BBK 11: ಮೊದಲ ಬಾರಿ ಹನುಮಂತುಗೆ ಈ ಗಾಂಚಲಿ ಎಲ್ಲಾ ಬೇಡಮ್ಮ ಅಂತಾ ಕಿಚ್ಚ ಸುದೀಪ್ ಹೇಳಿದ್ದು ಏಕೆ..?
ಇದೀಗ ಕಿಚ್ಚನ ಕೆಂಗಣ್ಣು ಸ್ಟ್ರಾಂಗ್ ಸ್ಪರ್ಧಿ, ಈ ಬಾರಿಯ ಬಿಗ್ ಬಾಸ್ ವಿನ್ನರ್ ಆಗಬಹುದು ಅಂತಾ ಹೇಳಲಾಗುತ್ತಿರುವ ಹನುಮಂತನ ಮೇಲೆ ಬಿದ್ದಿದೆ. ಗ್ರ್ಯಾಂಡ್ ಫಿನಾಲೆ ಹತ್ತಿರ ಬರುತ್ತಿದ್ದಂತೆಯೇ ಹನುಮಂತನಿಗೂ ಕಿಚ್ಚ ಮೊದಲ ಬಾರಿಗೆ ಖಡಕ್ ಆಗಿ ವಾರ್ನಿಂಗ್ ಮಾಡಿದ್ದಾರೆ.
ಜನಗಳು ಹನುಮಂತನಿಗೆ ಹಾಕುತ್ತಿರುವ ವೋಟಿನ ಬಗ್ಗೆ ಕಿಚ್ಚ ಸುದೀಪ್ ಮಾತನಾಡಿದ್ದಾರೆ. ಇದು ಇದೀಗ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಹನುಮಂತನಿಗೆ ಜನರು ಹಾಕಿರುವ ವೋಟಿನ ಬಗ್ಗೆ ಬೆಲೆ ಕೊಡದೆ ಕಿಚ್ಚ ಯಾಕೆ ಆ ರೀತಿ ಮಾತನಾಡಿದ್ರೂ ಅನ್ನೋ ಚರ್ಚೆ ನಡೆಯುತ್ತಿದೆ. ಹನುಮಂತ ಆ ಸಿಚುವೇಷನ್‌ನಲ್ಲಿ ಯಾವ ಲೆಕ್ಕಾಚಾರಕ್ಕೆ ಹೇಳಿದ ಅಂತಾನೂ ಸುದೀಪ್ ಅವರು ಯೋಚನೆ ಮಾಡದೆ ಮಾತನಾಡಿದ್ದಾರೆ. ಆಟ ಅನ್ಯಾಯವಾಗಿ ನಡೆಯುತ್ತಿರಬೇಕಾದರೆ ಆಟ ಗೆಲ್ಲೋದಕ್ಕಿಂತಲೂ ಸೋಲೋದೇ ಇಂಪಾರ್ಟೆಂಟ್ ಅಥವಾ ಆ ಆಟ ರದ್ದಾಗೋದೇ ಮುಖ್ಯ.
ಯಾಕಂದ್ರೆ ಅವತ್ತು ಚೈತ್ರಾ ಕುಂದಾಪುರ ಅವರು ಪದೇ ಪದೇ ಪೌಲ್‌ಗಳನ್ನ ಮಾಡಿಕೊಂಡು ಫೇಕ್ ಆಟ ಆಡಿಕೊಂಡು ತನ್ನ ಟೀಂಅನ್ನು ಗೆಲ್ಲಿಸಲು ಮೋಸದ ಆಟವನ್ನು ಆಡುತ್ತಿರುತ್ತಾರೆ. ಆಗ ಹನುಮಂತ ಉಸ್ತುವಾರಿ ಚೈತ್ರಾಗೆ, ʼನಾನು ಯಾವುದೇ ಕಾರಣಕ್ಕೂ ಫಲಿತಾಂಶವನ್ನು ಅನೌನ್ಸ್ ಮಾಡಲ್ಲ ಅಂತಾನೆ. ಆಗ ಆಟ ರದ್ದಾಗುತ್ತೆ ಅಂತಾ ಚೈತ್ರಾ ಹನುಮಂತುಗೆ ಹೇಳುತ್ತಾಳೆ. ಆಟ ಬೇಕಾದ್ರೆ ರದ್ದಾಗಲಿ ಅಂತಾ ಹನುಮಂತು ರಿಟರ್ನ್ ಹೇಳ್ತಾನೆ. ಆದ್ರೆ ಆಗ್ಲಿ ನಾನು ಮಾತ್ರ ಯಾವುದೇ ಕಾರಣಕ್ಕೂ ರಿಸಲ್ಟ್ ಅನೌನ್ಸ್ ಮಾಡಲ್ಲವೆಂದು ಕಡ್ಡಿತುಂಡು ಮಾಡಿ ಹೇಳುತ್ತಾನೆ.
ಕಲರ್ಸ್ ಕನ್ನಡದ ಟ್ವಿಟರ್ ಖಾತೆಯಲ್ಲೂ ಈ ವಿಡಿಯೋದ ಪ್ರೋಮೋ ಹಂಚಿಕೊಳ್ಳಲಾಗಿದೆ. ಈ ವಿಡಿಯೋದಲ್ಲಿ ಧನರಾಜ್ ಆಡುತ್ತಿದ್ದಾಗ ಚೈತ್ರಾ ಅವರು ಪೌಲ್.. ಪೌಲ್.. ಪೌಲ್.. ಅಂತಾ ಹೇಳುತ್ತಲೇ ಇರುತ್ತಾರೆ. ಇದಕ್ಕೆ ರಜತ್ ʼಏನ್ ಮೋಸ ಗುರು ಇವರದ್ದುʼ ಆಕ್ರೋಶ ವ್ಯಕ್ತಪಡಿಸುತ್ತಾರೆ. ಚೈತ್ರಾರ ವರ್ತನೆಗೆ ಕುಪಿತಗೊಂಡ ಧನರಾಜ್ ಅವರು, ʼನಿನಗೆ ನಾಚಿಕೆ ಆಗಲ್ವಾ..?ʼ ಹೇಳುತ್ತಾನೆ. ಈ ವೇಳೆ ಚೈತ್ರಾ ಕೂಡ ಕೂಗಾಡುತ್ತಾರೆ. ಮತ್ತೆ ರಜತ್ ಮಾತನಾಡಿ, ʼಆಟವಾಡಿ ಗೆಲ್ಲಲು ನಿಮಗೆ ಯೋಗ್ಯತೆ ಇಲ್ಲʼ ಅಂತಾ ಹೇಳುತ್ತಾರೆ. ಈ ವೇಳೆ ಹನುಮಂತ ಮಾತನಾಡಿ, ʼನಾನು ಮೊದಲ ಸರಿ ಇಲ್ಲ, ಯಾರಾದ್ರೂ ಗಂಡು ಮಕ್ಕಳು ಆಗಿದ್ರೆ ಅವರಿಗೆ ಇತ್ತುʼ ಅಂತಾ ಹೇಳುತ್ತಾನೆ. ಈ ವಿಡಿಯೋ ಪ್ರತಿಕ್ರಿಯೆ ನೀಡುವ ಕಿಚ್ಚ ಸುದೀಪ್ ಅವರು, ʼಉಸ್ತುವಾರಿಗಳು ತಮ್ಮ ಜವಾಬ್ದಾರಿಯನ್ನು ಮರೆತು ಆಟದ ದಾರಿಯನ್ನು ತಪ್ಪಿಸುತ್ತಿದ್ದಾರೆʼ ಎಂದು ಹೇಳುತ್ತಾರೆ.
ಇಂದಿನ ಪಂಚಾಯಿತಿಗೆ ರೆಡಿನಾ? ವಾರದ ಕತೆ ಕಿಚ್ಚನ ಜೊತೆ | ಇಂದು ರಾತ್ರಿ 9#BiggBossKannada11 #BBK11 #HosaAdhyaya #ColorsKannada #BannaHosadaagideBandhaBigiyaagide #ಕಲರ್‌ಫುಲ್‌ಕತೆ #colorfulstory #Kicchasudeepa #BBKPromo pic.twitter.com/8qekkEeiMF
— Colors Kannada (@ColorsKannada) December 21, 2024
ಮೊದಲಿಗೆ ಆಟ ರದ್ದಾಗಲಿ ಅಂತಾ ಚೈತ್ರಾ ಹೇಳಿದಕ್ಕೆ ಹನುಮಂತನೂ ಹೇಳ್ತಾನೆ. ಇಲ್ಲದಿದ್ರೆ ಆತ ಹೇಳುತ್ತಿರಲಿಲ್ಲ ಅನ್ಸುತ್ತೆ. ಆದರೆ ಕಿಚ್ಚ ಸುದೀಪ್ ಅವರು ಅದನ್ನು ಯೋಚನೆ ಮಾಡದೆ ಹನುಮಂತನಿಗೆ ಇಂಡೈರೆಕ್ಟ್ ಆಗಿ ಕ್ಲಾಸ್ ತೆಗೆದುಕೊಳ್ಳುತ್ತಾರೆ. ಏನೂ ತಪ್ಪು ಮಾಡದ ಹನುಮಂತನಿಗೆ ಕಿಚ್ಚ ಸುದೀಪ್ ಅವರು ಏಕೆ ಈ ರೀತಿ ಹೇಳಿದ್ರೂ ಅಂತಾ ವೀಕ್ಷಿಕರು ಅಚ್ಚರಿಗೊಂಡಿದ್ದಾರೆ. ಈ ಬಾರಿ ಹನುಮಂತು ಗೆಲ್ಲುವ ಕ್ಯಾಂಡಿಟೇಟ್ ಆಗಿ ಮುನ್ನುಗ್ಗುತ್ತಿದ್ದು, ಅತಿಹೆಚ್ಚು ವೋಟಿಂಗ್ ಪಡೆದುಕೊಂಡಿದ್ದಾನೆ.