂಕಿನ ಅಧಿಕೃತ ಕಸ್ಟಮರ್ ಕೇರ್ ನಂಬರ್ ಮತ್ತು ರಿಜಿಸ್ಟರ್ಡ್ e mail id ಮೂಲಕ ಬ್ಯಾಂಕ್ ಫ್ರಾಡ್ ನ ದೂರು ದಾಖಲಿಸಬಹುದು.ಇದಲ್ಲದೆ, ಬ್ಯಾಂಕ್ ಗೆ ಭೇಟಿ ನೀಡುವ ಮೂಲಕ ಕೂಡ ಫ್ರಾಡ್ ಆಗಿರುವ ಬಗ್ಗೆ ದೂರು ಸಲ್ಲಿಸಬಹುದು.
RBI ಮಾರ್ಗಸೂಚಿಯ ಪ್ರಕಾರ ಮೋಸ ಹೋದ 72 ಗಂಟೆಗಳ ಒಳಗೆ ದೂರು ಸಲ್ಲಿಸುವುದು ಅನಿವಾರ್ಯ. ಸಮಯ ಹೆಚ್ಚಾದಂತೆ ಪ್ರಕರಣವನ್ನು ಭೇದಿಸುವುದು ಕಷ್ಟವಾಗುತದೆ. ಯಾಕೆಂದರೆ ಮೋಸ್ ಮಾಡಿದ ವ್ಯಕ್ತಿ ಸಾಕ್ಷಿಯನ್ನು ನಾಶಪಡಿಸುತ್ತಾನೆ.
ಸರಿಯಾದ ಸಮಯದಲ್ಲಿ ದೂರು ದಾಖಲಿಸಿದರೆ 10 ದಿನಗಳ್ಳಲ್ಲಿ ಮರುಪಾವತಿ ಸಾಧ್ಯವಾಗುತ್ತದೆ. ಇದಕ್ಕ್ಕಾಗಿ ಗ್ರಾಹಕರಿಗೆ ಹಣ ಕಡಿತವಾಗಿರುವ ಮೆಸೇಜ್ , ಮೋಸ್ ಮಾಡಲಾಗಿರುವ ಲಿಂಕ್ , ಕಾಲ್ ರೆಕಾರ್ಡಿಂಗ್ ಇವುಗಳನ್ನ ದೂರಿನಲ್ಲಿ ಸಲ್ಲಿಸಬೇಕಗುತ್ತದೆ.
ಹೆಚ್ಚಿನ ಬ್ಯಾಂಕುಗಳು ಬ್ಯಾಂಕ್ ವಂಚನೆಯ ವಿರುದ್ಧ ವಿಮೆಯನ್ನು ನೀಡುತ್ತದೆ. ಮೋಸದಿಂದ ನಷ್ಟವಾದ ಸಂದರ್ಭದಲ್ಲಿ, ವಿಮೆಯ ಮೊತ್ತದೊಂದಿಗೆ ಮರುಪಾವತಿ ಮಾಡಲಾಗುತ್ತದೆ. ಆದರೆ, 3 ದಿನಗಳ ನಂತರ ದೂರು ನೀಡಿದರೆ, ಗ್ರಾಹಕರು 25 ಸಾವಿರ ರೂ.ಗಳ ನಷ್ಟವನ್ನು ಭರಿಸಬೇಕಾಗಬಹುದು.
ಇಂದಿನ ಯುಗದಲ್ಲಿ, ಹೆಚ್ಚುತ್ತಿರುವ ಸೈಬರ್ ಅಪರಾಧ ಪ್ರಕರಣಗಳಿಂದಾಗಿ, ವಿಮಾ ಕಂಪನಿ ಬ್ಯಾಂಕ್ ವಂಚನೆಯ ಪ್ರಕರಣಗಳಿಗೂ ವಿಮೆ ಮಾಡುತ್ತದೆ. ನೀವು ಸಹ ಈ ವಿಮೆಯನ್ನು ತೆಗೆದುಕೊಳ್ಳುವ ಮೂಲಕ ನಷ್ಟದಿಂದ ತಪ್ಪಿಸಿಕೊಳ್ಳಬಹುದು.
ಕೆಲವೊಮ್ಮೆ ಬ್ಯಾಂಕ್ ಗ್ರಾಹಕರಿಂದ ಹೆಚ್ಚಿನ ಹಣವನ್ನು ಕಡಿತಗೊಳಿಸಿರುವ ಪ್ರಕರಣಗಳು ಕೇಳಿ ಬರುತ್ತವೆ. ಈ ಸಂದರ್ಭದಲ್ಲಿ ದೂರನ್ನು ಸಲ್ಲಿಸಲಾದರೂ ಯಾವ ಕ್ರಮವನ್ನು ತೆಗೆದುಕೊಳ್ಳುವುದಿಲ್ಲ. ಇಂಥ ಸಂಧರ್ಭ ಬ್ಯಾಂಕ್ ಲೋಕ್ಪಾಲ್ ಮೂಲಕ ದೂರು ದಾಖಲಿಸಬಹುದು.
ಬ್ಯಾಂಕ್ ವಂಚನೆಯ ಬಗ್ಗೆ ಪೊಲೀಸರಿಗೆ ದೂರು ನೀಡಿ. ದೊಡ್ಡ ನಗರಗಳಲ್ಲಿ ಸೈಬರ್ ಅಪರಾಧ ಪ್ರಕರಣಗಳಿಗೆ ಪ್ರತ್ಯೇಕ ದೂರುಗಳನ್ನು ನೀಡಲಾಗುತ್ತದೆ. ಅಲ್ಲಿ ದೂರು ನೀಡಿ. ಸಣ್ಣ ಪಟ್ಟಣದಲ್ಲಿ ಈ ಘಟನೆ ಸಂಭವಿಸಿದಲ್ಲಿಯೂ ಪೊಲೀಸರಿಗೆ ದೂರು ಸಲ್ಲಿಸಿ.
ಸೈಬರ್ ಕ್ರೈಂ ನಲ್ಲಿ ಹೆಚ್ಚಾಗಿ ಗ್ರಾಹಕರ ಬೇಜವಾಬ್ದಾರಿಯೇ ಕಂಡು ಬರುತ್ತದೆ. ಮೋಸ ಮಾಡುವವರಿಗೆ ಗ್ರಾಹಕರು ಸುಲಭವಾಗಿ ಎಲ್ಲಾ ದಾಖಲೆಗಳನ್ನು ಒದಗಿಸುತಾರೆ . ನೆನೆಪಿಡಿ ಯಾವುದೇ ಕಾರಣಕ್ಕೂ ಬ್ಯಾಂಕ್ ಗ್ರಾಹಕರ ಸಿವಿವಿ ಮತ್ತು ಒಟಿಪಿ ಕೇಳುವುದಿಲ್ಲ.
ಕೆಲವೊಮ್ಮೆ ಲಿಂಕ್ ಮೂಲಕವೂ ಪೇಮೆಂಟ್ ಮಾಡಿಸುವ ಮೂಲಕ ಮೋಸ್ ಮಾಡಲಾಗುತ್ತದೆ. ಯಾವುದೇ ಲಿಂಕ್ ಮೇಲೆ ಕ್ಲಿಕ್ ಮಾಡುವ ಮುನ್ನ ಸರಿಯಾಗಿ ಪರಿಶೀಲಿಸಿ ಕೊಳ್ಳಿ.