Abhi Aviva Reception: ಅಭಿ - ಅವಿವಾ ಆರತಕ್ಷತೆಯಲ್ಲಿ ಪಾನಿಪೂರಿ ಸವಿದ ಹಾಲಿ ಸಿಎಂ - ಮಾಜಿ ಸಿಎಂ
ಬೆಂಗಳೂರಿನ ಅರಮನೆ ಮೈದಾನದಲ್ಲಿ ಅಭಿಷೇಕ್ - ಅವಿವಾ ವಿವಾಹ ಆರತಕ್ಷತೆ ನಡೆಯುತ್ತಿದೆ.
ಸಿನಿಮಾ ರಂಗದವರ ಜೊತೆ ರಾಜಕೀಯ ಮುಖಂಡರು ಸಹ ಅದ್ಧೂರಿ ಸಮಾರಂಭಕ್ಕೆ ಆಗಮಿಸಿದ್ದಾರೆ.
ಆರತಕ್ಷತೆಗೆ ಆಗಮಿಸಿದ ಗಣ್ಯರು ನೂತನ ವಧು-ವರರಿಗೆ ಶುಭ ಹಾರೈಸುತ್ತಿದ್ದಾರೆ.
ಅಂಬರೀಶ್ ಪುತ್ರ ಅಭಿಷೇಕ್ ಮತ್ತು ಅವಿವಾ ಅವರ ವಿವಾಹ ಆರತಕ್ಷತೆಯಲ್ಲಿ ಹಾಲಿ ಸಿಎಂ ಸಿದ್ದರಾಮಯ್ಯ ಮತ್ತು ಮಾಜಿ ಸಿಎಂ ಬೊಮ್ಮಾಯಿ ಭೇಟಿಯಾದರು.
ಇದೇ ವೇಳೆ ಹಾಲಿ ಸಿಎಂ ಹಾಗೂ ಮಾಜಿ ಸಿಎಂ ಕುಶಲೋಪರಿ ವಿಚಾರಿಸಿ, ಪಾನಿಪೂರಿ ಸವಿದರು.