BBK 11: ಇಷ್ಟು ದಿನ ಡಲ್ ಆಗಿದ್ದ ಹನುಮಂತ ಫುಲ್ ಚಾರ್ಜ್; ಶೀಘ್ರವೇ ಮದುವೆ ಎಂದ ತಂದೆ-ತಾಯಿ!!
ಎಲ್ಲಕ್ಕಿಂತಲೂ ಈ ಎಪಿಸೋಡ್ ತುಂಬಾ ಗಮನ ಸೆಳೆದಿದೆ. ಹನುಮಂತನ ತಂದೆ ಹೆಸರು ಮೇಘಪ್ಪ ಹಾಗೂ ತಾಯಿಯ ಹೆಸರು ಶೀಲವ್ವ. ಬಿಗ್ ಬಾಸ್ ಮನೆಯಲ್ಲಿ ಇದ್ದಷ್ಟು ಹೊತ್ತು ಹನುಮಂತ ತನ್ನ ತಂದೆ-ತಾಯಿ ಜೊತೆಗೆ ಲಂಬಾಣಿ ಭಾಷೆಯಲ್ಲಿಯೇ ಮಾತನಾಡಿದರು. ಹನುಮಂತನಿಗೆ ಆತನ ತಂದೆ-ತಾಯಿ 'ಚೆನ್ನಾಗಿರು ಮಗನೆ' ಎಂದು ಶುಭ ಹಾರೈಸಿದರು.
ಬಿಗ್ ಬಾಸ್ ಮನೆಯಲ್ಲಿ ಹನುಮಂತನ ಬಳಿ ತಮ್ಮದೇ ಭಾಷೆಯಲ್ಲಿ ಕಷ್ಟದ ಬಗ್ಗೆ ಹೇಳಿಕೊಂಡಿದ್ದಾರೆ. 'ಕಂತು ಕಟ್ಟೋದು ಬಂದಿತ್ತು, ಆದರೆ ಕಂತು ಕಟ್ಟಿಲ್ಲ. ನಮ್ಮ ಬಳಿ ಹಣ ಇಲ್ಲ. ಮೆಕ್ಕೆ ಜೋಳವನ್ನು ಬಸಣ್ಣ, ಸಂದೀಪ್‌ಗೆ ತುಂಬಲು ಹೇಳಿ ಬಂದಿದ್ದೇವೆʼ ಅಂತಾ ಶೀಲವ್ವ ಹೇಳಿದರು. 'ಮಕ್ಕೆ ಜೋಳನ ಮಿಷನ್‌ಗೆ ಹಾಕಿದೀರಾ, ಯಾವಾಗ ಹಾಕಿದ್ರಿ' ಅಂತಾ ಹನುಮಂತ ಕೇಳಿದ. 'ಹೂವಿನ ಅಮವಾಸ್ಯೆ ದಿನ ಹಾಕಿದೆವು' ಅಂತಾ ಶೀಲವ್ವ ತಿಳಿಸಿದರು. ಈ ವೇಳೆ ದೊಡ್ಮನೆಯಲ್ಲಿ ಯಾವಾಗ ಅಮವಾಸ್ಯೆ? ಯಾವಾಗ ಹುಣ್ಣಿಮೆ? ಅನ್ನೋದು ಗೊತ್ತಾಗಲ್ಲ. ಹೀಗಾಗಿ ಅಮವಾಸ್ಯೆ ಯಾವಾಗ ಆಯ್ತೋ ಗೊತ್ತಿಲ್ಲವೆಂದು ಹನುಮಂತ ಹೇಳಿದ.
ಸಿಂಗರ್ ಆಗಿ ಮಿಂಚಿದ್ದ ಕುರಿಗಾಯಿ ಹಳ್ಳಿ ಹುಡುಗ ಹನುಮಂತು ಸಾಕಷ್ಟು ಹಣ ಮಾಡಿದ್ದಾನೆ. ಐಷಾರಾಮಿ ಜೀವನ ನಡೆಸುತ್ತಿದ್ದಾನೆ. ದೊಡ್ಡ ಮನೆ ಕಟ್ಟಿಸಿದ್ದಾನೆ ಅಂತಾ ಸುದ್ದಿಯಾಗಿತ್ತು. ಇವೆಲ್ಲಾ ಗಾಳಿಸುದ್ದಿಗಳು, ನಾವು ಇನ್ನೂ ಸಹ ಬಡತನದಲ್ಲಿಯೇ ಬದುಕುತ್ತಿದ್ದೇವೆ. ಯಾರೂ ಕೂಡ ಆ ರೀತಿ ಸುದ್ದಿ ಮಾಡಬ್ಯಾಡ್ರಿ, ನಮ್ಮ ಪರಿಸ್ಥಿತಿಯನ್ನ ನೀವೇ ಖುದ್ದಾಗಿ ನೋಡಿ ಸುದ್ದಿ ಮಾಡ್ರಿ ಅಂತಾ ಹನುಮಂತನ ತಾಯಿ ಶೀಲವ್ವ ಹೇಳಿದರು.
ಹನುಮಂತ ಹಾಯಾಗಿ ಇದ್ದಾರೆ, ಕೈತುಂಬಾ ಹಣ ಮಾಡಿಕೊಂಡಿದ್ದಾರೆ ಅಂತಾ ಸಖತ್ ಸುದ್ದಿ ಆಗಿತ್ತು. ಆದರೆ ಅಸಲಿಗೆ ಅವರ ಜೀವನ ಹಾಗಿಲ್ಲ. ಅವರ ಮನೆಯಲ್ಲೂ ಸಾಲ ಇದೆ. ಅದು ದೊಡ್ಮನೆಯಲ್ಲಿ ಸ್ಪಷ್ಟವಾಗಿದೆ. ಯಾಕಂದ್ರೆ ಬಿಗ್ ಬಾಸ್ ಮನೆಯಲ್ಲಿ ಸಾಲದ ವಿಚಾರವನ್ನು ಹನುಮಂತನ ತಾಯಿ ಮಾತನಾಡಿದ್ದಾರೆ. ಬಿಗ್ ಬಾಸ್ ಪೂರ್ಣಗೊಂಡ ಬಳಿಕ ಹನುಮಂತನ ಮದುವೆ ನಡೆಯಲಿದೆಯಂತೆ ಹೌದೇ? ಎನ್ನುವ ರಜತ್ ಪ್ರಶ್ನೆಗೆ ಉತ್ತರಿಸಿದ ಶೀಲವ್ವ ಹೌದು ಅಂತಾ ಹೇಳಿದರು. ಶೀಘ್ರವೇ ನಮ್ಮ ಮಗನಿಗೆ ಮದುವೆ ಮಾಡುತ್ತೇವೆ ಅಂತಾ ಹೇಳಿದರು.
ಹನುಮಂತ ಅವರು ಇಷ್ಟು ದಿನ ಡಲ್ ಆಗಿದ್ದರು. ಅವರ ತಂದೆ-ತಾಯಿ ಬಿಗ್ ಬಾಸ್ ಮನೆಗೆ ಬಂದ ಬಳಿಕ ಅವರು ಇದೀಗ ಮತ್ತೆ ಚಾರ್ಜ್ ಆಗಿದ್ದಾರೆ. ಅವರು ಮುಂದಿನ ದಿನಗಳಲ್ಲಿ ಯಾವ ರೀತಿಯಲ್ಲಿ ಆಡುತ್ತಾರೆ ಅನ್ನೋ ಕುತೂಹಲ ಅನೇಕರಲ್ಲಿ ಮೂಡಿದೆ.
ಅಂದಹಾಗೆ ಹನುಮಂತ ಲಮಾಣಿ ಗಾಯಕ. ಮೂಲತಃ ಹಾವೇರಿ ಜಿಲ್ಲೆಯ ಸವಣೂರು ತಾಲೂಕಿನ ಚಿಲ್ಲೂರು ಬಡ್ನಿ ಗ್ರಾಮದವರಾದ ಇವರು ಮೊದಲು ಕುರಿಗಾಹಿಯಾಗಿದ್ದರು. ತಮ್ಮ ಧ್ವನಿಯಿಂದಲೇ ಗುರುತಿಸಿಕೊಂಡಿದ್ದ ಹನುಮಂತ, ʼಜೀ ಕನ್ನಡ ವಾಹಿನಿʼಯ ಸರಿಗಮಪ ಸೀಸನ್ 15ರಲ್ಲಿ ಭಾಗವಹಿಸಿ ಹೆಚ್ಚಿನ ಜನಪ್ರಿಯತೆ ಪಡೆದುಕೊಂಡಿದ್ದರು. ಸರಿಗಮಪ ರಿಯಾಲಿಟಿ ಶೋನಲ್ಲಿ ತಮ್ಮ ಗಾಯನ ಮತ್ತು ಮುಗ್ಧತೆಯಿಂದಲೇ ಫೇಮಸ್ ಆದರು.