Damaged Liver Warning signs : ಲಿವರ್ ಸಮಸ್ಯೆಯ ಲಕ್ಷಣಗಳಾಗಿವೆ ಈ ಸಂಕೇತಗಳು
ಯಾವ ಕೆಲಸವನ್ನು ಮಾಡದೇ ಸುಸ್ತಾಗುತ್ತಿದ್ದರೆ ದೌರ್ಬಲ್ಯ ಅನುಭವಿಸುತ್ತಿದ್ದರೆ, ನಿಮ್ಮ ಯಕೃತ್ತು ಹಾಳಾಗಲು ಪ್ರಾರಂಭಿಸಿರುವುದು ಖಚಿತ. ಈ ಸ್ಥಿತಿಯು ಕೆಲವು ದಿನಗಳವರೆಗೆ ಮುಂದುವರಿದರೆ, ನಿಮ್ಮ ಯಕೃತ್ತಿನ ಪರೀಕ್ಷೆಗೆ ಒಳಗಾಗಬೇಕಾಗುತ್ತದೆ
ನೀವು ಆಹಾರವನ್ನು ಸರಿಯಾಗಿ ಜೀರ್ಣಿಸಿಕೊಳ್ಳಳು ಸಾಧ್ಯವಾಗದೇ ಇರುವುದು, ಹಸಿವಾಗದೇ ಇರುವುದು ಯಕೃತ್ತು ಹಾಳಾಗಲು ಪ್ರಾರಂಭಿಸಿದೆ ಎಂಬುದರ ಸಂಕೇತವಾಗಿರುತ್ತದೆ. ಹಸಿವಿನ ಕೊರತೆ ಮತ್ತು ಆಹಾರ ಜೀರ್ಣವಾಗದಿರುವುದು ಯಕೃತ್ತಿಗೆ ಸಂಬಂಧಿಸಿದ ಸಮಸ್ಯೆಗಳು. ಇದು ಯಕೃತ್ತಿನ ಅಸಮರ್ಪಕ ಕಾರ್ಯವನ್ನು ಸೂಚಿಸುತ್ತದೆ. ಅಂತಹ ಸಮಸ್ಯೆಗಳಲ್ಲಿ, ವೈದ್ಯರನ್ನು ಭೇಟಿ ಮಾಡಬೇಕಾಗುತ್ತದೆ.
ನೀವು ಡಯಟ್ ಮಾಡದಿದ್ದರೂ ಅಥವಾ ತೂಕವನ್ನು ಕಡಿಮೆ ಮಾಡುವ ಯಾವುದೇ ಕೆಲಸ ಮಾಡದಿದ್ದರೂ ತ್ವರಿತವಾಗಿ ತೂಕವನ್ನು ಕಳೆದುಕೊಳ್ಳಲು ಪ್ರಾರಂಭಿಸಿದರೆ ಯಕೃತ್ತು ಹಾಳಾಗಲು ಪ್ರಾರಂಭಿಸಿದೆ ಎಂಬುದರ ಸಂಕೇತವಾಗಿರುತ್ತದೆ. ಅನಗತ್ಯ ತೂಕ ನಷ್ಟವು ಯಕೃತ್ತಿಗೆ ಸಂಬಂಧಿಸಿದ ಸಮಸ್ಯೆಯಾಗಿದೆ.
ಆಹಾರ ಸರಿಯಾಗಿ ಜೀರ್ಣವಾಗದಿರುವುದು, ಹಸಿವಾಗದಿರುವುದು, ಹೊಟ್ಟೆ ಉಬ್ಬರ, ಮುಂತಾದ ಸಮಸ್ಯೆಗಳಿಂದ ನಿಮ್ಮ ತ್ವಚೆಯು ತನ್ನ ಮೈಬಣ್ಣವನ್ನು ಕಳೆದುಕೊಳ್ಳಲಾರಂಭಿಸುತ್ತದೆ. ನಿಮ್ಮ ಚರ್ಮವು ಸಾಕಷ್ಟು ಪೋಷಣೆಯನ್ನು ಪಡೆಯದಿದ್ದರೆ, ನಿಮ್ಮ ಚರ್ಮವು ಹಳದಿ ಬಣ್ಣಕ್ಕೆ ತಿರುಗಲು ಪ್ರಾರಂಭಿಸುತ್ತದೆ. , ಚರ್ಮ ಹಳದಿ ಬಣ್ಣಕ್ಕೆ ತಿರುಗುತ್ತಿದ್ದರೆ ಅದನ್ನು ನಿರ್ಲಕ್ಷಿಸಬೇಡಿ.
ನೀವು ಊಟ ತಿಂದ ತಕ್ಷಣ ಹೊಟ್ಟೆ ನೋವಾಗುತ್ತಿದ್ದರೆ ಹೊಟ್ಟೆಯ ಮೇಲಿನ ಬಲಭಾಗದಲ್ಲಿ ಊತ ಕಾಣಿಸಿಕೊಂಡರೆ ಇದು ಯಕೃತ್ತಿನ ವೈಫಲ್ಯದ ಸಾಮಾನ್ಯ ಸಂಕೇತವಾಗಿದೆ. ನಿರಂತರ ಹೊಟ್ಟೆ ನೋವು ಕಾಣಿಸುತ್ತಿದ್ದರೆ, ಯಕೃತ್ತಿನ ಪರೀಕ್ಷೆಗೆ ಒಳಗಾಗಬೇಕು .