ಈ ನೀರು ಅಮೃತ್ತಕ್ಕಿಂತಲೂ ಮಿಗಿಲು.. ಮಧುಮೇಹಕ್ಕೆ ಬೆಸ್ಟ್ ಮನೆಮದ್ದು.. ಇದನ್ನು ಸೇವಿಸುವುದರಿಂದ ಕ್ಷಣಾರ್ಧದಲ್ಲೆ ಕಂಟ್ರೋಲ್‌ಗೆ ಬರುತ್ತೆ ಬ್ಲಡ್ ಶುಗರ್..!
Barley water: ಬಾರ್ಲಿ ನೀರು ಹಲವಾರು ಪೋಷಕಾಂಶಗಳನ್ನು ಒಳಗೊಂಡಿದೆ, ಇದೇ ಕಾರಣದಿಂದ ಇದನ್ನು ಬಡವರ ಅಮೃತ ಎಂದು ಕರೆಯಲಾಗುತ್ತದೆ. ಇದರಲ್ಲಿರುವ ಅಂಶಗಳು ಬ್ಲಡ್ ಶುಗರ್ ಅನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಅಷ್ಟೆ ಅಲ್ಲ ನಿಮ್ಮ ಶುಗರ್ ಅನ್ನು ಕಂಟ್ರೋಲ್‌ನಲ್ಲಿಡುವಲ್ಲಿ ಸಹಾಯ ಮಾಡುತ್ತದೆ.
ಇತ್ತೀಚಿನ ಜೀವನಶೈಲಿಯ ಕಾರಣ ಜನರು ಹಲವಾರು ಆರೋಗ್ಯ ಸಮಸ್ಯೆಗಲಿಗೆ ತುತ್ತಾಗುತ್ತಿದ್ದಾರೆ. ಇದರಿಂದ ಹಲವು ಔಷಧಿಗಳು ಹಾಗೂ ಮನೆಮದ್ದುಗಳ ಮೊರೆ ಹೋಗುತ್ತಾರೆ. ಸಾಮಾನ್ಯವಾಗಿ ಇತ್ತೀಚಿನ ದಿನಗಳಲ್ಲಿ ಜನರನ್ನು ಕಾಡುತ್ತಿರುವ ಸಮಸ್ಯೆ ಎಂದರೆ ಮಧುಮೇಹ. ಈ ರೋಗ ಜನರನ್ನು ವಯಸ್ಸಿನ ಭೇದವಿಲ್ಲದೆ ಕಾಡಲು ಆರಂಭಿಸಿದೆ, ಈ ರೋಗವನ್ನು ಸಾಮಾನ್ಯವಾಗಿ ತೆಗೆದುಕೊಂಡರೆ, ಮುಂದೆ ಶುಗರ್ ಜಾಸ್ತಿಯಾಗುವುದರಿಂದ ಹೃದಯ ಕಾಯಿಲೆ ಹಾಗೂ ಕಿಡ್ನಿ ಪೇಲ್ಯೂರ್‌ನಂತಹ ಆರೋಗ್ಯ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.
ಮಧುಮೇಹವನ್ನು ಕಂಟ್ರೋಲ್‌ನಲ್ಲಿಡಲು ಬಾರ್ಲಿ ನೀರು ತುಂಬಾ ಉತ್ತಮ. ಇದು ಹೆಚ್ಚಿನ ಫೈಬರ್ ಹಾಗೂ ಆಂಟಿಆಕ್ಸಿಡೆಂಟ್‌ಗಳಿಂದ ಕೂಡಿದ್ದು, ನಿಮ್ಮ ದೇಹದಲ್ಲಿನ ಶುಗರ್ ಅನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.ಗ್ಯಾಸ್-ಹಾರ್ಟ್ ಬರ್ನ್ ಮತ್ತು ನಿರ್ಜಲೀಕರಣ ಸಮಸ್ಯೆಯಿಂದ ಬಳಲುತ್ತಿರುವವರು ನಿಯಮಿತವಾಗಿ ಈ ಬಾರ್ಲಿ ನೀರನ್ನು ಕುಡಿಯುವುದರಿಂದ ನಿಮ್ಮ ಆರೋಗ್ಯವನ್ನು ನೀವು ಸುಧಾರಣೆ ಮಾಡಬಹುದು. ಈ ಡಿಟಾಕ್ಸ್ ಪಾನೀಯವು ಬಿಸಿ ವಾತಾವರಣದಲ್ಲೂ ದೇಹವನ್ನು ತಂಪಾಗಿಡಲು ಸಹಾಯ ಮಾಡುತ್ತದೆ.
ಬಾರ್ಲಿ ನೀರನ್ನು ಕುಡಿಯುವುದರಿಂದ ದೇಹದಲ್ಲಿರುವ ಎಲ್ಲಾ ತ್ಯಾಜ್ಯಗಳನ್ನು ಹೊರಹಾಕುತ್ತದೆ ಹಾಗೂ ಕಿಡ್ನಿಗಲನ್ನು ಶುದ್ಧವಾಗಿಸುತ್ತದೆ. ಇದು, ಯಾವುದೇ ತ್ಯಾಜವನ್ನು ದೇಹದಲ್ಲಿ ಸಂಗ್ರಹಿಸಲು ಬಿಡುವುದಿಲ್ಲ. ಇದು ಮೂತ್ರಪಿಂಡದ ಕಲ್ಲುಗಳು ಮತ್ತು ಸೋಂಕಿನ ಅಪಾಯವನ್ನು ಕಡಿಮೆ ಮಾಡುತ್ತದೆ. ಬಾರ್ಲಿಯಲ್ಲಿರುವ ಆಂಟಿಆಕ್ಸಿಡೆಂಟ್‌ಗಳು ದೇಹವನ್ನು ವಿವಿಧ ರೋಗಗಳಿಂದ ರಕ್ಷಿಸುತ್ತದೆ.
ಜಿಮ್‌ಗೆ ಹೋಗುವವರು ಬೆಳಿಗ್ಗೆ ಮತ್ತು ಮಧ್ಯಾಹ್ನ ನಿಯಮಿತವಾಗಿ ಬಾರ್ಲಿ ನೀರನ್ನು ಕುಡಿಯುವುದರಿಂದ ತೂಕವನ್ನು ಕಳೆದುಕೊಳ್ಳಬಹುದು. ಬಾರ್ಲಿಯು ಕೆಟ್ಟ ಕೊಲೆಸ್ಟ್ರಾಲ್ ಮತ್ತು ಟ್ರೈಗ್ಲಿಸರೈಡ್‌ಗಳನ್ನು ಹೀರಿಕೊಳ್ಳುತ್ತದೆ. ಇದು ತೂಕ ನಷ್ಟಕ್ಕೆ ಸಹಾಯ ಮಾಡುತ್ತದೆ.
ಅಧಿಕ ರಕ್ತದೊತ್ತಡದಿಂದ ಬಳಲುತ್ತಿರುವವರು ಸಹ ಬಾರ್ಲಿ ನೀರನ್ನು ಸೇವಿಸಬಹುದು. ಬಾರ್ಲಿ ನೀರು ಅಧಿಕ ರಕ್ತದೊತ್ತಡವನ್ನು ನಿಯಂತ್ರಣದಲ್ಲಿರಿಸುತ್ತದೆ ಮತ್ತು ಹೃದಯದ ಆರೋಗ್ಯವನ್ನು ಸುಧಾರಿಸುತ್ತದೆ. ಬಾರ್ಲಿ ಸೇವನೆಯ ಜೊತೆಗೆ ನೀವು ಬಳಸುವ ಉಪ್ಪಿನ ಪ್ರಮಾಣವನ್ನು ಕಡಿಮೆ ಮಾಡಬೇಕು. ಇದು ಮೂತ್ರಪಿಂಡದ ಆರೋಗ್ಯವನ್ನೂ ಸುಧಾರಿಸುತ್ತದೆ.
ಬಾರ್ಲಿಯಲ್ಲಿ ಫೈಬರ್ ಇರುವುದರಿಂದ, ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸುತ್ತದೆ. ಅಂದರೆ ಮಧುಮೇಹದಿಂದ ಬಳಲುತ್ತಿರುವವರು ಬಾರ್ಲಿ ನೀರನ್ನು ಕೂಡ ಸೇವಿಸಬಹುದು. ಬಾರ್ಲಿಯಲ್ಲಿ ಗ್ಲೈಸೆಮಿಕ್ ಇಂಡೆಕ್ಸ್ ಇದರಲಲ್ಲಿ ಕಡಿಮೆಯಾಗಿರುವುದರಿಂದ ಇದು ಮಧುಮೇಹಿಗಳಿಗೆ ಅಮೃತವಿದ್ದಂತೆ.