ಟೆಸ್ಟ್ ಕ್ರಿಕೆಟ್‌ನಲ್ಲಿ ದ್ವಿ ಶತಕಕ್ಕೆ ಒಂದು ರನ್ ಬಾಕಿ ಇರುವಾಗಲೇ ಔಟ್ ಆದ ಬ್ಯಾಟ್ಸ್ಮನ್ ಗಳಲ್ಲಿ ಈ ಕನ್ನಡಿಗನೂ ಇದ್ದಾನೆ!
ಪಾಕಿಸ್ತಾನದ ಮಾಜಿ ಬ್ಯಾಟ್ಸ್‌ಮನ್ 1984 ರಲ್ಲಿ ಫೈಸ್ಲಾಬಾದ್‌ನಲ್ಲಿ ಭಾರತದ ವಿರುದ್ಧ 199 ರನ್ ಗಳಿಸಿ ಔಟಾದರು.
ಮೊಹಮ್ಮದ್ ಅಜರುದ್ದೀನ್ ಟೆಸ್ಟ್ ಕ್ರಿಕೆಟ್‌ನಲ್ಲಿ 199 ರನ್ ಗಳಿಸಿ ಔಟಾದ ಮೊದಲ ಭಾರತೀಯ ಬ್ಯಾಟ್ಸ್‌ಮನ್. 1986 ರಲ್ಲಿ ಅವರು ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದಾಗ ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ಈ ಸಾಧನೆ ಮಾಡಿದ್ದಾರೆ.
ಮ್ಯಾಥ್ಯೂ ಎಲಿಯಟ್ ಟೆಸ್ಟ್ ಕ್ರಿಕೆಟ್‌ನಲ್ಲಿ 199 ರನ್ ಗಳಿಸಿ ಔಟಾದ ಮೊದಲ ಆಸ್ಟ್ರೇಲಿಯನ್ ಕ್ರಿಕೆಟಿಗರಲ್ಲಿ ಒಬ್ಬರು. 1997ರಲ್ಲಿ ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಮ್ಯಾಥ್ಯೂ 199 ರನ್ ಗಳಿಸಿ ಔಟಾದರು.
1997 ರಲ್ಲಿ ಕೊಲಂಬೊದಲ್ಲಿ ನಡೆದ ಭಾರತ ವಿರುದ್ಧದ ಟೆಸ್ಟ್ ಪಂದ್ಯದ ಎರಡನೇ ಇನ್ನಿಂಗ್ಸ್‌ನಲ್ಲಿ ಸನತ್ ಜಯಸೂರ್ಯ ಅವರು 199 ರನ್‌ಗಳಿಗೆ ಔಟಾದರು.
ಆಸ್ಟ್ರೇಲಿಯಾದ ಮಾಜಿ ನಾಯಕ ಸ್ಟೀವ್ ವಾ 1999 ರಲ್ಲಿ ವೆಟ್ಸ್ ಇಂಡೀಸ್ ವಿರುದ್ಧ ಬ್ರಿಡ್ಜ್‌ಟೌನ್‌ನಲ್ಲಿ ನಡೆದ ಪಂದ್ಯದಲ್ಲಿ 199 ರನ್ ಗಳಿಸಿ ಔಟಾದರು.
ಪಾಕಿಸ್ತಾನದ ಅತ್ಯುತ್ತಮ ಬ್ಯಾಟ್ಸ್‌ಮನ್‌ಗಳಲ್ಲಿ ಒಬ್ಬರಾದ ಯೂನಿಸ್ ಖಾನ್ 2006 ರಲ್ಲಿ ಲಾಹೋರ್‌ನಲ್ಲಿ ಭಾರತದ ವಿರುದ್ಧ ನಡೆದ ಪಂದ್ಯದಲ್ಲಿ ಈ ಸಾಧನೆ ಮಾಡಿದ್ದಾರೆ.
ಇಯಾನ್ ಬೆಲ್ 2008 ರಲ್ಲಿ ಲಾರ್ಡ್ಸ್ ಬ್ಯಾಕ್ ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ 199 ರಲ್ಲಿ ಔಟಾದ ಏಕೈಕ ಇಂಗ್ಲೆಂಡ್ ಬ್ಯಾಟ್ಸ್ ಮನ್ ಆಗಿದ್ದಾರೆ. ಬೆಲ್ ಇಂಗ್ಲೆಂಡ್ ಪರ ಸ್ವರೂಪಗಳಲ್ಲಿ ಅತ್ಯಂತ ಸ್ಥಿರವಾದ ಬ್ಯಾಟ್ಸ್ ಮನ್ ಆಗಿದ್ದರು.
ಆಸ್ಟ್ರೇಲಿಯಾದ ಮಾಜಿ ನಾಯಕ ಸ್ಟೀವ್ ಸ್ಮಿತ್ ಟೆಸ್ಟ್ ಕ್ರಿಕೆಟ್‌ನಲ್ಲಿ ಕೇವಲ 85 ಪಂದ್ಯಗಳಲ್ಲಿ 8000 ರನ್‌ಗಳನ್ನು ಗಳಿಸುವ ಮೂಲಕ ವಿಶೇಷ ದಾಖಲೆಯನ್ನು ಹೊಂದಿದ್ದಾರೆ. ಇವರು 2015ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧದ ಪಂದ್ಯದಲ್ಲಿ 199 ರನ್‌ಗಳಿಗೆ ಔಟ್ ಆದರು.
ಆಲ್-ಫಾರ್ಮ್ಯಾಟ್ ಬ್ಯಾಟ್ಸ್‌ಮನ್ ಆಗಿ ಹೊರಹೊಮ್ಮಿರುವ ಹೆಮ್ಮೆಯ ಕನ್ನಡಿಗ ಕೆ.ಎಲ್. ರಾಹುಲ್ ಸಹ ಈ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದು. ಅವರು 2016 ರಲ್ಲಿ ಚೆನ್ನೈನಲ್ಲಿ ಇಂಗ್ಲೆಂಡ್ ವಿರುದ್ಧ ನಡೆದ ಪಂದ್ಯದಲ್ಲಿ ಈ ಸ್ಕೋರ್ ದಾಖಲಿಸಿದ್ದಾರೆ. ಗಮನಾರ್ಹವಾಗಿ ಇದು ಕೆ.ಎಲ್. ರಾಹುಲ್ ಅವರ ಗರಿಷ್ಠ ಟೆಸ್ಟ್ ಸ್ಕೋರ್ ಆಗಿದೆ.
ಪ್ರಸ್ತುತ ದಕ್ಷಿಣ ಆಫ್ರಿಕಾದ ಟೆಸ್ಟ್ ನಾಯಕ ಡೀನ್ ಎಲ್ಗರ್ ಅವರು 2017 ರಲ್ಲಿ ಪಾಚೆಫ್‌ಸ್ಟ್ರೂಮ್‌ನಲ್ಲಿ ಬಾಂಗ್ಲಾದೇಶ ವಿರುದ್ಧ 199 ರನ್ ಗಳಿಸಿ ಔಟಾದರು.
ದಕ್ಷಿಣ ಆಫ್ರಿಕಾದ ಮಾಜಿ ನಾಯಕ ಫಾಫ್ ಡು ಪ್ಲೆಸಿಸ್ ಹೆಸರೂ ಕೂಡ ಈ ಪಟ್ಟಿಯಲ್ಲಿದ್ದು ಅವರು 2020 ರಲ್ಲಿ ಸೆಂಚುರಿಯನ್‌ನಲ್ಲಿ ಶ್ರೀಲಂಕಾ ವಿರುದ್ಧ ನಡೆದ ಪಂದ್ಯದಲ್ಲಿ ಈ ದಾಖಲೆ ಮಾಡಿದ್ದಾರೆ.
ಏಂಜೆಲೊ ಮ್ಯಾಥ್ಯೂಸ್ ಕಳೆದ ವರ್ಷ 2022ರಲ್ಲಿ ಚಟ್ಟೋಗ್ರಾಮ್‌ನಲ್ಲಿ ಬಾಂಗ್ಲಾದೇಶ ವಿರುದ್ಧ ನಡೆದ ಟೆಸ್ಟ್ ಪಂದ್ಯದಲ್ಲಿ 199 ರನ್‌ಗಳಿಗೆ ಔಟಾದರು.