ಸರಳವಾಗಿಯಾದರೂ ಶಾಸ್ತ್ರೋಕ್ತವಾಗಿ ನಡೆಯಿತು ಅಂಬರೀಶ್ ಸೊಸೆಯ ಸೀಮಂತ ! ಅಭಿಷೇಕ್ ಪತ್ನಿಯ ಸೀಮಂತದ ಫೋಟೋಸ್ ಇಲ್ಲಿವೆ
ಅಭಿಷೇಕ್ ಅಂಬರೀಶ್ ಪತ್ನಿ ಅವಿವಾ ಏಳು ತಿಂಗಳ ಗರ್ಭಿಣಿ. ಇನ್ನೇನು ಕೆಲವೇ ದಿನಗಳಲ್ಲಿ ಅಂಬರೀಶ್ ಮನಗೆ ಪುಟ್ಟ ಅತಿಥಿ ಆಗಮನವಾಗಲಿದೆ.
ಅವಿವಾಗೆ ಎರಡು ದಿನದ ಹಿಂದೆ ಸೀಮಂತ ಕಾರ್ಯ ನೆರವೇರಿಸಲಾಗಿದೆ.
ಈ ಸೀಮಂತ ಕಾರ್ಯ ಸರಳವಾಗಿ ನಡೆದರೂ ಶಾಸ್ತ್ರೋಕ್ತವಾಗಿಯೇ ನಡೆದಿದೆ. ಕಾರ್ಯಕ್ರಮದಲ್ಲಿ ಕುಟುಂಬ ಸದಸ್ಯರು ಮತ್ತು ಹತ್ತಿರದ ಸಂಬಂಧಿಗಳು ಮಾತ್ರ ಭಾಗಿಯಾಗಿದ್ದರು ಎನ್ನಲಾಗಿದೆ.
ಹಸಿರು ಸೀರೆ, ಹಸಿರು ಬಳೆ, ಮುಡಿ ತುಂಬಾ ಹೂವು ಮುಡಿದು ಅವಿವಾ ಕಂಗೊಳಿಸುತ್ತಿದ್ದರೆ, ಅಭಿಷೇಕ್ ಬಿಳಿ ಶರ್ವಾಣಿ ಮತ್ತು ಹಸಿರು ಶಾಲು ಧರಿಸಿದ್ದರು.
ದರ್ಶನ್ ನನ್ನು ಸುಮಲತಾ ಸದಾ ತನ್ನ ಹಿರಿಯ ಮಗ ಎಂದೇ ಕರೆಯುತ್ತಿದ್ದರು. ಇದೀಗ ಹಿರಿಯ ಮಗನ ಅನುಪಸ್ಥಿತಿಯಲ್ಲಿ ಅವಿವಾ ಸೀಮಂತ ಕಾರ್ಯ ನಡೆದಿದೆ.