ಸೌದಿ ಅರೆಬಿಯಾದಲ್ಲಿಯೇ ಹುಟ್ಟಿ ಬೆಳೆದಿರುವ ಈ ಮಾಡೆಲ್ ಇರ್ಫಾನ್ ಪಠಾಣ್ ಪತ್ನಿ !ಸದಾ ಹಿಜಾಬ್ ನಲ್ಲಿಯೇ ಕಾಣಿಸಿಕೊಳ್ಳುವ ಅತಿಲೋಕ ಸುಂದರಿ

Thu, 08 Aug 2024-1:06 pm,

ಭಾರತದ ಮಾಜಿ ಸ್ಟಾರ್ ಕ್ರಿಕೆಟಿಗ ಇರ್ಫಾನ್ ಪಠಾಣ್ ತಮ್ಮ ಪತ್ನಿ ಸಫಾ ಬೇಗ್ ಅವರೊಂದಿಗೆ ಫೋಟೋ ಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಸಹ್ರೆ ಮಾಡುತ್ತಿರುತ್ತಾರೆ. ಆದರೆ ಅವರ ಪತ್ನಿ ಸಫಾ ಬೇಗ್ ಬಹತೇಕ ಫೋಟೋಗಳಲ್ಲಿ  ಹಿಜಾಬ್‌ನಲ್ಲಿಯೇ ಕಾಣಿಸಿಕೊಳ್ಳುತ್ತಾರೆ. 

ಸಫಾ ಬೇಗ್ ಸೌದಿ ಅರೇಬಿಯಾದ ಜೆಡ್ಡಾ ಜಿಲ್ಲೆಯ ಅಜೀಜಿಯಾದಲ್ಲಿ ಬೆಳೆದವರು. ಇವರ ಶಿಕ್ಷಣ ಅರೇಬಿಯಾದ ಇಂಟರ್‌ನ್ಯಾಶನಲ್ ಇಂಡಿಯನ್ ಸ್ಕೂಲ್‌ನಲ್ಲಿಯೇ  ಆಗಿರುವುದು. 

ಭಾರತೀಯ ತಂಡದ ಮಾಜಿ ಆಟಗಾರ ಇರ್ಫಾನ್ ಪಠಾಣ್ 23 ಅಕ್ಟೋಬರ್ 1984 ರಂದು ಜನಿಸಿದರೆ, ಅವರ ಪತ್ನಿ ಸಫಾ ಬೇಗ್ 28 ಫೆಬ್ರವರಿ 1994 ರಂದು ಸೌದಿ ಅರೇಬಿಯಾದಲ್ಲಿ ಜನಿಸಿದವರು. ಅಂದರೆ ಇವರಿಬ್ಬರ ನಡುವಿನ ವಯಸ್ಸಿನ ಅಂತರ ಹತ್ತು ವರ್ಷ.

ಇರ್ಫಾನ್ ಪಠಾಣ್ ಮತ್ತು ಸಫಾ ಬೇಗ್ ಎರಡು ವರ್ಷಗಳ ಕಾಲ ಪರಸ್ಪರ ಡೇಟಿಂಗ್ ಮಾಡಿದ್ದಾರೆ.ನಂತರ  2016ರ ಫೆಬ್ರವರಿಯಲ್ಲಿ ಇವಬ್ಬರ ವಿವಾಹವಾಗಿದೆ.  ಡಿಸೆಂಬರ್ ನಲ್ಲಿ ಮಗು ಹುಟ್ಟಿದೆ.    

ಸಫಾ ಬೇಗ್ ಮಧ್ಯಪ್ರಾಚ್ಯ ಏಷ್ಯಾದಲ್ಲಿ ದೊಡ್ಡ ಮಾಡೆಲ್ ಆಗಿದ್ದಾರೆ.ಅವರ ಫೋಟೋಗಳನ್ನು  ಅನೇಕ ದೊಡ್ಡ ಫ್ಯಾಷನ್ ನಿಯತಕಾಲಿಕೆಗಳಲ್ಲಿ ಪ್ರಕಟಿಸಲಾಗಿದೆ. ಅಲ್ಲದೆ ಇವರು ಅತ್ಯುತ್ತಮ ನೇಲ್ ಆರ್ಟಿಸ್ಟ್ ಕೂಡಾ.  

ಇನ್ನು ಸದಾ ಹಿಜಾಬ್‌ನಲ್ಲಿಯೇ ಇರುವುದು ಮುಖವನ್ನು ತೋರಿಸದೆ ಇರುವುದು ನನ್ನ ಆಸೆ ಎಂದು ತಾನು ಹಿಜಾಬ್ ಧರಿಸುವುದನ್ನು ಸಮರ್ಥಿಸಿಕೊಳ್ಳುತ್ತಾರೆ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link