ಫಿನಾಲೆ ಸಮೀಪದಲ್ಲೇ ‘ಬಿಗ್’ ಟ್ವಿಸ್ಟ್.. 8 ಸ್ಪರ್ಧಿಗಳು ಉಳಿದಿದ್ದರೂ ಈ ವಾರ ಎಲಿಮಿನೇಷನ್ ಕ್ಯಾನ್ಸಲ್ ಆಗೋದಕ್ಕೆ ಇದುವೇ ಕಾರಣ!

Mon, 15 Jan 2024-6:09 am,

ಕಳೆದ ವಾರ ಟಿಕೆಟ್ ಟು ಫಿನಾಲೆ ಟಾಸ್ಕ್ ನೀಡಲಾಗಿತ್ತು. ಆ ವಾರ ಪೂರ್ತಿ ಉತ್ತಮ ಪ್ರದರ್ಶನ ನೀಡಿದ್ದ ಪ್ರತಾಪ್ ಕೈ ಜಾರಿ ಸಂಗೀತಾ ವಶವಾಗಿತ್ತು ಫಿನಾಲೆ ಟಿಕೆಟ್. ಈ ಮೂಲಕ ಫಿನಾಲೆಗೆ ಎಂಟ್ರಿ ಕೊಟ್ಟ ಮೊದಲ ಸ್ಪರ್ಧಿ ಎಂಬ ಕೀರ್ತಿಗೆ ಭಾಜನರಾದರು.

ಇನ್ನೊಂದೆಡೆ ಕಳೆದ ದಿನ ಎಲಿಮಿನೇಷನ್ ನಡೆಯಬೇಕಿತ್ತು, ಆದರೆ ಆಶ್ಚರ್ಯ ಎಂಬಂತೆ ಪ್ರಕ್ರಿಯೆ ಕ್ಯಾನ್ಸಲ್ ಆಗಿತ್ತು. ಫಿನಾಲೆಗೆ ಒಂದೇ ವಾರ ಬಾಕಿ ಇದ್ದರೂ ಸಹ ಎಲಿಮಿನೇಷನ್ ಯಾಕೆ ನಡೆಯಲಿಲ್ಲ ಎಂಬ ಗೊಂದಲ ಅನೇಕರಲ್ಲಿ ಮೂಡಲಿದೆ.

ಪ್ರಸ್ತುತ ಬಿಗ್ ಬಾಸ್ ಮನೆಯಲ್ಲಿ 8 ಮಂದಿ ಸದಸ್ಯರಿದ್ದಾರೆ. ಇದುವರೆಗಿನ ಸೀಸನ್ ಗಮನಿಸಿದರೆ ಫಿನಾಲೆಗೆ ಎಂಟ್ರಿ ಕೊಡೋದು ಟಾಪ್ 5 ಸ್ಪರ್ಧಿಗಳು ಮಾತ್ರ. ಅಂದರೆ ಈ ಸೀಸನ್’ನಿಂದ 3 ಸ್ಪರ್ಧಿಗಳು ಹೊರ ಹೋಗಬೇಕು.

ಹೀಗಿದ್ದರೂ ಎಲಿಮಿನೇಷನ್ ನಡೆಯದಿರಲು ಕಾರಣ ಏನು ಎಂಬುದು ಸದ್ಯ ಅನೇಕ ಪ್ರಶ್ನೆ. ಇದಕ್ಕೆ ಉತ್ತರ ಮಿಡ್ ವೀಕ್ ಎಲಿಮಿನೇಶನ್.

ಪ್ರತೀ ಸೀಸನ್’ನಲ್ಲೂ ಮಿಡ್ ವೀಕ್ ಎಲಿಮಿನೇಷನ್ ನಡೆದಿತ್ತು. ಆ ಸಂದರ್ಭದಲ್ಲೂ ಇದೇ ರೀತಿ ವೀಕೆಂಡ್ ನಾಮಿನೇಷನ್ ಕ್ಯಾನ್ಸಲ್ ಆಗಿತ್ತು. ಅಷ್ಟೇ ಅಲ್ಲದೆ, ಸಂತು-ಪಂತು ಸೇವ್ ಆದ ಬಳಿಕ, ಕಿಚ್ಚ “ಈ ವಾರ ಮನೆಗೆ ಯಾರೂ ಹೋಗ್ತಿಲ್ಲ, ಆದ್ರೆ ಮುಂದಿನ ವಾರದ ಪ್ರತೀ ದಿನವೂ ಟ್ವಿಸ್ಟ್ ಇರಲಿದೆ” ಎಂಬರ್ಥದಲ್ಲಿ ಹೇಳಿಕೆ ನೀಡಿದ್ದರು.

ZEENEWS TRENDING STORIES

By continuing to use the site, you agree to the use of cookies. You can find out more by Tapping this link