ಬೆಳ್ಳುಳ್ಳಿ ತಿಂದರೆ ಪ್ರಯೋಜನ ಮಾತ್ರ ವಲ್ಲ Side effects ಕೂಡಾ ಇದೆ

Sat, 27 Mar 2021-11:57 am,

ಬೆಳ್ಳುಳ್ಳಿಯಲ್ಲಿ ಆಲಿಸಿನ್ ಎಂಬ ಪದಾರ್ಥ ಹೆಚ್ಚಿನ ಪ್ರಮಾಣದಲ್ಲಿ ಇರುತ್ತದೆ. ಹೆಚ್ಚಿನ ಪ್ರಮಾಣದ ಆಲಿಸಿನ್ ದೇಹವನ್ನು ತಲುಪಿದರೆ, ಲಿವರ್ ಸಮಸ್ಯೆ ಕಂಡು ಬರುತ್ತದೆ.  ಕ್ರಮೇಣ ಯಕೃತ್ತು ಕಾರ್ಯನಿರ್ವಹಿಸುವುದನ್ನೆ ನಿಲ್ಲಿಸಿಬಿಡಬಹುದು.   

ಅಮೆರಿಕದ ರಾಷ್ಟ್ರೀಯ ಕ್ಯಾನ್ಸರ್ ಸಂಸ್ಥೆಯ ಲೇಖನವೊಂದರಲ್ಲಿ ಪ್ರಕಟವಾದ ವರದಿಯ ಪ್ರಕಾರ, ಹಸಿ ಬೆಳ್ಳುಳ್ಳಿಯನ್ನು ಖಾಲಿ ಹೊಟ್ಟೆಯಲ್ಲಿ ಸೇವಿಸಿದರೆ, ಎದೆಯುರಿ, ಹೊಟ್ಟೆ ಉರಿ ಸಮಸ್ಯೆಗಳಿಗೆ ಕಾರಣವಾಗಬಹುದು. ಅಲ್ಲದೆ, ವಾಂತಿಯಂಥಹ ಸಮಸ್ಯೆಗಳು ಕೂಡಾ ಕಂಡು ಬರಬಹುದು.   ಇದಲ್ಲದೆ, ಹಾರ್ವರ್ಡ್ ವೈದ್ಯಕೀಯ ಶಾಲೆಯ ವರದಿಯ ಪ್ರಕಾರ,  ಬೆಳ್ಳುಳ್ಳಿಯಲ್ಲಿರುವ  ಕೆಲ ಅಂಶಗಳಿಂದ GERD ಕಾಯಿಲೆಗೆ ಕಾರಣವಾಗಬಹುದು.

ಹೆಚ್ಚು ಬೆಳ್ಳುಳ್ಳಿ ತಿನ್ನುವುದರಿಂದ ಚರ್ಮದ ತುರಿಕೆ  ಉಂಟಾಗಬಹುದು. ಬೆಳ್ಳುಳ್ಳಿಯಲ್ಲಿರುವ ಅಲಿನೇಸ್ ಅಂಶವು ಈ ಸಮಸ್ಯೆಗೆ ಕಾರಣವಾಗಿದೆ. ಈ ಕಾರಣಕ್ಕಾಗಿಯೇ ಬೆಳ್ಳುಳ್ಳಿ  ಸಿಪ್ಪೆ ತೆಗೆಯುವಾಗ ಅಥವಾ ಕತ್ತರಿಸುವಾಗ ಕೆಲವರು  ಗ್ಲೌಸ್ ಹಾಕುತ್ತಾರೆ. 

 ರಕ್ತ ಹೆಪ್ಪುಗಟ್ಟುವಿಕೆ  ಸಮಸ್ಯೆ ಇರುವವರಿಗೆ ವಾರ್ಫಾರಿನ್, ಆಸ್ಪಿರಿನ್  ಔಷಧಿಗಳನ್ನು ನೀಡಲಾಗುತ್ತದೆ. ಅಂತಹ ಜನರು ಬೆಳ್ಳುಳ್ಳಿಯನ್ನು ಸೇವಿಸಬಾರದು.  ಏಕೆಂದರೆ ಬೆಳ್ಳುಳ್ಳಿ ನೈಸರ್ಗಿಕವಾಗಿ ರಕ್ತವನ್ನು ತೆಳುವಾಗಿಸುತ್ತದೆ. ಹಾಗಾಗಿ, ಬೆಳ್ಳುಳ್ಳಿ ಔಷಧ ಎರಡರ ಪರಿಣಾಮದಿಂದಾಗಿ ಅತಿಯಾದ ರಕ್ತಸ್ರಾವವಾಗುವ ಅಪಾಯವಿರುತ್ತದೆ.   

 ಗರ್ಭಿಣಿಯರು ಅಥವಾ ಮಗುವಿಗೆ ಹಾಲುಣಿಸುವ ಮಹಿಳೆಯರು ಕೂಡ ಬೆಳ್ಳುಳ್ಳಿ ತಿನ್ನಬಾರದು.  ಇದರಿಂದಾಗಿ ಅವಧಿಗೆ ಮುನ್ನ ಮಗು ಜನಿಸುವ ಅಪಾಯವಿರುತ್ತದೆ. ಸ್ತನ್ಯಪಾನ ಮಾಡುವ ಮಹಿಳೆಯರು ಹೆಚ್ಚು ಬೆಳ್ಳುಳ್ಳಿ ತಿನ್ನಬಾರದು, ಇದು ಎದೆಹಾಲಿನ  ರುಚಿ ಬದಲಾಗಲು ಕಾರಣವಾಗುತ್ತದೆ.

ವಯಸ್ಕರು ಪ್ರತಿದಿನ 4 ಗ್ರಾಂ ಅಂದರೆ 2 ಅಥವಾ 3 ಬೆಳ್ಳುಳ್ಳಿಯ ಎಸಳುಗಳನ್ನು ನಿತ್ಯ ಸೇವಿಸಬಹುದು. ಇದಕ್ಕಿಂತ ಹೆಚ್ಚು ತಿನ್ನುವುದು ಅನೇಕ ರೋಗಗಳಿಗೆ ಕಾರಣವಾಗಬಹುದು.  

ZEENEWS TRENDING STORIES

By continuing to use the site, you agree to the use of cookies. You can find out more by Tapping this link