ಬೆಳಗ್ಗೆ ಎದ್ದ ತಕ್ಷಣ ಈ 3 ಹಸಿರು ಎಲೆಗಳನ್ನು ಜಗಿದರೆ ಯೂರಿಕ್ ಆಸಿಡ್ ಕರಗಿ ಕೀಲು ನೋವು ಕಡಿಮೆಯಾಗುವುದು.. ಕಿಡ್ನಿ ಸ್ಟೋನ್‌ ಸಹ ದೇಹದಿಂದ ಹೊರಹೋಗುವುದು!

Sun, 07 Jul 2024-11:42 am,

ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಜನರು ಕೀಲು ನೋವು ಮತ್ತು ಊತದಿಂದ ತೊಂದರೆಗೊಳಗಾಗುತ್ತಾರೆ. ಇದಕ್ಕೆ ಕಾರಣ ಅಧಿಕ ಯೂರಿಕ್ ಆಸಿಡ್‌ ಸಮಸ್ಯೆ. ಇದು ಸಂಧಿವಾತದಿಂದ ಮೂತ್ರಪಿಂಡದ ಕಲ್ಲುಗಳವರೆಗೆ ದೇಹಕ್ಕೆ ಹಾನಿ ಮಾಡುತ್ತದೆ. 

ವೀಳ್ಯದೆಲೆಯಲ್ಲಿ ಉರಿಯೂತ ನಿವಾರಕ ಗುಣಗಳಿವೆ. ಕೀಲುಗಳಲ್ಲಿನ ನೋವು ಮತ್ತು ಊತವನ್ನು ಕಡಿಮೆ ಮಾಡಲು ಇವು ಪರಿಣಾಮಕಾರಿ. ವೀಳ್ಯದೆಲೆಗಳನ್ನು ಸೇವಿಸಲು ಪ್ರಾರಂಭಿಸಿದರೆ ಸಂಧಿವಾತ ಗುಣವಾಗುತ್ತದೆ.   

ಯೂರಿಕ್ ಆಮ್ಲದ ಮಟ್ಟವನ್ನು ಕಡಿಮೆ ಮಾಡುವ ಮೂಲಕ, ನೋವು, ಊತ ಕಡಿಮೆ ಮಾಡಬಹುದು.  

ಯೂರಿಕ್ ಆಸಿಡ್‌ಮೂತ್ರಪಿಂಡದ ಕಲ್ಲುಗಳ ಸಮಸ್ಯೆಗೂ ಕಾರಣವಾಗಬಹುದು. ಇದಕ್ಕೆ ವೀಳ್ಯದೆಲೆಯ ಮೂಲಕ ಪರಿಹಾರವನ್ನು ಪಡೆಯಬಹುದು.   

ಬೆಳಿಗ್ಗೆ ನೀವು ವೀಳ್ಯದೆಲೆಯನ್ನು ಜಗಿದು ತಿನ್ನಬಹುದು. ಇದನ್ನು ನೀರಿನಲ್ಲಿ ಕುದಿಸಿ ಅಥವಾ ಕಷಾಯ ಮಾಡಿಯೂ ಕುಡಿಯಬಹುದು. 

ಇದು ಹೆಚ್ಚಿನ ಯೂರಿಕ್ ಆಮ್ಲವನ್ನು ನಿಯಂತ್ರಣಕ್ಕೆ ತರುತ್ತದೆ. ಅಲ್ಲದೇ ಕಿಡ್ನಿ ಸ್ಟೋನ್‌ಸಹ ಕರಗಿ ದೇಹದಿಂದ ಹೊರ ಹೋಗಬಹುದು.

ಗಮನಿಸಿ: ಈ ಲೇಖನವು ಮನೆಮದ್ದುಗಳನ್ನ ಆಧರಿಸಿದ್ದು ಮಾಹಿತಿಯನ್ನು ಒದಗಿಸಲು ಮಾತ್ರ ಬರೆಯಲಾಗಿದೆ. ಹೆಚ್ಚಿನ ಮಾಹಿತಿಗಾಗಿ ತಜ್ಞರನ್ನು ಅಥವಾ ನಿಮ್ಮ ವೈದ್ಯರನ್ನು ಸಂಪರ್ಕಿಸಿ. 

ZEENEWS TRENDING STORIES

By continuing to use the site, you agree to the use of cookies. You can find out more by Tapping this link