ಟೀಂ ಇಂಡಿಯಾಗೆ ಹೊಸ ನಾಯಕ! ರೋಹಿತ್ ಅಧಿಪತ್ಯ ಅಂತ್ಯ… 27ರ ಹರೆಯದ ಈ ಕ್ರಿಕೆಟಿಗನಿಗೆ ಕ್ಯಾಪ್ಟನ್ಸಿ!

Sat, 22 Jun 2024-7:54 pm,

ಐಸಿಸಿ ಟಿ20 ವಿಶ್ವಕಪ್ 2024ರ ನಂತರ, ಟೀಂ ಇಂಡಿಯಾ ತನ್ನ ಮೊದಲ ಸರಣಿಯನ್ನು ಜಿಂಬಾಬ್ವೆ ವಿರುದ್ಧ ಆಡಲಿದೆ. ಈ ಎರಡು ತಂಡಗಳ ನಡುವೆ ಐದು ಪಂದ್ಯಗಳ ಟಿ20 ಸರಣಿ ನಡೆಯಲಿದೆ.

ಜಿಂಬಾಬ್ವೆ ಈ ಸರಣಿಯನ್ನು ಆಯೋಜಿಸುತ್ತಿದ್ದು, ಈ ಸರಣಿಯಲ್ಲಿ ಕೆಲವು ಹೊಸ ಪ್ರತಿಭೆಗಳು ಟೀಂ ಇಂಡಿಯಾಗೆ ಪಾದಾರ್ಪಣೆ ಮಾಡಲಿದ್ದಾರೆ. ಇದರ ಬೆನ್ನಲ್ಲೇ, ಬಿಸಿಸಿಐ ಟೀಂ ಇಂಡಿಯಾದ ಜವಾಬ್ದಾರಿಯನ್ನು ತಂಡದ ನಾಯಕ ರೋಹಿತ್ ಶರ್ಮಾ ಬದಲಿಗೆ 27 ವರ್ಷದ ಆಟಗಾರನಿಗೆ ಹಸ್ತಾಂತರಿಸಲಿದೆ ಎಂದು ಹೇಳಲಾಗುತ್ತಿದೆ.

ಭಾರತ ಮತ್ತು ಜಿಂಬಾಬ್ವೆ (ZIM vs IND) ಮುಂದಿನ ತಿಂಗಳು ಐದು ಪಂದ್ಯಗಳ T20 ಸರಣಿಯನ್ನು ಆಡಲಿದೆ. ಸರಣಿಯ ಮೊದಲ ಪಂದ್ಯ ಜುಲೈ 6 ರಂದು ನಡೆಯಲಿದೆ. ಜುಲೈ 14 ರಂದು ನಡೆಯಲಿರುವ ಕೊನೆಯ ಪಂದ್ಯದಲ್ಲಿ ಉಭಯ ತಂಡಗಳು ಮುಖಾಮುಖಿಯಾಗಲಿವೆ. ಎಲ್ಲಾ ಪಂದ್ಯಗಳು ಹರಾರೆ ಮೈದಾನದಲ್ಲಿ ನಡೆಯಲಿವೆ.

ಇನ್ನು ರೋಹಿತ್ ಶರ್ಮಾ ಸೇರಿದಂತೆ ತಂಡದ ಹಿರಿಯ ಕ್ರಿಕೆಟಿಗರಾದ ವಿರಾಟ್ ಕೊಹ್ಲಿ, ಹಾರ್ದಿಕ್ ಪಾಂಡ್ಯ, ರಿಷಭ್ ಪಂತ್, ಜಸ್ಪ್ರೀತ್ ಬುಮ್ರಾ, ಸೂರ್ಯಕುಮಾರ್ ಯಾದವ್ ಮುಂತಾದವರು ಈ ಟೂರ್ನಿಯನ್ನು ಆಡುವುದಿಲ್ಲ. ಹೀಗಿರುವಾಗ ಬಿಸಿಸಿಐ 27ರ ಹರೆಯದ ಆಟಗಾರ ರುತುರಾಜ್ ಗಾಯಕ್ವಾಡ್‌’ಗೆ ನಾಯಕತ್ವವನ್ನು ಹಸ್ತಾಂತರಿಸುವ ಸಾಧ್ಯತೆ ಇದೆ.

ರುತುರಾಜ್ ಗಾಯಕ್ವಾಡ್ ಉತ್ತಮ ನಾಯಕತ್ವದ ಅನುಭವ ಹೊಂದಿದ್ದಾರೆ. ಕಳೆದ ವರ್ಷ ಚೀನಾದಲ್ಲಿ ನಡೆದ ಏಷ್ಯನ್ ಗೇಮ್ಸ್‌’ನಲ್ಲಿ ಭಾರತ ತಂಡವನ್ನು ಮುನ್ನಡೆಸಿದ್ದರು. ಅವರ ನಾಯಕತ್ವದಲ್ಲಿ ಚಿನ್ನದ ಪದಕ ಕೂಡ ಗೆದ್ದಿತ್ತು. ಇದಲ್ಲದೆ, ಗಾಯಕ್ವಾಡ್ ಐಪಿಎಲ್ 2024ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ನಾಯಕರಾಗಿದ್ದರು.

2021ರಲ್ಲಿ ಭಾರತ ಪರ ಅಂತಾರಾಷ್ಟ್ರೀಯ ಕ್ರಿಕೆಟ್‌’ಗೆ ಪಾದಾರ್ಪಣೆ ಮಾಡಿರುವ ರುತುರಾಜ್ ಗಾಯಕ್ವಾಡ್ ಇದುವರೆಗೆ 6 ODI ಮತ್ತು 19 T20I ಪಂದ್ಯಗಳನ್ನು ಆಡಿದ್ದಾರೆ. ಏಕದಿನದಲ್ಲಿ 115 ರನ್ ಗಳಿಸಿದ್ದು, ಟಿ20ಯಲ್ಲಿ 500 ರನ್ ಗಳಿಸಿದ್ದಾರೆ. ಇದರಲ್ಲಿ ಅವರ ಅತ್ಯುತ್ತಮ ಸ್ಕೋರ್ 123. ಇದಲ್ಲದೇ ರಿತುರಾಜ್ ಗಾಯಕ್ವಾಡ್ 29 ಪ್ರಥಮ ದರ್ಜೆ ಪಂದ್ಯಗಳಲ್ಲೂ ತಮ್ಮ ಪ್ರತಿಭೆ ತೋರಿದ್ದಾರೆ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link