ನಿತ್ಯ ನೀರು ಹಾಕುತ್ತಿದ್ದರೂ ಮನೆಯಂಗಳದ ತುಳಸಿ ಒಣಗುತ್ತಿದ್ದರೆ ಸ್ವಯಂ ಲಕ್ಷ್ಮೀಯೇ ಈ ಸಂದೇಶ ನೀಡುತ್ತಿದ್ದಾಳೆ ಎಂದರ್ಥ!ತಕ್ಷಣ ಈ ಕೆಲಸ ಮಾಡಿ
ತುಳಸಿ ಇರುವ ಪ್ರತಿ ಮನೆಯಲ್ಲಿಯೂ ದಿನಕ್ಕೆ ಎರಡು ಬಾರಿ ಅಂದರೆ ಮುಂಜಾನೆ ಮತ್ತು ಮುಸ್ಸಂಜೆ ತುಳಸಿಗೆ ಪೂಜೆ ಮಾಡಲಾಗುತ್ತದೆ. ನಿತ್ಯ ಮುಂಜಾನೆ ತುಳಸಿಗೆ ನೀರು ಅರ್ಪಿಸುವುದು ಸಾಮಾನ್ಯವಾಗಿ ಪ್ರತಿ ಮನೆಯಲ್ಲಿಯೂ ನಡೆಯುತ್ತದೆ.
ಆದರೆ ಕೆಲವೊಮ್ಮೆ ದಿನನಿತ್ಯ ತುಳಸಿ ಸಸ್ಯಕ್ಕೆ ನೀರು ಅರ್ಪಿಸಿದರೂ ತುಳಸಿ ಬಾಡುತ್ತಾ ಬರುತ್ತದೆ. ಸರಿಯಾಗಿ ನೀರು, ಸೂರ್ಯನ ಬೆಳಕು ಬೀಳುತ್ತಿದ್ದರೂ ತುಳಸಿ ಒಣಗುವುದಕ್ಕೆ ಶುರುವಾಗುತ್ತದೆ.
ಉಳಿದ ಎಲ್ಲಾ ಸಸ್ಯಗಳು ಉತ್ತಮ ಸ್ಥಿತಿಯಲ್ಲಿದ್ದು,ಮನೆಯ ತುಳಸಿ ಮಾತ್ರ ಬಾಡಿ ಹೋಗುತ್ತಿದೆ ಅಥವಾ ಸೊರಗುತ್ತಿದೆ ಎಂದಾದರೆ,ಇದು ಭವಿಷ್ಯದ ಸಮಸ್ಯೆಗಳನ್ನು ಸೂಚಿಸುತ್ತದೆ.
ನಾವು ಪೂಜಿಸುವ ತುಳಸಿ ಯಾವತ್ತೂ ಒಣಗಬಾರದು.ತುಳಸಿ ಅಂದರೆ ಲಕ್ಷ್ಮೀ ನೆಲೆಯಾಗಿರುವ ಮನೆಗೆ ಏನಾದರೂ ಸಮಸ್ಯೆಗಳು ಎದುರಾದರೆ, ಆ ಸಮಸ್ಯೆಯ ತಾಪವನ್ನು ಮೊದಲು ತುಳಸಿ ತನ್ನತ್ತ ಸೆಳೆದುಕೊಳ್ಳುತ್ತಾಳಂತೆ.ಹಾಗಾಗಿ ಇದ್ದಕ್ಕಿದ್ದಂತೆ ತುಳಸಿ ಒಣಗಿ ಹೋಗುತ್ತದೆ ಎನ್ನಲಾಗಿದೆ.
ಇನ್ನೊಂದು ನಂಬಿಕೆಯ ಪ್ರಕಾರ, ಮನೆಗೆ ಸಮಸ್ಯೆಗಳು ಎದುರಾಗುವುದಾದರೆ ಮೊದಲು ಲಕ್ಷ್ಮೀ ಸಮಾನಳಾಗಿರುವ ತುಳಸಿ ಎದ್ದು ನಡೆಯುತ್ತಾಳೆ ಎನ್ನುವುದು. ಹಾಗಾಗಿ ಇದ್ದಕ್ಕಿದ್ದಂತೆ ತುಳಸಿ ಒಣಗಲು ಆರಂಭಿಸಿದರೆ ಅಶುಭ ಸಂಭವಿಸಲಿದೆ ಎಂದೇ ಅರ್ಥ.
ತುಳಸಿ ಸಸಿ ಒಣಗುವುದಕ್ಕೂ ಬುಧ ಗ್ರಹಕ್ಕೂ ಸಂಬಂಧವಿದೆ.ಜ್ಯೋತಿಷ್ಯದ ಪ್ರಕಾರ, ಬುಧನ ಬಣ್ಣ ಹಸಿರು.ಯಾವುದೇ ಗ್ರಹವು ಅಶುಭ ಫಲಗಳನ್ನು ನೀಡುವುದಾದರೆ, ಇದರ ಪ್ರಭಾವ ಮೊದಲು ಗ್ರಹಕ್ಕೆ ಸಂಬಂಧಿಸಿದ ವಸ್ತುಗಳ ಮೇಲೆ ಆಗುತ್ತದೆ. ತುಳಸಿ ಕೂಡಾ ಬುಧ ಗ್ರಹಕ್ಕೆ ಸಂಬಂಧಿಸಿದ್ದು.
ತುಳಸಿ ಗಿಡ ಒಣಗಿದೆ ಎನ್ನುವುದು ಗಮನಕ್ಕೆ ಬಂದ ಕೂಡಲೇ ಅದನ್ನು ತೆಗೆದು ಹರಿಯುವ ನೀರಿನಲ್ಲಿ ಬಿಡಿ.ಹೊಸ ತುಳಸಿ ಸಸ್ಯವನ್ನು ನೆಡಿ.ನೀರು ಅರಶಿನ, ಕುಂಕುಮ ಹಚ್ಚಿ ಮತ್ತೆ ಎಂದಿನಂತೆ ಪೂಜೆ ಮಾಡುವ ಕಾರ್ಯವನ್ನು ಆರಂಭಿಸಿ.
ಸೂಚನೆ:ಈ ಲೇಖನವು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ.ಜೀ ಕನ್ನಡ ನ್ಯೂಸ್ ಇದನ್ನು ಖಚಿತಪಡಿಸುವುದಿಲ್ಲ.