Weight Loss Mistakes: ತೂಕ ಇಳಿಸಲು ಎಂದಿಗೂ ಈ ತಪ್ಪುಗಳನ್ನು ಮಾಡಲೇಬೇಡಿ

Wed, 15 Jun 2022-1:49 pm,

ತೂಕವನ್ನು ಕಳೆದುಕೊಳ್ಳಲು, ನೀವು ಕೇವಲ ವಾಕಿಂಗ್ ಮಾಡಿದರೆ ಸಾಕಾಗುವುದಿಲ್ಲ. ಇದರೊಂದಿಗೆ ಕನಿಷ್ಠ ಅರ್ಧ ಘಂಟೆಯವರೆಗೆ ವರ್ಕೌಟ್ ಮಾಡಬೇಕು, ಇದು ಕೊಬ್ಬನ್ನು ಸುಡುತ್ತದೆ ಮತ್ತು ತೂಕವನ್ನು ಇಳಿಸಲು ಪೂರಕವಾಗಿದೆ.

ತೂಕವನ್ನು ಕಳೆದುಕೊಳ್ಳಲು ಪ್ರಯತ್ನಿಸುವಾಗ, ಪ್ರತಿದಿನವೂ ಕೆಲವು ರೀತಿಯ ದೈಹಿಕ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುವುದು ಒಳ್ಳೆಯದು. ಅದೇ ರೀತಿಯ ನಿರಂತರ ವ್ಯಾಯಾಮವನ್ನು ರೂಢಿಸಿಕೊಳ್ಳಿ. ಹಲವು ಬಾರಿ ಏನಾದರೂ ಕಾರಣಕ್ಕೆ ಇದು ಸಾಧ್ಯವಾಗುವುದಿಲ್ಲ. ಆದರೆ, ವಾರದಲ್ಲಿ ಕನಿಷ್ಟ ಐದು ದಿನವಾದರೂ ತಪ್ಪದೇ ವ್ಯಾಯಾಮ ಮಾಡಿ.

ನಿಮ್ಮ ದೈನಂದಿನ ಆಹಾರದಲ್ಲಿ ಆರೋಗ್ಯಕರ ಆಹಾರವನ್ನು ಮಾತ್ರ ಸೇರಿಸಿ, ಇದು ಚಯಾಪಚಯವನ್ನು ಸುಧಾರಿಸುತ್ತದೆ ಮತ್ತು ದೀರ್ಘಕಾಲದವರೆಗೆ ಹಸಿವನ್ನು ಅನುಭವಿಸುವುದಿಲ್ಲ.  ಇದಕ್ಕಾಗಿ ನೀವು ಋತುಮಾನದ ಹಣ್ಣುಗಳು, ಮೊಳಕೆ ಕಾಳುಗಳು, ಹಸಿರು ಎಲೆಗಳ ತರಕಾರಿಗಳು, ಬೀಜಗಳು ಮತ್ತು ಸಲಾಡ್ಗಳನ್ನು ತಿನ್ನಬಹುದು. ತೂಕ ಇಳಿಸಿಕೊಳ್ಳಲು ಬಯಸಿದರೆ ಜಂಕ್ ಫುಡ್ಸ್ ನಿಂದ ದೂರವಿರಿ.

ತೂಕ ಇಳಿಸಿಕೊಳ್ಳಲು ಪ್ರತಿನಿತ್ಯ ವ್ಯಾಯಾಮ ಮಾಡುವುದರ ಜೊತೆಗೆ ದೇಹದಲ್ಲಿ ನೀರಿನ ಕೊರತೆಯಾಗದಂತೆ ನೋಡಿಕೊಳ್ಳಿ. ಕೆಲವರು ವ್ಯಾಯಾಮದ ನಂತರ ಜ್ಯೂಸ್ ಸೇರಿದಂತೆ ಹಲವು ತಂಪು ಪಾನೀಯಗಳನ್ನು ಕುಡಿಯಲು ಇಚ್ಚಿಸುತ್ತಾರೆ. ಈ ಜ್ಯೂಸ್ ತಾಜಾ ಆಗಿದ್ದರೆ ಒಳಿತು, ಇಲ್ಲದಿದ್ದರೆ, ಇದು ವ್ಯತಿರಿಕ್ತ ಪರಿಣಾಮ ಬೀರಬಹುದು.  

ಕೆಲವರು ವ್ಯಾಯಾಮ ಎಂದರೆ  ಜಿಮ್‌ಗೆ ಹೋಗಿ ವರ್ಕ್ಔಟ್ ಮಾಡುವುದು ಮಾತ್ರ ಎಂದು ಭಾವಿಸುತ್ತಾರೆ. ಆದರೆ, ಇದು ತಪ್ಪು ಕಲ್ಪನೆ. ಆರೋಗ್ಯಕರವಾಗಿರಲು ಸಾಧ್ಯವಾದಷ್ಟು ಲಿಫ್ಟ್ ಅನ್ನು ಬಳಸಬೇಡಿ. ಹತ್ತಿರದ ಮಾರುಕಟ್ಟೆಗಳಿಗೆ ಹೋಗಬೇಕೆಂದಾಗ ವಾಹನದಲ್ಲಿ ಹೋಗುವ ಬದಲಿಗೆ ನಡೆದುಕೊಂಡು ಹೋಗಲು ಪ್ರಯತ್ನಿಸಿ. 

ಸೂಚನೆ: ಈ ಲೇಖನವು ಸಾಮಾನ್ಯ ಮಾಹಿತಿಗಾಗಿ ಮಾತ್ರ. ಇದು ಯಾವುದೇ ಔಷಧಿ ಅಥವಾ ಚಿಕಿತ್ಸೆಗೆ ಯಾವುದೇ ರೀತಿಯಲ್ಲಿ ಪರ್ಯಾಯವಾಗಿರಲು ಸಾಧ್ಯವಿಲ್ಲ. ಹೆಚ್ಚಿನ ವಿವರಗಳಿಗಾಗಿ ಯಾವಾಗಲೂ ನಿಮ್ಮ ವೈದ್ಯರನ್ನು ಸಂಪರ್ಕಿಸಿ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link