BBK 11: ಖುಷಿಯಾಗಿರೋ ದೊಡ್ಮನೆಗೆ ಮತ್ತೆ ಎಂಟ್ರಿ ಕೊಡ್ತಾರಾ ಗೋಲ್ಡ್ ಸುರೇಶ್..? ಎಲ್ಲರೂ ಶಾಕ್!!
ಹೌದು, ಬಿಗ್ ಬಾಸ್ ಮನೆಗೆ ಗೋಲ್ಡ್ ಸುರೇಶ್ ಮತ್ತೆ ಎಂಟ್ರಿ ಕೊಟ್ಟಿದ್ದಾರೆ. ಅವರ ಸೀಕ್ರೆಟ್ ಎಂಟ್ರಿಯಿಂದ ಬಿಗ್ ಮನೆಯಲ್ಲಿರುವ ಎಲ್ಲಾ ಸ್ಪರ್ಧಿಗಳಿಗೆ ಬಿಗ್ ಶಾಕ್ ಉಂಟಾಗಿದೆ. ಅವರು ಮತ್ತೆ ಯಾಕೆ ಬಿಗ್ ಬಾಸ್ ಮನೆಗೆ ಬಂದ್ದಿದ್ದಾರೆ. ಮತ್ತೆ ಆಟವನ್ನು ಕಂಟಿನ್ಯೂ ಮಾಡ್ತಾರಾ? ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ ನೋಡಿ. ಹೌದು, ಸ್ನೇಹಿತರೆ ನಾಮಿನೇಟ್ ಆಗದೆ ಸ್ವತಃ ತಾವೇ ಎಕ್ಸಿಟ್ ಆಗಿರುವಂತಹ ಗೋಲ್ಡ್ ಸುರೇಶ್ ಇದೀಗ ಮತ್ತೆ ರೀಎಂಟ್ರಿ ಕೊಟ್ಟಿದ್ದಾರೆ.
ಬಿಗ್ ಬಾಸ್ ಮನೆಯಿಂದ ಗೋಲ್ಡ್ ಸುರೇಶ್ ಅವರು ದಿಢೀರ್ ಅಂತಾ ಹೊರಬಂದ ಬಳಿಕ ಅನೇಕ ಗಾಳಿಸುದ್ದಿಗಳು ಹರಿದಾಡಿದ್ದವು. ಇದಕ್ಕೆ ಸ್ವತಃ ಲೈವ್‌ನಲ್ಲಿ ಬರುವ ಮೂಲಕ ಅವರೇ ಉತ್ತರ ನೀಡಿದ್ದರು. ಈ ವಾರದ ʼಸೂಪರ್ ಸಂಡೇ ವಿತ್ ಬಾದ್ಷಾ ಸುದೀಪʼ ಎಪಿಸೋಡ್‌ನ ಪ್ರೋಮೋದಲ್ಲಿ ಗೋಲ್ಡ್ ಸುರೇಶ್ ಮತ್ತೆ ಬಿಗ್ ಬಾಸ್ ಮನೆಯ ವೇದಿಕೆಯ ಮೇಲೆ ಕಾಣಿಸಿಕೊಂಡಿದ್ದಾರೆ. ಇದು ವೀಕ್ಷಕರಿಗೆ ಅಚ್ಚರಿ ಮೂಡಿಸಿದ್ರೆ, ಬಿಗ್ ಮನೆಯ ಸ್ಪರ್ಧಿಗಳಿಗೆ ಶಾಕ್ ಉಂಟು ಮಾಡಿದೆ.
ಕಲರ್ಸ್ ಕನ್ನಡ ತನ್ನ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿರುವ ಪ್ರೋಮೋ ವಿಡಿಯೋದಲ್ಲಿ ಗೋಲ್ಡ್ ಸುರೇಶ್ ಬಿಗ್ ಬಾಸ್ ವೇದಿಕೆಗೆ ಬಂದಿರುವುದನ್ನು ತೋರಿಸಿದ್ದಾರೆ. ಮೊದಲು ಸ್ಪರ್ಧಿಗಳ ಜೊತೆಗೆ ಕಿಚ್ಚ ಸುದೀಪ್ ಮಾತನಾಡಿರುವ ವಿಡಿಯೋ ತೋರಿಸಲಾಗಿದ್ದು, ನಂತರ ಸ್ಪರ್ಧಿಗಳಿಗೆ ಶಾಕ್ ನೀಡುವಂತೆ ಗೋಲ್ಡ್ ಸುರೇಶ್ ಎಂಟ್ರಿಯಾಗಿದೆ.
ಖುಷಿಯಾಗಿರೋ ದೊಡ್ಮನೆಗೆ ಮತ್ತೆ ಎಂಟ್ರಿ ಕೊಡ್ತಾರಾ ಗೋಲ್ಡ್ ಸುರೇಶ? ಸೂಪರ್ ಸಂಡೇ ವಿತ್ ಬಾದ್ಷಾ ಸುದೀಪ | ಇಂದು ರಾತ್ರಿ 9#BiggBossKannada11 #BBK11 #HosaAdhyaya #ColorsKannada #BannaHosadaagideBandhaBigiyaagide #ಕಲರ್‌ಫುಲ್‌ಕತೆ #colorfulstory #Kicchasudeepa #BBKPromo pic.twitter.com/7taQ1dQm9l
— Colors Kannada (@ColorsKannada) December 22, 2024
ಗೋಲ್ಡ್ ಸುರೇಶ್ ವೇದಿಕೆಗೆ ಬರುತ್ತಿದ್ದಂತೆಯೇ ಮಾತನಾಡುವ ಕಿಚ್ಚ ಸುದೀಪ್, ಮನೆಯೊಳಗಡೆ ಅಲ್ಲೊಂದು ಜಾಗ ಖಾಲಿ ಹೊಡೆಯುತ್ತಾ ಇದೆʼ ಅಂತಾ ಹೇಳುತ್ತಾರೆ. ಇದಕ್ಕೆ ಪ್ರತಿಕ್ರಿಯಿಸುವ ಗೋಲ್ಡ್ ಸುರೇಶ್, ʼಈ ಕ್ಷಣಕ್ಕೂ ನನಗೆ ಬಿಗ್ ಮನೆಯೊಳಗೆ ಹೋಗಿ ಅಂತಾ ಹೇಳಿದರೆ ನಾನು ಖುಷಿಯಾಗಿ ಹೋಗುತ್ತೇನೆ ಸರ್ʼ ಅಂತಾ ಹೇಳುತ್ತಾರೆ. ಸುರೇಶ್ ಅವರ ಈ ಮಾತುಗಳನ್ನು ಕೇಳಿ ಇನ್ನುಳಿದ ಸ್ಪರ್ಧಿಗಳ ಮುಖಗಳು ಕಳೆಗುಂದಿಂತಾಗಿದ್ದು, ಎಲ್ಲರಿಗೂ ಶಾಕ್ ಆಗಿದೆ.
ಅಂದಹಾಗೆ ಕನ್ಸ್‌ಟ್ರಕ್ಷನ್ ಬ್ಯುಸಿನೆಸ್ ಮಾಡುತ್ತಿರುವ ಸುರೇಶ್ ಅವರು ಬಿಗ್ ಬಾಸ್ ಮನೆಗೆ ಬರುವಾಗ ತಮ್ಮ ವ್ಯವಹಾರಗಳ ಜವಾಬ್ದಾರಿಯನ್ನು ತಮ್ಮ ಪತ್ನಿಗೆ ವಹಿಸಿದ್ದರಂತೆ. ಈ ಬಗ್ಗೆ ಮಾತನಾಡಿದ್ದ ಅವರು, ʼನನ್ನ ವ್ಯವಹಾರಗಳನ್ನೆಲ್ಲಾ ನನ್ನ ಪತ್ನಿಗೆ ನೋಡಿಕೊಳ್ಳಲು ಹೇಳಿಹೋಗಿದ್ದೆ. ಅವಳಿಗೆ ಅದನ್ನು ಹ್ಯಾಂಡಲ್ ಮಾಡಲು ಸಾಧ್ಯವಾಗಲಿಲ್ಲ. ಕೆಲಸದ ಒತ್ತಡ ಜಾಸ್ತಿ ಆಯ್ತು. ಎಲ್ಲಿ ನಾನು ಎಡವುತ್ತೇನೋ ಅನ್ನೋ ಗೊಂದಲದಲ್ಲಿ ನನ್ನ ಪತ್ನಿ ಇದ್ದರು. ಆ ಗೊಂದಲದಿಂದ ನಾನು ಹೊರಗೆಬಂದು, ನನ್ನ ಪತ್ನಿಗೆ ಸಪೋರ್ಟ್ ಮಾಡಬೇಕಾಯ್ತುʼ ಅಂತಾ ಹೇಳಿದ್ದರು.
ಗೋಲ್ಡ್ ಸುರೇಶ್ ಅವರು ಮತ್ತೆ ಏಕೆ ಬಿಗ್ ಬಾಸ್ ವೇದಿಕೆಗೆ ಬಂದಿದ್ದಾರೆ..? ಅವರಿಗೆ ಮತ್ತೊಂದು ಅವಕಾಶ ನೀಡಲಾಗುತ್ತಾ..? ಅವರು ಮತ್ತೆ ಬಿಗ್ ಬಾಸ್ ಮನೆಯೊಳಗೆ ಹೋಗುತ್ತಾರಾ..? ಅನ್ನೋ ಪ್ರಶ್ನೆಗಳು ವೀಕ್ಷಕರಲ್ಲಿ ಮೂಡಿದೆ. ಇದಕ್ಕೆ ಇಂದಿನ ಸಂಚಿಕೆಯಲ್ಲಿ ಉತ್ತರ ಸಿಗಲಿದೆ.