ಯೌವನದಿಂದ ಇರಲು ಸ್ವಂತ ಮಗನ ʼಆ ದ್ರವʼವನ್ನೇ ಬಳಸಿಕೊಂಡ ತಾಯಿ..! ಇಂತವರೂ ಇರ್ತಾರಾ ಗುರು..
ಲಾಸ್ ಏಂಜಲೀಸ್‌ನ ಮಹಿಳೆಯೊಬ್ಬಳು ಸದಾ ಯೌವನವಾಗಿರಲು ತನ್ನ ಮಗನ ರಕ್ತವನ್ನು ವರ್ಗಾವಣೆ ಮಾಡಿಕೊಳ್ಳಲು ಮುಂದಾಗಿದ್ದಾರೆ ಎಂದು ವರದಿಯಾಗಿದೆ. ಅದೇನೆಂದರೆ ಮಗನ ರಕ್ತವನ್ನು ತನ್ನ ದೇಹಕ್ಕೆ ವರ್ಗಾವಾಣೆ ಮಾಡಿಸಿಕೊಳ್ಳುವುದಾಗಿ ಹೇಳಿದ್ದಾರೆ.
ಹೌದು.. ಮಹಿಳೆಯರು ತಮ್ಮ ತ್ವಚೆಯನ್ನು ಯೌವನವಾಗಿ ಕಾಣುವಂತೆ ಮತ್ತು ಹೊಳೆಯುವಂತೆ ಮಾಡಲು ಹೆಚ್ಚಿನ ಪ್ರಯತ್ನ ಮಾಡುತ್ತಾರೆ. ಅಂಗಡಿಗಳಲ್ಲಿ ಮಾರಾಟವಾಗುವ ಕ್ರೀಮ್ ಗಳನ್ನು ಬಳಸಿ ತ್ವಚೆಯ ಆರೈಕೆ ಮಾಡುತ್ತಾರೆ. ಇದಲ್ಲದೇ ಮುಖದ ಸೌಂದರ್ಯ ಚಿಕಿತ್ಸೆಯನ್ನೂ ಮಾಡುತ್ತಿದ್ದಾರೆ.
ಆದರೆ ಈ ಮಹಿಳೆ ಯೌವನ ಕಾಯ್ದುಕೊಳ್ಳಲು ತನ್ನ ಸ್ವಂತ ಮಗನ ರಕ್ತವನ್ನು ಬಳಸಿಕೊಳ್ಳುವುದಾಗಿ ಹೇಳಿದ್ದಾರೆ. ದೇಹವನ್ನು ಯೌವನ ಮತ್ತು ಕಾಂತಿಯುತವಾಗಿರಿಸಲು ರಕ್ತವನ್ನು ಬಳಸಬಹುದು ಎಂದು ವರದಿಯಾಗಿದೆ.
47 ವರ್ಷದ ಮಾರ್ಸೆಲಾ ಇಗ್ಲೇಷಿಯಾ ಲಾಸ್ ಏಂಜಲೀಸ್‌ನಲ್ಲಿ ವಾಸಿಸುತ್ತಿದ್ದಾರೆ. ಈಕೆ ತಮ್ಮ ಚರ್ಮ ಮತ್ತು ಸೌಂದರ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸುತ್ತಾರೆ. ಇದುವರೆಗೆ ಅವರು ಮೇಕಪ್‌ಗಾಗಿ $99,000 ವರೆಗೆ ಖರ್ಚು ಮಾಡಿದ್ದಾರೆ ಎಂದು ಹೇಳಲಾಗುತ್ತದೆ. ಅಲ್ಲದೆ, ಅವರು ತಮ್ಮ ದೇಹವನ್ನು ಆಕಾರದಲ್ಲಿಡಲು ಪ್ರತಿದಿನ ಒಂದು ಗಂಟೆ ವ್ಯಾಯಾಮ ಮತ್ತು ಎಂಟು ಗಂಟೆಗಳ ನಿದ್ರೆ ಮಾಡುತ್ತಾರಂತೆ.
ಅಲ್ಲದೆ, ಸಕ್ಕರೆ ಪಾನೀಯಗಳು, ಸೋಯಾ ಉತ್ಪನ್ನಗಳು ಅಥವಾ ಆಲ್ಕೋಹಾಲ್ ಸೇವಿಸುವುದಿಲ್ಲ, ಮೀನು ಮಾತ್ರ ತಿನ್ನುತ್ತಿದ್ದಾರೆ. ಸೌಂದರ್ಯಕ್ಕಾಗಿ ವಿಟಮಿನ್ ಚುಚ್ಚುಮದ್ದು ಸೇರಿದಂತೆ ವಿವಿಧ ಚರ್ಮದ ಚಿಕಿತ್ಸೆಗಳಿಗೆ $1,000 ಕ್ಕಿಂತ ಹೆಚ್ಚು ಖರ್ಚು ಮಾಡುತ್ತಾರೆ.
ಇದೀಗ ಚರ್ಮದ ಆರೈಕೆಯನ್ನು ತೀವ್ರವಾಗಿ ತೆಗೆದುಕೊಳ್ಳುತ್ತಿರುವ ಮಾರ್ಸೆಲಾ ಇಗ್ಲೇಷಿಯಾ ಈಗ ಹೊಸ ಹಾದಿ ಬಳಸುತ್ತಿದ್ದಾರೆ. ಬೇರೆ ರೀತಿಯಲ್ಲಿ ಹೇಳುವುದಾದರೆ, ಅವಳು ಯೌವನವಾಗಿರಲು ತನ್ನ 23 ವರ್ಷದ ಮಗ ರೊಡ್ರಿಗೋ ರಕ್ತವನ್ನು ತನ್ನ ದೇಹಕ್ಕೆ ವರ್ಗಾವಣೆ ಮಾಡಿಸಿಕೊಳ್ಳಲು ಮುಂದಾಗಿದ್ದಾಳೆ..
ರಕ್ತ ವರ್ಗಾವಣೆ ಸಾಧ್ಯವೇ? : ಸೌಂದರ್ಯವನ್ನು ಕಾಪಾಡಿಕೊಳ್ಳಲು ನಾನು ರಕ್ತ ವರ್ಗಾವಣೆಗೆ ಒಳಗಾಗುತ್ತೇನೆ ಎಂದು ಮಾರ್ಸೆಲಾ ಹೇಳಿದರು. ನನ್ನ ಮಗ ನನಗೆ ರಕ್ತ ಕೊಡಲಿದ್ದಾನೆ. ಈ ಚಿಕಿತ್ಸೆಯನ್ನು ಮಾಡಲು ನಾನು ಪ್ರಸ್ತುತ ಲಾಸ್ ಏಂಜಲೀಸ್‌ನಲ್ಲಿ ವೈದ್ಯರನ್ನು ಹುಡುಕುತ್ತಿದ್ದೇನೆ ಎಂದು ಹೇಳಿದ್ದಾರೆ..
ರಕ್ತ ವರ್ಗಾವಣೆ.. ಇದು ಒಂದು ದೇಹದಿಂದ ಮತ್ತೊಂದು ದೇಹಕ್ಕೆ ಕೆಂಪು ರಕ್ತ ಕಣಗಳ ವರ್ಗಾವಣೆಯಾಗಿದೆ. ಅಲ್ಲದೆ ಐವಿ ಇಂಜೆಕ್ಷನ್ ಮೂಲಕ ರಕ್ತ ನೀಡಲಾಗುವುದು ಎಂದು ಹೇಳಲಾಗಿದೆ. ರಕ್ತವನ್ನು ದೇಹಕ್ಕೆ ಚುಚ್ಚಲು ಕನಿಷ್ಠ 5 ಗಂಟೆಗಳು ಬೇಕಾಗಬಹುದು ಎಂದು ಹೇಳಲಾಗುತ್ತದೆ.
ಫುಡ್ ಅಂಡ್ ಡ್ರಗ್ ಅಡ್ಮಿನಿಸ್ಟ್ರೇಷನ್ 2019 ರಲ್ಲಿ ರಕ್ತ ವರ್ಗಾವಣೆಯು ಅನೇಕ ಸಮಸ್ಯೆಗಳನ್ನು ಉಂಟುಮಾಡಬಹುದು ಎಂದು ವರದಿ ಮಾಡಿದೆ. ಖಿನ್ನತೆ, ಜ್ಞಾಪಕ ಶಕ್ತಿ ನಷ್ಟ, ಪಾರ್ಕಿನ್ಸನ್ ಕಾಯಿಲೆ, ಆಲ್ಝೈಮರ್ ಕಾಯಿಲೆ, ಹೃದ್ರೋಗ ಇತ್ಯಾದಿಗಳು ಬರುತ್ತವೆ ಎಂದು ಹೇಳಲಾಗುತ್ತದೆ.