BBK 11: ಈ ಬಾರಿ ಹನುಮಂತ ಬಿಗ್ ಬಾಸ್ ಟ್ರೋಫಿ ಗೆಲ್ಲೋದು ಗ್ಯಾರಂಟಿ!! ಯಾಕೆ ಗೊತ್ತಾ?
ʼಜಿ ಕನ್ನಡ ವಾಹಿನಿʼಯ ಅತಿದೊಡ್ಡ ರಿಯಾಲಿಟಿ ಶೋಗಳಲ್ಲಿ ಒಂದಾದ ಸರಿಗಮಪ ಶೋ ಮೂಲಕ ಜನಮನ್ನಣೆ ಗಳಿಸಿದ ಕುರಿಗಾಹಿ ಹನುಮಂತ ಬಿಗ್ ಬಾಸ್ ಮನೆಗೆ ವೈಲ್ಡ್ ಕಾರ್ಡ್ ಎಂಟ್ರಿಯಾಗಿದ್ದ. ಬಿಗ್ ಬಾಸ್ ಹೊಸ ಅಧ್ಯಾಯದಲ್ಲಿ ಮೊದಲ ವೈಲ್ಡ್ ಕಾರ್ಡ್ ಎಂಟ್ರಿಯಲ್ಲಿಯೇ ಹನುಮಂತ ಡ್ಯಾನ್ಸ್ ಮಾಡುತ್ತಲೇ ದೊಡ್ಮನೆಗೆ ಬಂದಿದ್ದ. ಈತ ಬಂದ ಮೇಲೆ ಬಿಗ್ ಬಾಸ್ ನೋಡುವವರ ಸಂಖ್ಯೆಯೂ ದುಪ್ಪಟ್ಟಾಯಿತು. ಈ ಬಾರಿ ಅಷ್ಟೇನೂ ಹೇಳಿಕೊಳ್ಳುವಂತಹ ಸ್ಪರ್ಧಿಗಳು ಇಲ್ಲವೆಂದು ಫ್ಯಾನ್ಸ್ ಸಪ್ಪೆಮೋರೆ ಹಾಕಿದ್ದರು. ಆದರೆ ಹನುಮಂತ ಬಂದ ಮೇಲೆ ದೊಡ್ಮನೆ ಕಳೆಯೇ ಬದಲಾಯಿತು.
ಹನುಮಂತ ಬರ್ತಿದ್ದಂತೆಯೇ ಸ್ವತಃ ಬಿಗ್ ಬಾಸ್‌ಗೆ ಕ್ವಾಟ್ಲೆ ಕೊಟ್ಟಿದ್ದ. ದೊಡ್ಮನೆಯಲ್ಲಿ ಹನುಮಂತ ತನ್ನ ಮುಗ್ಧತನದಿಂದಲೇ ಗೇಮ್ ಚೇಂಜರ್ ಆಗಿ ಆಟವಾಡುತ್ತಾ ನೂರಕ್ಕೂ ಹೆಚ್ಚು ದಿನ ಪೂರೈಸಿದ್ದಾನೆ. ತನ್ನ ಗುಣ, ನಡತೆ ಮತ್ತು ಒಳ್ಳೆಯತನದಿಂದಲೇ ದೊಡ್ಮನೆಯಲ್ಲಿ ಹನುಮಂತ ಸ್ಟ್ರಾಂಗ್ ಸ್ಪರ್ಧಿಯಾಗಿ ಹೊರಹೊಮ್ಮಿದ್ದಾರೆ. ಹೀಗಾಗಿಯೇ ಆತ ಗ್ರ್ಯಾಂಡ್ ಫಿನಾಲೆ ತಲುಪುವವರೆಗೂ ಇರ್ತಾರೆ ಅಂತಾ ಅಭಿಮಾನಿಗಳು ಅಭಿಪ್ರಾಯಪಟ್ಟಿದ್ದಾರೆ. ವೈಲ್ಡ್ ಕಾರ್ಡ್ ಎಂಟ್ರಿಯಿಂದ ದೊಡ್ಮನೆಗೆ ಕಾಲಿಟ್ಟ ಹನುಮಂತ ಬಿಗ್ ಬಾಸ್ ಕನ್ನಡ ಸೀಸನ್ 11ರ ವಿನ್ನರ್ ಆಗ್ತಾರಾ? ಅನ್ನೋ ಪ್ರಶ್ನೆ ಎಲ್ಲರನ್ನೂ ಕಾಡುತ್ತಿದೆ.
ಕ್ಯಾಪ್ಟನ್ ಆಗಿ ಬಿಗ್ ಬಾಸ್ ಹನುಮಂತನನ್ನು ಆಯ್ಕೆ ಮಾಡಿದ್ದರು. ಆದರೆ ಹನುಮಂತನಿಗೆ ಈ ಯಾವ ವಿಚಾರವೂ ಗೊತ್ತಿರಲಿಲ್ಲ. ಕ್ಯಾಪ್ಟನ್ ಆದ ಹನುಮಂತ ಎಲ್ಲದರಲ್ಲೂ ಸೈ ಅನಿಸಿಕೊಂಡಿದ್ದ. ಕಿಚ್ಚ ಸುದೀಪ್ ಅವರು ವೀಕೆಂಡ್ ಶೋಗೆ ಬರುತ್ತಿದ್ದಂತೆಯೇ ಹನುಮಂತನನ್ನ ಹಾಡಿ ಹೊಗಳಿ ಆತನಿಗೆ ಮೆಚ್ಚುಗೆಯ ಚಪ್ಪಾಳೆಯನ್ನು ಕೊಟ್ಟಿದ್ದರು. ಹನುಮಂತನಿಗೆ ವೀಕೆಂಡ್ ಶೋನಲ್ಲಿ ಎಲ್ಲದರಲ್ಲೂ ಸಪೋರ್ಟ್ ಸಹ ಇತ್ತು. ಅತಿಹೆಚ್ಚು ಮತಗಳಿಂದ ಹನುಮಂತ ಸೇಫ್ ಆಗ್ತಾ ಇದ್ದ. ಈ ವಾರದ ಫ್ಯಾಮಿಲಿ ವೀಕ್‌ನಲ್ಲಿ ಅಪ್ಪ-ಅಮ್ಮ ದೊಡ್ಮನೆಗೆ ಎಂಟ್ರಿ ಕೊಡ್ತಿದ್ದಂತೆ ಹನುಮಂತ ಸ್ಪರ್ಧಿಗಳಿಗೆ ತುಂಬಾ ಎಂಟರ್ಟೈನ್ಮೆಂಟ್ ನೀಡಿದ್ದಾರೆ. ಆತ ಒಂದು ರೀತಿ TRP ಕಿಂಗ್ ಆಗಿ ಹೊರಹೊಮ್ಮಿದ್ದಾನೆ.
ಹನುಮಂತ ದೊಡ್ಮನೆಗೆ ಕೊಟ್ಟಂತಹ ಕೊಡುಗೆ ತುಂಬಾ ಇದೆ. ಹೀಗಾಗಿಯೇ ಆತನ ಬಗ್ಗೆ ಬಿಗ್ ಬಾಸ್ ತಂಡ ಬಹಳ ಖುಷಿ ವ್ಯಕ್ತಪಡಿಸಿದೆ. ಹನುಮಂತ ತಾನು ಮುಗ್ಧನಲ್ಲ, ಬಹಳ ಸ್ಟ್ರಾಂಗ್ ಕಂಟೆಸ್ಟೆಂಟ್ ಎಂದು ತೋರಿಸಿದ್ದಾನೆ. ನಾಮಿನೇಟ್ ಮತ್ತು ಟಾಸ್ಕ್ ವಿಚಾರದಲ್ಲಿಯೂ ತನ್ನ ನಿಯತ್ತಿನ ಆಟದಿಂದ ಎಲ್ಲದರಲ್ಲಿಯೂ ಸೈ ಎನಿಸಿಕೊಂಡಿದ್ದಾನೆ. ಇದೀಗ ಫ್ಯಾಮಿಲಿ ವೀಕ್‌ನಲ್ಲಿ ಅಪ್ಪ-ಅಮ್ಮ ಬಂದುಹೋದ ಬಳಿಕ ವೀಕೆಂಡ್ ಸ್ಟಾರ್ಟ್ ಆಗ್ತಾ ಇದ್ದಂತೆಯೇ ಹನುಮಂತನಿಗೆ 60 ಲಕ್ಷ ವೋಟುಗಳು ಬಂದಿದೆಯಂತೆ.
ಮೂಲಗಳ ಪ್ರಕಾರ, ಹನುಮಂತ ವೋಟ್ಸ್ ಪಡೆಯುವುದರಲ್ಲಿ ರೆಕಾರ್ಡ್ ಧೂಳಿಪಟ ಮಾಡಿದ್ದಾನಂತೆ. ರೆಕಾರ್ಡ್ ಬ್ರೇಕ್ ಮಾಡಿರುವ ಹನುಮಂತನ ಬಗ್ಗೆ ಬಿಗ್ ಬಾಸ್ ಮನೆಯಲ್ಲೂ ಕಿಚ್ಚ ಸುದೀಪ್ ಹಾಗೂ ಬಿಗ್ ಬಾಸ್ ತಂಡವೇ ಖುಷಿ ವ್ಯಕ್ತಪಡಿಸಿದೆಯಂತೆ. ಗ್ರ್ಯಾಂಡ್ ಫಿನಾಲೆ ಇನ್ನೇನು ಹತ್ತಿರ ಬರುತ್ತಿದೆ. ಹೀಗಾಗಿ ಈ ಬಾರಿಯ ಬಿಗ್ ಬಾಸ್ ವಿನ್ನರ್ ಹನುಮಂತನೇ ಆಗುತ್ತಾನೆ ಅಂತಾ ಹೇಳಲಾಗುತ್ತಿದೆ. ವೀಕ್ಷಕರು ಸಹ ಹನುಮಂತನೇ ಟ್ರೋಫಿ ಎತ್ತಿ ಹಿಡಿಯಬೇಕು ಅಂತಾ ಆಶಿಸುತ್ತಿದ್ದಾರೆ. ʼಬಡವ್ರ ಮಕ್ಳು ಬೆಳಿಬೇಕು ಕಣ್ರಯ್ಯ' ಅನ್ನೋವಂತೆ ಈ ಬಾರಿಯ ಬಿಗ್ ಬಾಸ್ ವಿನ್ನರ್ ಹನುಮಂತ ಆಗ್ತಾನಾ ಕಾದುನೋಡಬೇಕಿದೆ...