ಮಕ್ಕಳಲ್ಲಿ ಈ ಹವ್ಯಾಸಗಳು ಕಂಡು ಬಂದರೆ ದಾರಿ ತಪ್ಪುತ್ತಿದ್ದಾರೆ ಎಂದರ್ಥ
ಮಗುವು ಮನೆಯಲ್ಲಿ ಕೆಟ್ಟ ಭಾಷೆಯನ್ನು ಬಳಸುತ್ತಿದ್ದರೆ, ಕೆಟ್ಟ ಸಂಘ ಬೆಳೆಸುತ್ತಿದ್ದಾನೆ ಎನ್ನುವುದನ್ನು ಅರ್ಥ ಮಾಡಿಕೊಳ್ಳಬೇಕು. ಅನೇಕ ಬಾರಿ ಮಕ್ಕಳು ಮನೆಯಿಂದ ನಿಂದನೀಯ ಭಾಷೆಯನ್ನು ಕಲಿಯುತ್ತಾರೆ. ಇದನ್ನೂ ತಪ್ಪಿಸಲು, ಮನೆಯ ವಾತಾವರಣವನ್ನು ಉತ್ತಮವಾಗಿ ಇರಿಸಿ.
ಮಕ್ಕಳು ಇತರ ಮಕ್ಕಳಿಗೆ ಹೊಡೆಯುವುದು ಬಡಿಯುವುದು ಆರಂಭಿಸಿದರೂ ಆ ಕಡೆ ಗಮನ ಹರಿಸುವ ಅಗತ್ಯವಿದೆ. ಈ ಸಮ್ದರ್ಭದಲ್ಲೊಇ ಮಗುವಿಗೆ ಎಲ್ಲವನ್ನೂ ಪ್ರೀತಿಯಿಂದ ವಿವರಿಸಿ ಹೇಳಬೇಕು.
ಮಕ್ಕಳಲ್ಲಿ ಸಾಮಾನ್ಯವಾಗಿ ಒಂದು ಅಭ್ಯಾಸವಿರುತ್ತದೆ. ಪರಸ್ಪರ ಕೀಟಲೆ ಮಾಡುವುದು. ಮಕ್ಕಳನ್ನು ಚುಡಾಯಿಸುವ ಈ ಅಭ್ಯಾಸವು ಶಾಲೆಯಿಂದ ಮತ್ತು ಅವರ ಸ್ನೇಹಿತರಿಂದ ಹೆಚ್ಚು ಕಲಿಯುತ್ತಾರೆ. ಕೀಟಲೆ ಮಾಡುವ ಅಭ್ಯಾಸ ಒಳ್ಳೆಯದಲ್ಲ ಎನ್ನುವುದನ್ನು ಮಗುವಿಗೆ ತಿಳಿಸಿ.
ಪಾಲಕರು ಮಕ್ಕಳ ಎಲ್ಲಾ ಅಗತ್ಯಗಳನ್ನು ನೋಡಿಕೊಳ್ಳುತ್ತಾರೆ. ಆದರೂ ತಮಗೆ ಬೇಕಾದ ವಸ್ತುವನ್ನು ಖರೀದಿಸಲು ಮಕ್ಕಳು ಕದಿಯಲು ಪ್ರಾರಂಭಿಸುತ್ತಾರೆ. ಮಕ್ಕಳು ಈ ಅಭ್ಯಾಸಗಳನ್ನು ಇತರ ಮಕ್ಕಳಿಂದ ಕಲಿಯುತ್ತಾರೆ. ಅಂತಹ ಪರಿಸ್ಥಿತಿಯಲ್ಲಿ, ಮಕ್ಕಳ ಸ್ನೇಹಿತರ ಸಹವಾಸ ಹೇಗಿರುತ್ತದೆ ಎಂಬುದರ ಬಗ್ಗೆ ಗಮನ ಕೊಡಿ.