ಬೇಸಿಗೆಯಲ್ಲಿ ಈ ಹಣ್ಣು, ತರಕಾರಿ ಖರೀದಿಸುವ ವೇಳೆ ಆಗದಿರಲಿ ಇಂಥಹ ತಪ್ಪು ..!
ಸೌತೆಕಾಯಿಯನ್ನು ಖರೀದಿಸುವಾಗ ನಮ್ಮಲ್ಲಿ ಹೆಚ್ಚಿನವರು ತಪ್ಪು ಮಾಡುತ್ತಾರೆ. ದೊಡ್ಡದಾದ, ದಪ್ಪಗಿರುವ ಸೌತೆಕಾಯಿಯನ್ನು ಖರೀದಿಸುತ್ತೇವೆ. ಆದರೆ ಹೀಗೆ ಮಾಡಬಾರದು. ತೆಳುವಾದ, ಹಸಿರಾಗಿರುವ ನೀರಿನಿಂದ ಸಮೃದ್ಧವಾಗಿರುವ ತಾಜಾ ಸೌತೆಕಾಯಿಗಳನ್ನು ಖರೀದಿಸಬೇಕು. ಇದಲ್ಲದೆ, ನಾವು ದೇಸಿ ಸೌತೆಕಾಯಿಯನ್ನು ಖರೀದಿಸಲು ಪ್ರಯತ್ನಿಸಬೇಕು. ದಪ್ಪ ಸೌತೆಕಾಯಿಗಳನ್ನು ಖರೀದಿಸಿದರೆ, ಅದರಲ್ಲಿ ಹೆಚ್ಚು ಬೀಜಗಳಿರುತ್ತವೆ. ಹಳದಿ ಸೌತೆಕಾಯಿಯಲ್ಲಿ ನೀರಿನ ಪ್ರಮಾಣವು ಕಡಿಮೆ ಇರುತ್ತದೆ.
ಕಲ್ಲಂಗಡಿ ಹಣ್ಣಾದಾಗ ಗಾಢ ಬಣ್ಣವನ್ನು ಹೊಂದಿರುತ್ತದೆ. ಆದರೆ ಕಚ್ಚಾ ಕಲ್ಲಂಗಡಿ ಹೊಳೆಯುವ ಮೇಲ್ಮೈ ಮತ್ತು ಹಗುರವಾದ ಬಣ್ಣವನ್ನು ಹೊಂದಿರುತ್ತದೆ. ಇನ್ನು ಕಲ್ಲಂಗಡಿ ಖರೀದಿಸುವಾಗ ಯಾವುದೇ ರಂಧ್ರ ಇಲ್ಲ ಎನ್ನುವುದನ್ನು ಖಚಿತಪಡಿಸಿಕೊಳ್ಳಿ. ಕಲ್ಲಂಗಡಿ ಗಾಢ ಬಣ್ಣವನ್ನು ಹೊಂದಿದ್ದು, ಹಗುರವಾಗಿದ್ದರೆ ಅದು ತಿನ್ನಲು ಬಲು ರುಚಿಯಾಗಿರುತ್ತದೆ.
ಖರ್ಬೂಜ ಖರೀದಿಸಲು ಉತ್ತಮ ಮಾರ್ಗವೆಂದರೆ ಮೊದಲನೆಯದಾಗಿ, ಖರ್ಬೂಜ ಹಣ್ಣಿನ ಮೇಲಿನ ಭಾಗವನ್ನು ಒತ್ತಿ ನೋಡಿ. ಹೀಗೆ ಮಾಡುವಾಗ ಖರ್ಬೂಜ ಹಣ್ಣಾಗಿದೆಯೇ ಎನ್ನುವುದನ್ನು ಸುಲಭವಾಗಿ ತಿಳಿದುಕೊಳ್ಳಬಹುದು. ಈ ಹಣ್ಣಿನ ಮೇಲೆ ಹೆಚ್ಚು ರಂಧ್ರಗಳಿದ್ದರೆ, ಅಥವಾ ಒತ್ತಿ ನೋಡುವಾಗ ಕೊಳೆತಂತೆ ಅನಿಸಿದರೆ ಅದನ್ನು ಖರೀದಿಸಬೇಡಿ.
ಜಾಮೂನ್ ಅಥವಾ ನೇರಳೆ ಹಣ್ಣನ್ನು ಮಾರಾಟ ಮಾಡುವವರು ಅದನ್ನು ನೀರಿನಿಂದ ತೇವಗೊಳಿಸುವುದನ್ನು ನೋಡಿರಬೇಕು. ಅಂತಹ ಜಾಮೂನ್ ಗಳನ್ನೂ ಯಾವುದೇ ಕಾರಣಕ್ಕೂ ಖರೀದಿಸಬೇಡಿ. ಇದು ದೀರ್ಘಕಾಲದವರೆಗೆ ನೀರಿನಲ್ಲಿರುವುದರಿಂದ ಅವುಗಳ ಸಾರಗಳು ಸಹ ಹೊರಬರುತ್ತವೆ.