ಎಚ್ಚರ..! ಗೂಗಲ್ ನಲ್ಲಿ ತಪ್ಪಿಯೂ ಈ ವಿಷಯಗಳನ್ನು ಸರ್ಚ್ ಮಾಡಬೇಡಿ
ನಾವು ಹೆಚ್ಚಾಗಿ ಆನ್‌ಲೈನ್ ಬ್ಯಾಂಕಿಂಗ್ ಮಾಡುತ್ತೇವೆ. ಆದರೆ ಯಾವತ್ತೂ ಆನ್ ಲೈನ್ ಬ್ಯಾಂಕಿಂಗ್ ವೇಲೆ ಗೂಗಲ್ ಸರ್ಚ್ ಮಾಡಲೇ ಬಾರದು. ಯಾಕೆಂದರೆ, ಸೈಬರ್ ಅಪರಾಧಿಗಳು ವಂಚನೆ ಮಾಡುವ ಉದ್ದೇಶದಿಂದಲೇ ನಕಲಿ ವೆಬ್ ಸೈಟ್ ರಚಿಸಿರುತ್ತಾರೆ. ನಕಲಿ ವೆಬ್ ಸೈಟನ್ನು ಬಳಸಿದರೆ ಅಪರಾಧಿಗಳು ನಮ್ಮ ಬ್ಯಾಂಕಿಂಗ್ ವಿವರಗಳನ್ನು ಕದಿಯಬಹುದು. ನಮ್ಮ ಖಾತೆಯೂ ಖಾಲಿಯಾಗಬಹುದು.
Google Searchನಲ್ಲಿ ಯಾವತ್ತೂ ಕಸ್ಟಮರ್ ಕೇರ್ ನಂಬರ್ ಹುಡುಕಲೇ ಬಾರದು. ಸೈಬರ್ ಕ್ರಿಮಿನಲ್ ಈ ಬಗ್ಗೆ ತಪ್ಪು ಗ್ರಾಹಕ ಸಂಖ್ಯೆಯನ್ನು ನೀಡುವ ಸಾಧ್ಯತೆಗಳು ಹೆಚ್ಚಿರುತ್ತವೆ
ಮೊಬೈಲ್ ಅಪ್ಲಿಕೇಶನ್‌ಗಳು ಮತ್ತು ಸಾಫ್ಟ್‌ವೇರ್ ಗಳಿಂದ ನಮ್ಮ ಅನೇಕ ಕೆಲಸಗಳು ಸುಲಭವಾಗಿ ನಡೆದು ಹೋಗುತ್ತದೆ. ಆದರೆ ಅನೇಕ ಬಾರಿ ಸೈಬರ್ ಅಪರಾಧಿಗಳು ಇದೇ ರೀತಿಯ ಅಪ್ಲಿಕೇಶನ್‌ಗಳು ಮತ್ತು ಸಾಫ್ಟ್‌ವೇರ್‌ಗಳನ್ನು ಹಾಕಿರುತ್ತಾರೆ. ಇದನ್ನು ಡೌನ್ ಲೊಡ್ ಮಾಡಿದ ತಕ್ಷಣ, ನಿಮ್ಮ ಫೋನ್ ಮತ್ತು ಕಂಪ್ಯೂಟರ್‌ನಿಂದ ಪ್ರಮುಖ ಮಾಹಿತಿಯನ್ನು ಕಳವು ಮಾಡಲಾಗುತ್ತದೆ. ನಿಮ್ಮ ಫೋನ್ ಮತ್ತು ಕಂಪ್ಯೂಟರ್‌ನಲ್ಲಿ ವೈರಸ್‌ಗಳ ಅಪಾಯವೂ ಹೆಚ್ಚಾಗುತ್ತದೆ.
ಯಾವುದೇ ಸರ್ಕಾರಿ ಯೋಜನೆಯ ಬಗ್ಗೆ ಗೂಗಲ್ ಹುಡುಕಾಟದಲ್ಲಿ ಮಾಹಿತಿಯನ್ನು ತೆಗೆದುಕೊಳ್ಳಬಾರದು. ನೀವು ಅಧಿಕೃತ ಸೈಟ್ ಗಳಿಗೆ ಹೋಗಿ, ಯೋಜನೆಗಳ ಬಗ್ಗೆ ಮಾಹಿತಿ ಪಡೆಯುವುದು ಉತ್ತಮ.
ಆನ್‌ಲೈನ್ ಶಾಪಿಂಗ್ ಸಮಯದಲ್ಲಿ ಅನೇಕ ಕೂಪನ್ ಕೋಡ್‌ಗಳ ಮೂಲಕ ರಿಯಾಯಿತಿಯನ್ನು ನೀಡಲಾಗುತ್ತದೆ. ಆದರೆ ಕೆಲವೊಮ್ಮೆ ಕೂಪನ್ ಕೋಡ್‌ಗಳನ್ನು ಉಚಿತವಾಗಿ ಪಡೆಯುವ ಉದ್ದೇಶದಿಂದ Googleನಲ್ಲಿ ಸರ್ಚ್ ಮಾಡುವವರೂ ಇದ್ದಾರೆ. ಆದರೆ ಯಾವತ್ತೂ ಈ ರೀತಿ ಮಾಡಬಾರದು. ಸೈಬರ್ ಅಪರಾಧಿಗಳು ನಕಲಿ ಕೂಪನ್ ಕೋಡ್‌ಗಳನ್ನು ನೀಡಿ, ಅದಕ್ಕೆ ಬದಲಾಗಿ, ವೈಯಕ್ತಿಕ ಮತ್ತು ಬ್ಯಾಂಕ್ ಮಾಹಿತಿಯನ್ನು ಸಂಗ್ರಹಿಸುತ್ತಾರೆ. ಇದು ಭಾರೀ ನಷ್ಟವನ್ನು ಉಂಟು ಮಾಡುತ್ತದೆ.