ಫೇಸ್ ಬುಕ್ ನಲ್ಲಿ ಆರಂಭವಾದ ಈ ಕ್ರಿಕೆಟಿಗನ ಪ್ರೇಮ ಕಥೆಯೇ ರೋಚಕ ..!
ಸಂಜು ಸ್ಯಾಮ್ಸನ್ ಅವರ ಪತ್ನಿಯ ಹೆಸರು ಚಾರುಲತಾ ಸ್ಯಾಮ್ಸನ್. ಚಾರುಲತಾ ಸ್ಯಾಮ್ಸನ್ ಕೇರಳದ ತಿರುವನಂತಪುರಂ ಮೂಲದವರು.
ಚಾರುಲತಾ ಸ್ಯಾಮ್ಸನ್ ಕಾಲೇಜಿನಲ್ಲಿ ಸಂಜು ಸ್ಯಾಮ್ಸನ್ ಅವರ ಸಹಪಾಠಿಯಾಗಿದ್ದರು. ಸಂಜು ಮತ್ತು ಚಾರು ತಿರುವನಂತಪುರದ ಮಾರ್ ಇವಾನಿಯೋಸ್ ಕಾಲೇಜಿನಲ್ಲಿ ಒಟ್ಟಿಗೆ ಓದುತ್ತಿದ್ದರು.
ಜೊತೆಯಲ್ಲಿಯೇ ಓದುತ್ತಿದ್ದರೂ, ಇಬ್ಬರೂ ಗೆಳೆಯರಾಗಿರಲಿಲ್ಲ. ಇವರ ಗೆಳೆತನ ಶುರುವಾಗಿದ್ದು,ಫೇಸ್ ಬುಕ್ ನಲ್ಲಿ. ಸಂಜು ಸ್ಯಾಮ್ಸನ್ ಚಾರುಲತಾ ಅವರಿಗೆ ಫೇಸ್ ಬುಕ್ ನಲ್ಲಿ ಫ್ರೆಂಡ್ ಶಿಪ್ ರಿಕ್ವೆಸ್ಟ್ ಕಳುಹಿಸಿದ್ದು, ಅಲ್ಲಿಂದ ಅವರಿಬ್ಬರ ಪ್ರೇಮಕಥೆ ಶುರುವಾಗಿದೆ. ಫೇಸ್ ಬುಕ್ ಸ್ನೇಹ ನಂತರ ಪ್ರೀತಿಯಾಗಿ ಬದಲಾಗಿದೆ. ನಂತರ ಇಬ್ಬರೂ ತಮ್ಮ ಪ್ರೀತಿ ವಿಚಾರವನ್ನು ಮನೆ ಮಂದಿಗೆ ತಿಳಿಸಿದ್ದಾರೆ. ಯಾವ ಅಡ್ಡಿ ಆತಂಕವೂ ಇಲ್ಲದೆ ಇಬ್ಬರ ಮದುವೆ ಅದ್ದೂರಿಯಾಗಿ ನೆರವೇರಿದೆ.
5 ವರ್ಷಗಳ ಕಾಲ ಸಂಬಂಧದಲ್ಲಿದ್ದ ನಂತರ, ಸಂಜು ಸ್ಯಾಮ್ಸನ್ ಮತ್ತು ಚಾರುಲತಾ 22 ಡಿಸೆಂಬರ್ 2018 ರಂದು ವಿವಾಹವಾಗಿದ್ದಾರೆ. ಸಂಜು ಸ್ಯಾಮ್ಸನ್ ಕ್ರಿಶ್ಚಿಯನ್ ಆಗಿದ್ದರೆ, ಚಾರುಲತಾ ಹಿಂದೂ ನಾಯರ್. ಇಬ್ಬರ ವಿವಾಹ ಕೋವಲಂ ನಗರದಲ್ಲಿ ಜರಿಗಿತು.
ಸಂಜು ಸ್ಯಾಮ್ಸನ್ ಪತ್ನಿ ಸೌಂದರ್ಯದ ಗಣಿ. ಅವರು ತಿರುವನಂತಪುರಂನಲ್ಲಿ ತಮ್ಮ ಶಾಲಾ ಶಿಕ್ಷಣವನ್ನು ಪೂರ್ಣಗೊಳಿಸಿದರು ಮತ್ತು ಮಾರ್ ಇವಾನಿಯೋಸ್ ಕಾಲೇಜಿನಲ್ಲಿ ರಸಾಯನಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾರೆ.