ಫ್ಯಾಷನ್ ಪ್ರೇಮಿಗಳೇ ಇಲ್ಲಿವೆ ನೋಡಿ ಸುಂದರವಾದ ಐ ಮೇಕಪ್‌ಗಳು..!
ಕಣ್ಣಿನ ಮೇಕಪ್ ವಿಷಯಕ್ಕೆ ಬಂದಾಗ, ರೆಪ್ಪೆ ಮುಖಕ್ಕೆ ಬಹಳ ಅಂದ ನೀಡುತ್ತದೆ.
ಕೆಲವರಿಗೆ ಉದ್ದದ ರೆಪ್ಪೆ ಇಲ್ಲದಿರುವುದರಿಂದ ಕೃತಕ ಕಣ್ಣು ರೆಪ್ಪೆಗಳನ್ನು ಧರಿಸುತ್ತಾರೆ, ಅನೇಕರು ಅದನ್ನು ಧರಿಸಲು ಇಷ್ಟಪಡುವುದಿಲ್ಲ.
ಅಂತಹವರು ತಮ್ಮ ಕಣ್ಣುಗಳಿಗೆ ಮಸ್ಕರಾ ಬಳಸುವುದರಿಂದ ಕಣ್ಣಿನ ರೆಪ್ಪೆಗಳನ್ನು ದಪ್ಪವಾಗಿ ಕಾಣುವಂತೆ ಮಾಡಬಹುದು.
ಮುಖದ ಮೇಲಿನ ಅತ್ಯಂತ ಆಕರ್ಷಕ ಅಂಗಗಳಲ್ಲಿ ಕಣ್ಣುಗಳು ಮೊದಲ ಸ್ಥಾನದಲ್ಲಿವೆ.
ಅದಕ್ಕಾಗಿಯೇ ಅನೇಕರು ಕಣ್ಣಿನ ಮೇಕಪ್‌ಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡುತ್ತಾರೆ. ಕಣ್ಣಿನ ಮೇಕಪ್‌ಗೆ ಐ-ಲೈನರ್, ಐ-ಶ್ಯಾಡೋ, ಮಸ್ಕರಾಗಳನ್ನು ಬಳಸಲಾಗುತ್ತದೆ.