BBK11: ಗ್ರ್ಯಾಂಡ್ ಫಿನಾಲೆ ವಾರಕ್ಕೆ ಟಿಕೆಟ್ ಯಾರಿಗೆ? ಸುಳಿವು ನೀಡಿದ ಕಿಚ್ಚ ಸುದೀಪ್!! ಯಾರು ನೋಡಿ
ಈ ಹಿಂದಿನ ಎಪಿಸೋಡ್‌ನಲ್ಲಿ ಕಿಚ್ಚ ಸುದೀಪ್ ಅವರು ಈ ವಾರ ಒಬ್ಬ ಸ್ಪರ್ಧಿ ಡೈರೆಕ್ಟ್ ಫಿನಾಲೆಗೆ ಟಿಕೆಟ್ ಪಡ್ಕೊಳ್ತಾನೆ ಅಂತಾ ಹೇಳಿದ್ರು. ಹಾಗಾದ್ರೆ ಇರುವ ಒಂಬತ್ತು ಜನ ಸ್ಪರ್ಧಿಗಳ ಪೈಕಿ ಯಾವ ಒಬ್ಬ ಸ್ಪರ್ಧಿ ಫಿನಾಲೆ ವಾರಕ್ಕೆ ಡೈರೆಕ್ಟ್ ಟಿಕೆಟ್ ಪಡ್ಕೊಳ್ತಾನೆ? ಅನ್ನೋ ಕುತೂಹಲ ಮೂಡಿದೆ. ಈಗ ಬಿಗ್ ಬಾಸ್ ಮನೆಯಲ್ಲಿ ಉಳಿದಿರೋದು ಕೇವಲ ಒಂಬತ್ತು ಜನ ಸ್ಪರ್ಧಿಗಳು ಮಾತ್ರ. ಇನ್ನು ಕಳೆದ ವಾರ ವೀಕೆಂಡ್‌ಗೆ ಬಂದಂತಹ ಕಿಚ್ಚ ಸುದೀಪ್ ಅವರು ಒಂಬತ್ತು ಜನ ಸ್ಪರ್ಧಿಗಳಿಗೆ ಎಚ್ಚರಿಕೆಯ ಮಾತುಗಳನ್ನು ಹೇಳಿದ್ದರು. ಬಹಳ ಸೂಕ್ಷ್ಮವಾಗಿ ಮಾತಾಡಿದಂತಹ ಕಿಚ್ಚ ಸುದೀಪ್, ʼಬಿಗ್ ಬಾಸ್ ಮನೆಯಲ್ಲಿ ಇನ್ನು ಕೇವಲ ಮೂರು ವಾರಗಳ ಕಾಲ ಮಾತ್ರ ನಿವೆಲ್ಲರೂ ಇರುತ್ತೀರಿʼ ಎಂದಿದ್ದರು.
ಬಿಗ್ ಬಾಸ್ ಮನೆಯಲ್ಲಿ ನೀವು ಇರೋದು ಇನ್ನೂ ಮೂರು ವಾರಗಳು ಮಾತ್ರ ಅಂತಾ ಒತ್ತಿ ಒತ್ತಿ ಹೇಳಿದ ಕಿಚ್ಚ ಸುದೀಪ್, ವಿನ್ನರ್ ಯಾರಾಗ್ತಾರೆ ಅನ್ನೋ ಸುಳಿವನ್ನು ನೀಡಿದ್ದಾರೆ. ಇಷ್ಟು ದಿನಗಳ ತನಕ ತಪ್ಪನ್ನು ಸರಿಪಡಿಸಿಕೊಂಡು ಕೇವಲ ತನಗಾಗಿ ತನ್ನ ಆಟವನ್ನು ಯಾರು ಆಡ್ತಾರೋ ಅವನು ಗೆಲುವಿಗೆ ಹತ್ತಿರ ಆಗ್ತಾನೆ ಅಂತಾ ತಮ್ಮದೇ ಶೈಲಿಯಲ್ಲಿ ಸುದೀಪ್ ಅವರು ತಿಳಿಸಿದರು. ಅವರ ಮಾತಿನ ಪ್ರಕಾರ, ಇಷ್ಟು ದಿನ ಹನುಮಂತ ಅವರು ಯಾವ ರೀತಿ ಆಟ ಆಡ್ಕೊಂಡು ಬಂದಿದ್ದಾರೆ ಅನ್ನೋದನ್ನ ನೀವು ಸಹ ನೋಡಿದ್ದೀರಾ. ಇಲ್ಲಿ ಹನುಮಂತ ಅವರು ಯಾರಿಗೆ ಏನೇ ಹೇಳಬೇಕು ಅಂದ್ರು ಡೈರೆಕ್ಟ್ ಆಗಿ ಹೇಳ್ತಾ ಇದ್ರು. ಆದರೆ ಟಾಸ್ಕ್ ಒಂದರಲ್ಲಿ ಹನುಮಂತ ಡೈರೆಕ್ಟಾಗಿ ಹೇಳಲಿಲ್ಲ. ಮಂಜು ಅವರ ಬಳಿ ಹೋಗಿ ತ್ರಿವಿಕ್ರಮ್ ಬಗ್ಗೆ ಹೇಳ್ತಾರೆ. ಹೀಗಾಗಿ ಕಿಚ್ಚ ಸುದೀಪ್ ಅವರು ಆ ರೀತಿ ಮಾಡಬಾರದು ಅಂತಾ ಹನುಮಂತಗೆ ಬುದ್ದಿ ಮಾತನ್ನು ಹೇಳ್ತಾರೆ.
ಕಿಚ್ಚ ಸುದೀಪ್ ಅವರು ಹನುಮಂತನಿಗೆ ನಿಮಗೆ ಗೆಲ್ಲುವ ಸಾಮರ್ಥ್ಯವಿದೆ ಅಂತಾ ಹಿಂಟ್ ಸಹ ಕೊಡ್ತಾರೆ. ಇದರ ಜೊತೆಗೆ ಒಬ್ಬ ಸ್ಪರ್ಧಿಗೆ ಡೈರೆಕ್ಟ್ ಫಿನಾಲೆ ವಾರಕ್ಕೆ ಟಿಕೆಟ್ ಸಿಗುತ್ತೆ ಅಂತಾ ಹೇಳ್ತಾರೆ. ಇದಲ್ಲದೆ ಬಿಗ್ ಬಾಸ್ ಒಂದು ಟಾಸ್ಕನ್ನು ಕೊಟ್ಟು ಅದರಲ್ಲಿ ಜಾಸ್ತಿ ಅಂಕ ಪಡೆದ ಐದು ಸ್ಪರ್ಧಿಗಳ ಹೆಸರನ್ನ ಸೋಶಿಯಲ್ ಮೀಡಿಯಾದಲ್ಲಿ ಹರಿಬಿಟ್ಟು ಅದಕ್ಕೆ ವೋಟಿಂಗ್ ಲೈನ್ ಕ್ರಿಯೇಟ್ ಮಾಡಿ, ಅದರಲ್ಲಿ ಜಾಸ್ತಿ ವೋಟ್ ಪಡೆದ ಒಬ್ಬ ಸ್ಪರ್ಧಿಯನ್ನ ಬಿಗ್ ಬಾಸ್ ಫಿನಾಲೆ ವಾರಕ್ಕೆ ಕಾಲಿಡುವಂತಹ ಮೊದಲ ಸ್ಪರ್ಧಿ ಅಂತಾ ಘೋಷಣೆ ಮಾಡಬಹುದು.
ಇದರ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ತುಂಬಾ ಸಮೀಕ್ಷೆಗಳು ಸಹ ನಡೆಯುತ್ತಿವೆ. ಇದರಲ್ಲಿ ಪೈಪೋಟಿ ಇರೋದು ರಜತ್, ಉಗ್ರಂ ಮಂಜು, ಹನುಮಂತ ಮತ್ತೆ ತ್ರಿವಿಕ್ರಮ್ ನಡುವೆ. ಇದರಲ್ಲಿ ಹನುಮಂತನ ಹೆಸರು ಮೊದಲು ಕೇಳಿಬರುತ್ತಿದೆ. 2ನೇ ಹೆಸರು ತ್ರಿವಿಕ್ರಮ್, 3ನೇ ಹೆಸರು ಉಗ್ರ ಮಂಜು ಮತ್ತು 4ನೇ ಹೆಸರು ರಜತ್ ಅವರದು. ಈ ನಾಲ್ಕು ಜನರು ಬಿಗ್ ಬಾಸ್ ಫಿನಾಲೆ ವಾರಕ್ಕೆ ಕಾಲಿಡಬಹುದು ಅಂತಾ ಹೇಳಲಾಗುತ್ತಿದೆ.
ಇನ್ನು ಈ ವಾರ ಒಬ್ಬ ಸ್ಪರ್ಧಿ ಡೈರೆಕ್ಟ್ ಗ್ರ್ಯಾಂಡ್ ಫಿನಾಲೆ ವಾರಕ್ಕೆ ಕಾಲಿಡ್ತಾರೆ. ನಿಮ್ಮ ಪ್ರಕಾರ ಫಿನಾಲೆ ವಾರಕ್ಕೆ ಕಾಲಿಡುವಂತ ಆ ಸ್ಪರ್ಧಿ ಯಾರು? ಜೊತೆಗೆ ಈ ಬಾರಿಯ ಬಿಗ್ ಬಾಸ್ ವಿನ್ನರ್ ಯಾರಾಗ್ತಾರೆ? ಅನ್ನೋದರ ಬಗ್ಗೆ ಕಾಮೆಂಟ್ ಮಾಡಿ ನಮಗೆ ತಿಳಿಸಿರಿ...