ಎ.ಆರ್. ರೆಹಮಾನ್ ಡಿವೋರ್ಸ್ ನೀಡುತ್ತಿದ್ದಂತೆ ತನ್ನ ಗಂಡನಿಗೂ ವಿಚ್ಛೇದನ ನೀಡಿದ 29 ವರ್ಷದ ಮೋಹಿನಿ..! ಯಾರಿಕೆ..?
ಎಆರ್ ರೆಹಮಾನ್ ಡಿವೋರ್ಸ್ ವಿಚಾರ ದೇಶಾದ್ಯಂತ ಸದ್ದು ಮಾಡುತ್ತಿದೆ. ಇದರ ನಡುವೆ ಅವರ ತಂಡದ ಸದಸ್ಯೆ, ಬಾಸ್ ವಾದಕಿ ಮೋಹಿನಿ ಡೇ ಸಹ ತಮ್ಮ ಪತಿ ಮಾರ್ಕ್ ಹಾರ್ಟ್ಸುಚ್ ಅವರಿಗೆ ವಿಚ್ಛೇದನ ನೀಡುವುದಾಗಿ ಘೋಷಣೆ ಮಾಡಿದ್ದಾರೆ.. ಇದೀಗ ಈ ವಿಚಾರದ ಕುರಿತು ನೆಟ್ಟಿಗರು ಚರ್ಚೆ ಪ್ರಾರಂಭಿಸಿದ್ದಾರೆ..
ಹೌದು.. ಬಾಸ್ ವಾದಕ ಮೋಹಿನಿ ಡೇ ಡಿವೋರ್ಸ್ ನೀಡುವುದಾಗಿ ಹೇಳಿಕೊಂಡಿದ್ದಾರೆ. ಎಆರ್ ರೆಹಮಾನ್ ಮತ್ತು ಸಾಯಿರಾ ಬಾನು ಡಿವೋರ್ಸ್ ನಿರ್ಧಾರ ಹಂಚಿಕೊಂಡ ಕೆಲವೇ ಗಂಟೆಗಳ ನಂತರ ಮೋಹಿನಿ ಸಾಮಾಜಿಕ ಮಾಧ್ಯಮ ಪೋಸ್ಟ್ ಮೂಲಕ ಈ ಸುದ್ದಿಯನ್ನು ರಿವೀಲ್ ಮಾಡಿದ್ದಾರೆ.
ವಿಚ್ಛೇದನ ವಿಚಾರ ಪರಸ್ಪರ ನಿರ್ಧಾರ ಎಂದು ಮೋಹಿನಿ ಡೇ ಮತ್ತು ಮಾರ್ಚ್ ಹಾರ್ಟ್ಸುಚ್ ದಂಪತಿಗಳು ಹೇಳಿಕೊಂಡಿದ್ದಾರೆ.. ಈ ಕುರಿತು ಸೋಷಿಯಲ್ ಮೀಡಿಯಾದಲ್ಲಿ, "ಮಾರ್ಕ್ ಮತ್ತು ನಾನು ಬೇರ್ಪಟ್ಟಿದ್ದೇವೆ ಎಂದು ಘೋಷಿಸುತ್ತೇವೆ. ಪರಸ್ಪರ ಒಪ್ಪಂದದ ಮೂಲಕ ಈ ನಿರ್ಧಾರಕ್ಕೆ ಬಂದಿದ್ದೇವೆ. ಇದು ಉತ್ತಮ ಮಾರ್ಗ ಎಂದು ನಾವು ನಂಬಿದ್ದೇವೆ" ಎಂದು ದಂಪತಿಗಳು ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ.
ಅಲ್ಲದೆ, ಸಂಸಾರಿಕವಾಗಿ ಬೇರೆಯಾಗಲು ನಿರ್ಧರಿಸಿದ್ದರೂ, ಇದು ವೃತ್ತಿಪರ ಕೆಲಸದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ತಿಳಿಸಿದ್ದಾರೆ. ಅಷ್ಟೇ ಅಲ್ಲ, ಮುಂದಿನ ಪ್ರಾಜೆಕ್ಟ್‌ಗಳನ್ನು ಒಟ್ಟಾಗಿ ಮುಂದುವರೆಸುವುದಾಗಿ ಹೇಳಿಕೊಂಡಿದ್ದಾರೆ.. ದಯವಿಟ್ಟು ನಮ್ಮ ನಿರ್ಧಾರವನ್ನು ಗೌರವಿಸಿ ಎಂದು ಪೋಸ್ಟ್‌ನಲ್ಲಿ ಅಭಿಮಾನಿಗಳಿಗೆ ಮನವಿ ಮಾಡಿದ್ದಾರೆ.
29 ವರ್ಷ ವಯಸ್ಸಿನ ಮೋಹಿನಿ ಡೇ ಅವರು ವಿಶ್ವಾದ್ಯಂತ ರೆಹಮಾನ್ ಅವರೊಂದಿಗೆ 40 ಶೋಗಳಲ್ಲಿ ಕೆಲಸ ಮಾಡಿದ್ದಾರೆ. ಅಲ್ಲದೆ, 29 ವರ್ಷಗಳ ದಾಂಪತ್ಯದ ನಂತರ, ಎಆರ್ ರೆಹಮಾನ್ ಮತ್ತು ಸೈರಾ ಬಾನು ನವೆಂಬರ್ 19 ರಂದು ಡಿವೋರ್ಸ್ ಘೋಷಣೆ ಮಾಡಿದರು.