BBK11: ಈ ವಾರ ಬಿಗ್‌ಬಾಸ್ ಮನೆಯಿಂದ ಆಚೆ ಬರೋದು ಯಾರು? ಈ ನಾಲ್ವರಲ್ಲಿ ಯಾರಿಗೆ ಬಿಗ್ ಶಾಕ್..?
ದಿನದಿಂದ ದಿನಕ್ಕೆ ಕನ್ನಡದ ಬಿಗ್ ಬಾಸ್ ರಿಯಾಲಿಟಿ ಶೋ ಟ್ವಿಸ್ಟ್ ಪಡೆದುಕೊಂಡು ಮುನ್ನುಗ್ಗುತ್ತಿದೆ. ವಾರ ಕಳೆದಂತೆ ಬಿಗ್‌ಬಾಸ್ ಮನೆಯಿಂದ ಒಬ್ಬೊಬ್ಬರೇ ಸ್ಪರ್ಧಿಗಳು ಆಚೆ ಹೋಗುತ್ತಿದ್ದಾರೆ. ಆದರೆ ಈ ವಾರ ನಾಮಿನೇಟ್ ಆಗಿರೋ ನಾಲ್ವರು ಸ್ಪರ್ಧಿಗಳಿಗೆ ಬಿಗ್ ಬಾಸ್ ಶಾಕ್ ಅಂಡ್ ಸರ್ಪ್ರೈಸ್ ನೀಡಲಿದ್ದಾರೆ.
ಹೌದು, ಬಿಗ್ ಬಾಸ್ ಸೀಸನ್ 11 83ನೇ ದಿನಕ್ಕೆ ಕಾಲಿಟ್ಟಿದೆ. 14ನೇ ವಾರಕ್ಕೆ ಕಾಲಿಡಲು ಸಜ್ಜಾಗಿರೋ ಹೊತ್ತಿನಲ್ಲಿ ಸ್ಪರ್ಧಿಗಳು ಸಖತ್ ಅಲರ್ಟ್ ಆಗಿದ್ದಾರೆ. ಇದೇ ಹೊತ್ತಲ್ಲಿ ಬಿಗ್ ಬಾಸ್ ಮನೆಯಿಂದ ಆಚೆ ಹೋಗಲು 4 ಸ್ಪರ್ಧಿಗಳು ನಾಮಿನೇಟ್ ಆಗಿದ್ದಾರೆ.
ಇದೇ ಮೊದಲ ಬಾರಿಗೆ ಬಿಗ್ ಬಾಸ್ ಮನೆಯಿಂದ ಆಚೆ ಹೋಗಲು ಸ್ಟ್ರಾಂಗ್ ಸ್ಪರ್ಧಿಗಳು ನಾಮಿನೇಟ್ ಆಗಿದ್ದಾರೆ. ತ್ರಿವಿಕ್ರಮ್, ರಜತ್, ಮೋಕ್ಷಿತಾ ಹಾಗೂ ಹನುಮಂತ ಈ 4 ಮಂದಿ 13ನೇ ವಾರಕ್ಕೆ ಬಿಗ್ ಬಾಸ್ ಮನೆಯಿಂದ ಆಚೆ ಹೋಗಲು ನಾಮಿನೇಟ್ ಆಗಿದ್ದಾರೆ.
ಸದ್ಯ ಬಿಗ್ ಬಾಸ್ ಮನೆಯಲ್ಲಿ ಒಟ್ಟು 10 ಸ್ಪರ್ಧಿಗಳು ಉಳಿದುಕೊಂಡಿದ್ದಾರೆ. ಈ 10 ಸ್ಪರ್ಧಿಗಳ ಪೈಕಿ 4 ಮಂದಿ ನಾಮಿನೇಟ್ ಆಗಿದ್ದು, 6 ಸ್ಪರ್ಧಿಗಳು ಕ್ಯಾಪ್ಟನ್ಸಿ ಓಟಕ್ಕೆ ಸೆಲೆಕ್ಟ್ ಆಗಿದ್ದರು. ಇವರ ಪೈಕಿ ಫೈನಲ್ ಕ್ಯಾಪ್ಟನ್ಸಿ ಓಟಕ್ಕೆ ಐಶ್ವರ್ಯಾ ಹಾಗೂ ಭವ್ಯಾ ಗೌಡ ಆಯ್ಕೆಯಾಗಿದ್ದರು. ಆದರೆ ಬಿಗ್ ಬಾಸ್ ಕೊಟ್ಟ ಟಾಸ್ಕ್ನಲ್ಲಿ ಭವ್ಯಾಗೌಡ ಗೆದ್ದು ಕ್ಯಾಪ್ಟನ್ ಆಗಿದ್ದಾರೆ.
ಆದರೆ ನಾಮಿನೇಟ್ ಆಗಿರೋ 4 ಸ್ಪರ್ಧಿಗಳಿಗೆ ಬಿಗ್ ಬಾಸ್ ನಾಳಿನ ಸಂಚಿಕೆಯಲ್ಲಿ ಚಮಕ್ ನೀಡಲಿದ್ದಾರೆ. ಏಕೆಂದರೆ ಸಂಚಿಕೆಯ ಕೊನೆಯಲ್ಲಿ ವೀಕ್ಷಕರು ವೋಟ್ ಮಾಡಲು ವೋಟಿಂಗ್ ಲೈನ್ಸ್ ತೆರೆದಿಲ್ಲ. ನಾಮಿನೇಟ್ ಆದ ವಾರದ ಕಾರ್ಯಕ್ರಮದ ಕೊನೆಯಲ್ಲಿ ನಾಮಿನೇಟ್ ಆದ ಸ್ಪರ್ಧಿಗಳ ಹೆಸರನ್ನು ಬಿಗ್ ಬಾಸ್ ಘೋಷಣೆ ಮಾಡುತ್ತಿದ್ದರು. ಆದರೆ ಈ ಬಾರಿಯೂ ಮಾಡಿಲ್ಲ. ಜೊತೆಗೆ ವೋಟಿಂಗ್ ಲೈನ್ಸ್ ಕೂಡ ಓಪನ್ ಆಗಿಲ್ಲ.
ಹೀಗಾಗಿ ಒಂದು ಅರ್ಥದಲ್ಲಿ ಈ ವಾರ ಎಲಿಮಿನೇಷನ್ ಇರೋದಿಲ್ಲವೆಂದು ಖಚಿತವಾಗಿದೆ. ಈ ವಿಚಾರ ಮನೆಯಲ್ಲಿರೋ ಸ್ಪರ್ಧಿಗಳಿಗೆ ಗೊತ್ತಿಲ್ಲ. ಹೀಗಾಗಿ 4 ಮಂದಿ ನಾಮಿನೇಷನ್ ಟೆನ್ಷನ್ನಲ್ಲೇ ಇದ್ದಾರೆ. ಹಾಗಾದ್ರೆ ಭಾನುವಾರದ ಸಂಚಿಕೆಯಲ್ಲಿ ಬಿಗ್ ಬಾಸ್ ಟ್ವಿಸ್ಟ್ ಕೊಡ್ತಾರಾ? ಅಥವಾ ಕಳೆದ ಕೆಲವು ಸೀಸನ್‌ಗಳ ಸ್ಪರ್ಧಿಗಳನ್ನು ಸೀಕ್ರೆಟ್ ರೂಮ್‌ನಲ್ಲಿ ಇರಿಸುತ್ತಾರಾ? ಅಂತಾ ಕಾದು ನೋಡಬೇಕಿದೆ.