50 ರ ಆಸುಪಾಸಿನಲ್ಲಿಯೂ 25ರ ಯುವತಿಯಂತೆ ಕಾಣುವ ಶಿಲ್ಪಾ ಶೆಟ್ಟಿ ಬ್ಯೂಟಿ ಸೀಕ್ರೆಟ್ ಈ ಪಾನೀಯ

Wed, 17 Jul 2024-5:08 pm,

ವಯಸ್ಸು 49  ಆದರೂ ಶಿಲ್ಪಾ ಶೆಟ್ಟಿ ಈಗಲೂ 25ರ ಯುವತಿಯಂತೆ  ಕಾಣುತ್ತಾರೆ.ಅವರ ತ್ವಚೆ ಕೂಡಾ ಬಹಳ ಆರೋಗ್ಯಕರವಾಗಿದೆ.   

ತನ್ನ ವಯಸ್ಸಿಗಿಂತ ಇಷ್ಟು ಸಣ್ಣವರಂತೆ ಕಾಣುವ ಶಿಲ್ಪಾ ಶೆಟ್ಟಿಯ ಬ್ಯೂಟಿ ಸೀಕ್ರೆಟ್ ಅವರು ಸೇವಿಸುವ ಪಾನೀಯಗಳೇ. 

ಶಿಲ್ಪಾ ಶೆಟ್ಟಿ ತನ್ನ ದೇಹವನ್ನು ಹೈಡ್ರೇಟ್ ಆಗಿ ಇರಿಸುವ ಎಲ್ಲಾ ಪ್ರಯತ್ನ ಮಾಡುತ್ತಾರೆ.ಇದಕ್ಕಾಗಿ ನಿತ್ಯ ನಿಗದಿತ ಪ್ರಮಾಣದಲ್ಲಿ ನೀರು ಕುಡಿಯುತ್ತಾರೆ.  ಇದರಿಂದಲೇ ಅವರ ತ್ವಚೆ ಅಷ್ಟು ಕಾಂತಿಯುಕ್ತವಾಗಿದೆಯಂತೆ.

ದೇಹವನ್ನು ನಿರ್ವಿಷಗೊಳಿಸಲು ಇವರು ತನ್ನ ದಿನವನ್ನು ನೆಲ್ಲಿಕಾಯಿ ಜ್ಯೂಸ್ ನೊಂದಿಗೆ ಆರಂಭ ಮಾಡುತ್ತಾರೆ.ಇದರಿಂದ ದೇಹದ ಕಲ್ಮಶ ಹೊರ ಹಾಕಲು ಸಹಾಯವಾಗುತ್ತದೆ. 

ಇನ್ನು ಇವರು ಎಲ್ಲೇ ಇದ್ದರೂ ನಿತ್ಯ ಎಳನೀರು ಕುಡಿಯುವುದನ್ನು ಮಾತ್ರ ಮರೆಯುವುದಿಲ್ಲವಂತೆ.   

ಮನೆಯಿಂದ ಹೊರ ಹೋಗುವ ಮುನ್ನ ಸನ್ ಸ್ಕ್ರೀನ್ ಹಾಕುವುದನ್ನು ಕೂಡಾ ಶಿಲ್ಪಾ ಮರೆಯುವುದಿಲ್ಲ. ಇದು ಮುಖದ ಮೇಲೆ ಸುಕ್ಕು ಮೂಡದಂತೆ ತಡೆಯುತ್ತದೆ.   

ಮಲಗುವ ಮುನ್ನ ಮೇಕ್ಅಪ್ ತೆಗೆದೇ ಮಲಗುತ್ತಾರೆ. ಮಾತ್ರವಲ್ಲ ಮುಖ ತೊಳೆಯಲು ಸಾಬೂನು, ಫೇಸ್ ವಾಶ್ ಗಳ ಬದಲು ನೈಸರ್ಗಿಕ ವಸ್ತುಗಳನ್ನೇ ಬಳಸುತ್ತಾರೆಯಂತೆ.    

ZEENEWS TRENDING STORIES

By continuing to use the site, you agree to the use of cookies. You can find out more by Tapping this link