ಈ ಒಂದು ತರಕಾರಿಯಿಂದ ಬಿಳಿ ಕೂದಲು ಕಪ್ಪಾಗುವುದಷ್ಟೇ ಅಲ್ಲ ಈ ಸಮಸ್ಯೆಗಳಿಗೂ ಪರಿಹಾರ!
)
ಈ ಬದಲಾದ ಜೀವನಶೈಲಿಯಲ್ಲಿ ದೈಹಿಕ ಆರೋಗ್ಯದಂತೆ ಕೂದಲಿನ ಆರೋಗ್ಯವೂ ಹಾಳಾಗುವುದು ಸರ್ವೇ ಸಾಮಾನ್ಯ.
)
ಕೂದಲಿನ ಸಮಸ್ಯೆಗಳಲ್ಲಿ ಕೂದಲು ಉದುರುವಿಕೆ, ಕೂದಲು ಜಡವಾಗುವುದು, ಅಕಾಲಿಕ ಬಿಳಿ ಕೂದಲು ಎಲ್ಲದಕ್ಕೂ ಒಂದೇ ಒಂದು ಮನೆಮದ್ದಿನಿಂದ ಪರಿಹಾರ ಪಡೆಯಬಹುದು.
)
ಕೂದಲು ಉದುರುವಿಕೆಯನ್ನು ತಡೆಯಲು ತರಕಾರಿಗಳ ಸೇವನೆ ಪ್ರಯೋಜನಕಾರಿ. ಅಂತೆಯೇ ಒಂದು ತರಕಾರಿ ಕೂದಲಿನ ಸರ್ವ ಸಮಸ್ಯೆಗೂ ಪರಿಹಾರ ನೀಡುತ್ತದೆ.
ಬೀಟ್ರೂಟ್ ಬಳಸಿ ಬಿಳಿ ಕೂದಲನ್ನು ಸುಲಭವಾಗಿ ಕಪ್ಪಾಗಿಸಬಹುದು.
ಬೀಟ್ರೂಟ್ ಸಿಪ್ಪೆ ಒರೆದು ಅದನ್ನು ಸಣ್ಣಗೆ ತುರಿದು ಮಿಕ್ಸಿ ಮಾಡಿ ತಲೆಗೆ ಸ್ನಾನ ಮಾಡುವ ಅರ್ಧಗಂಟೆ ಮೊದಲು ಈ ಹೇರ್ ಪ್ಯಾಕ್ ಅನ್ನು ಕೂದಲಿಗೆ ಅನ್ವಯಿಸಿ.
ಬೀಟ್ರೂಟ್ ಹೇರ್ ಪ್ಯಾಕ್ ನಿಯಮಿತವಾಗಿ ಬಳಸುವುದರಿಂದ ಬಿಳಿ ಕೂದಲು ನೈಸರ್ಗಿಕವಾಗಿ ಕಪ್ಪಾಗುತ್ತದೆ.
ಅಷ್ಟೇ ಅಲ್ಲ ಈ ಹೇರ್ ಪ್ಯಾಕ್ ಬಳಸುವುದರಿಂದ ಕೂದಲು ಉದುರುವಿಕೆ ಕಡಿಮೆಯಾಗಿ ದಷ್ಟಪುಷ್ಟವಾದ ಉದ್ದ, ಕಾಂತಿಯುತ ಕೂದಲನ್ನು ನಿಮ್ಮದಾಗಿಸಬಹುದು.
ಸೂಚನೆ: ಸಲಹೆ ಸೇರಿದಂತೆ ಈ ವಿಷಯವು ಸಾಮಾನ್ಯ ಮಾಹಿತಿಯನ್ನು ಮಾತ್ರ ಒದಗಿಸುತ್ತದೆ.ಈ ಮಾಹಿತಿಯ ಹೊಣೆಯನ್ನು ಜೀ ಕನ್ನಡ ನ್ಯೂಸ್ ಹೇಳಿಕೊಳ್ಳುವುದಿಲ್ಲ.