ಅವಕಾಶವಿದ್ದರೂ ಈ ಕಾರಣಗಳಿಗಾಗಿ ನಟನೆಯತ್ತ ಮುಖ ಮಾಡಲಿಲ್ಲ ಲತಾ ಮಂಗೇಶ್ಕರ್

Sun, 06 Feb 2022-7:18 pm,

ಐದನೇ ವಯಸ್ಸಿನಲ್ಲಿ ಲಗಾ ಮಂಗೇಶ್ಕರ್ ಮರಾಠಿ ಭಾಷೆಯಲ್ಲಿ ತನ್ನ ತಂದೆಯ ಸಂಗೀತ ನಾಟಕಗಳಲ್ಲಿ ನಟಿಯಾಗಿ ಕೆಲಸ ಮಾಡಲು ಪ್ರಾರಂಭಿಸಿದ್ದರು. 

ತಂದೆ ಪಂಡಿತ್ ದೀನನಾಥ್ ಮಂಗೇಶ್ಕರ್ ಅವರ ನಾಟಕ ಕಂಪನಿ ‘ಬಲವಂತ್ ಸಂಗೀತ ಮಂಡಳಿ’ ಅರ್ಜುನ್ ಮತ್ತು ಸುಭದ್ರರ ಕಥೆಯನ್ನು ಆಧರಿಸಿದ ‘ಸುಭದ್ರ’ ನಾಟಕವನ್ನು ಪ್ರದರ್ಶಿಸಿತ್ತು. ಇದರಲ್ಲಿ ಪಂಡಿತ್ ದೀನಾನಾಥ್ ಅರ್ಜುನನ ಪಾತ್ರವನ್ನು ನಿರ್ವಹಿಸಿದರೆ, ಒಂಬತ್ತು ವರ್ಷದ ಲತಾ ನಾರದ ಪಾತ್ರವನ್ನು ನಿರ್ವಹಿಸಿದ್ದರು. 

 ತಮ್ಮ ತಂದೆಯ ಗುರುಕುಲ ಚಿತ್ರದಲ್ಲಿ ಕೃಷ್ಣನ ಪಾತ್ರವನ್ನುಕೂಡಾ ನಿರ್ವಹಿಸಿದ್ದರು. 1942 ರಲ್ಲಿ ಲತಾ ಮಂಗೇಶ್ಕರ್ ಅವರ ತಂದೆ ಹೃದಯ ಕಾಯಿಲೆಯಿಂದ ನಿಧನರಾದಾಗ, ಚಲನಚಿತ್ರ ನಟ-ನಿರ್ದೇಶಕ ಮತ್ತು ಮಂಗೇಶ್ಕರ್ ಕುಟುಂಬದ ಆತ್ಮೀಯ ಸ್ನೇಹಿತ ಮಾಸ್ಟರ್ ವಿನಾಯಕ್ ದಾಮೋದರ್ ಕರ್ನಾಟಕಿ ಅವರು ನಟಿ ಮತ್ತು ಗಾಯಕಿಯಾಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಲು ಲತಾ ಮಂಗೇಶ್ಕರ್ ಅವರಿಗೆ ಸಹಾಯ ಮಾಡಿದರು.  

ಮಾಸ್ಟರ್ ವಿನಾಯಕ್ ಅವರು ಮಂಗೇಶ್ಕರ್ ಅವರಿಗೆ ಮರಾಠಿ ಚಿತ್ರ 'ಪಹಿಲಿ ಮಂಗಳ ಗೌರ್' ನಲ್ಲಿ ಒಂದು ಸಣ್ಣ ಪಾತ್ರವನ್ನು ನೀಡಿದ್ದರು.  'ನತಾಲಿ ಚೈತ್ರಾಚಿ ನವ್ಲೈ' ಹಾಡನ್ನು ಹಾಡುವ ಅವಕಾಶ ನೀಡಿದ್ದರು. ಮಂಗೇಶ್ಕರ್ ಅವರು 1945 ರಲ್ಲಿ ಮುಂಬೈಗೆ ತೆರಳಿ ಸಂಗೀತ ಅಭ್ಯಾಸ ಆರಂಭಿಸಿದ್ದರು. 

ಮಂಗೇಶ್ಕರ್ ಅವರು 1945 ರಲ್ಲಿ ತಮ್ಮ ತಂಗಿ ಆಶಾ ಭೋಂಸ್ಲೆ ಅವರೊಂದಿಗೆ ಮಾಸ್ಟರ್ ವಿನಾಯಕ್ ಅವರ ಹಿಂದಿ ಭಾಷೆಯ 'ಬಡಿ ಮಾ' ಚಿತ್ರದಲ್ಲಿ ಸಣ್ಣ ಪಾತ್ರವನ್ನು ನಿರ್ವಹಿಸುವ ಅವಕಾಶವನ್ನು ಪಡೆದಿದ್ದರು. ಮರಾಠಿ ಚಿತ್ರಗಳಲ್ಲಿ ನಾಯಕಿಯ ತಂಗಿ, ನಾಯಕನ ತಂಗಿ ಮುಂತಾದ ಸಣ್ಣಪುಟ್ಟ ಪಾತ್ರಗಳನ್ನು ನಿರ್ವಹಿಸುತ್ತಿದ್ದ ಅವರು ಮೇಕಪ್ ಹಾಕಿಕೊಂಡು ಕ್ಯಾಮರಾ ಮುಂದೆ ಕೆಲಸ ಮಾಡುವುದನ್ನು ಇಷ್ಟಪಡುತ್ತಿರಲಿಲ್ಲ.  

ನಟನೆಯನ್ನು ಬಾಲ್ಯದಲ್ಲಿಯೇ ಆರಂಭಿಸಿದರೂ, ಎಂದಿಗೂ ನಟನೆಯನ್ನು ಇಷ್ಟಪಡಲಿಲ್ಲ. ನಾನು ಮಾಸ್ಟರ್ ವಿನಾಯಕ್ ಜೊತೆ ಕೆಲಸ ಮಾಡುತ್ತಿದ್ದೆ. ನಾನು ಚಲನಚಿತ್ರಗಳಲ್ಲಿ ಕೆಲಸ ಮಾಡಿದ್ದೇನೆ ಆದರೆ ನಾನು  ಎಂದಿಗೂ ಅದರಲ್ಲಿ ಸಂತೋಷಪಡಲಿಲ್ಲ ಎಂದು ಲತಾ ಮಂಗೇಶ್ಕರ್ ಸಂದರ್ಶನವೊಂದರಲ್ಲಿ ಹೇಳಿದ್ದರು.  ಮೇಕಪ್ ಹಾಕಿಕೊಂಡು ಕ್ಯಾಮರಾದ ಮುಂದೆ ನಗುವುದು ಮತ್ತು ಅಳುವುದನ್ನು ನಾನು ದ್ವೇಷಿಸುತ್ತಿದ್ದೆ ಎಂದು ಅವರು ಹೇಳಿದ್ದರು.

ಮಾಸ್ಟರ್ ವಿನಾಯಕ್ 1947 ರಲ್ಲಿ ನಿಧನರಾದರು ಮತ್ತು ಅವರ ನಾಟಕ ಕಂಪನಿ ಪ್ರಫುಲ್ ಪಿಕ್ಚರ್ಸ್ ಅನ್ನು ಮುಚ್ಚಲಾಯಿತು. ಸಂಗೀತ ನಿರ್ದೇಶಕ ಗುಲಾಮ್ ಹೈದರ್ ಲತಾ ಮಂಗೇಶ್ಕರ್ ಅವರಿಗೆ 'ಮಜ್ಬೂರ್' (1948) ಚಿತ್ರದಲ್ಲಿ ಗೀತರಚನೆಕಾರ ನಾಜಿಮ್ ಪಾಣಿಪತಿಯವರ 'ದಿಲ್ ಮೇರಾ ತೋಡಾ, ಮುಜೆ ಕಹೀಂ ಕಾ ನಾ ಛೋಡಾ' ಹಾಡಿನ ಮೂಲಕ ಮೊದಲ ದೊಡ್ಡ ಬ್ರೇಕ್ ನೀಡಿದರು.  ಈ ಹಾಡಿನ ಮೂಲಕ ಲತಾ ಭಾರೀ ಯಶಸು ಪಡೆಯುವಂತಾಯಿತು. ಇದಾದ ನಂತರ  ‘ಮಹಲ್’ (1949) ಚಿತ್ರದ ‘ಆಯೇಗಾ ಆನೇ ವಾಲಾ’ ಹಾಡನ್ನು ಹಾಹಾಡಿದ ಲತಾ ಮಂಗೇಶ್ಕರ್ ನಂತರ ಹಿಂದಿರುಗಿ ನೋಡಲೇ ಇಲ್ಲ,. 

ZEENEWS TRENDING STORIES

By continuing to use the site, you agree to the use of cookies. You can find out more by Tapping this link