ದ್ವಿಚಕ್ರ ವಾಹನ ಚಲಾಯಿಸುವಾಗ ಈ ಸೇಫ್ಟಿ ಟಿಪ್ಸ್ ಗಳನ್ನು ತಿಳಿದುಕೊಂಡಿರಿ ..!

Thu, 30 Jun 2022-3:12 pm,

ದ್ವಿಚಕ್ರ ವಾಹನವನ್ನು ಓಡಿಸುವಾಗಲೂ ಹೆಡ್‌ಲೈಟ್ ಬೀಮ್ ಅನ್ನು ಸರಿಯಾಗಿ ಬಳಸುವುದು ಬಹಳ ಮುಖ್ಯ. ಹೈವೇಯಲ್ಲಿ ಹೈ ಬೀಮ್ ಬಳಸಿ ಎಂದು ಹೋಂಡಾ ಮೋಟಾರ್‌ಸೈಕಲ್ಸ್ ಹೇಳುತ್ತದೆ.  ನಗರದೊಳಗೆ ವಾಹನ ಚಾಲನೆ ಮಾಡುತ್ತಿದ್ದರೆ, ಅಥವಾ ಓವರ್‌ಟೇಕ್ ಮಾಡುತ್ತಿದ್ದರೆ,  ಲೋ ಬೀಮ್  ಬಳಸಿ. (ಫೋಟೋ - ಹೋಂಡಾ ಮೋಟಾರ್ ಸೈಕಲ್ಸ್)

ರಸ್ತೆಯಲ್ಲಿ ಕಾಣದ ಅಪಾಯಗಳ ಬಗ್ಗೆ ಯಾವಾಗಲೂ ಎಚ್ಚರದಿಂದಿರಿ.   ಅದಕ್ಕೆ ಅನುಗುಣವಾಗಿ ನಿಮ್ಮ ಚಟುವಟಿಕೆಗಳನ್ನು ಇಟ್ಟುಕೊಳ್ಳಿ. (ಫೋಟೋ - ಹೋಂಡಾ ಮೋಟಾರ್ ಸೈಕಲ್ಸ್)

ರಸ್ತೆಯಲ್ಲಿ ಯಾವುದೇ ವಾಹನವನ್ನು ತಪ್ಪು ದಾರಿಯಲ್ಲಿ ಹಿಂದಿಕ್ಕಬೇಡಿ. Honda Motorcycle ಹೇಳುತ್ತದೆ ತಿರುವು ಅಥವಾ ಕ್ರಾಸಿಂಗ್‌ನಲ್ಲಿ ಎಂದಿಗೂ ಓವರ್‌ಟೇಕ್ ಮಾಡಬಾರದು. ರಿಯರ್ ವ್ಯೂ ಮಿರರ್ ಮತ್ತು ಇಂಡಿಕೇಟರ್ ಆನ್‌ನೊಂದಿಗೆ ಯಾವಾಗಲೂ ಬಲಭಾಗದಿಂದ ಓವರ್‌ಟೇಕ್ ಮಾಡಿ. ನೀವು ಲೇನ್‌ಗಳನ್ನು ಬದಲಾಯಿಸಲು ಹೊರಟಾಗ, ಮೊದಲು ನಿಮ್ಮ ಭುಜದ ಕಡೆಗೆ ಹಿಂದೆ ನೋಡಿಕೊಳ್ಳಿ.  (ಫೋಟೋ - ಹೋಂಡಾ ಮೋಟಾರ್ ಸೈಕಲ್ಸ್)  

ದ್ವಿಚಕ್ರ ವಾಹನದಲ್ಲಿ ಎರಡೂ ಬ್ರೇಕ್‌ಗಳನ್ನು ಸರಿಯಾಗಿ ಬಳಸುವುದು ಅವಶ್ಯಕ. ನೀವು ಕಡಿಮೆ ಅಂತರದಲ್ಲಿ ನಿಲ್ಲಿಸಬೇಕಾದರೆ, ಮುಂಭಾಗದ ಬ್ರೇಕ್‌ನಲ್ಲಿ ನಾಲ್ಕು ಬೆರಳುಗಳಿಂದ ಸಮತೋಲನವನ್ನು ಕಾಯ್ದುಕೊಂಡು ಬ್ರೇಕ್ ಮಾಡಿ. (ಫೋಟೋ - ಹೋಂಡಾ ಮೋಟಾರ್ ಸೈಕಲ್ಸ್)

 ಟರ್ನ್ ತೆಗೆದುಕೊಳ್ಳುವಾಗ ವೇಗದ ಮಿತಿ ತಿಳಿದಿರಲಿ. ಈ ಸಮಯದಲ್ಲಿ ಮುಂಭಾಗದ ಬ್ರೇಕ್ ಬಳಸಬೇಡಿ. ಇಲ್ಲಿ ಸುರಕ್ಷಿತ ವೇಗ ಎಂದರೆ ಹೆಚ್ಚಿನ ವೇಗದಲ್ಲಿ ತಿರುಗಬಾರದು ಎಂದರ್ಥ. ವೇಗವು ನಿಮ್ಮ ನಿಯಂತ್ರಣದಲ್ಲಿರಬೇಕು. ಹೀಗಾದಾಗ ಬೈಕ್ ಅಥವಾ ಸ್ಕೂಟರ್ ಸ್ಕಿಡ್ ಆಗುವುದಿಲ್ಲ. (ಫೋಟೋ - ಹೋಂಡಾ ಮೋಟಾರ್ ಸೈಕಲ್ಸ್)

ಬೈಕ್ ಅಥವಾ ಸ್ಕೂಟರ್‌ನ ಹಿಂಬದಿ ಸವಾರರು ಎರಡೂ ಬದಿಗೂ ಕಾಲು ಹಾಕಿ ಕುಳಿತುಕೊಳ್ಳುವುದು ಸುರಕ್ಷಿತ. ಮಾತ್ರವಲ್ಲ ಸವಾರನ ಸೊಂಟವನ್ನು ಬಿಗಿಯಾಗಿ ಹಿಡಿದಿರಬೇಕು. (ಫೋಟೋ - ಹೋಂಡಾ ಮೋಟಾರ್ ಸೈಕಲ್ಸ್)

ZEENEWS TRENDING STORIES

By continuing to use the site, you agree to the use of cookies. You can find out more by Tapping this link