Garam Masala Benefits and Side Effects: ಎಲ್ಲಾ ಆಹಾರಗಳಲ್ಲಿ ಗರಂ ಮಸಾಲೆ ಬಳಸುವ ಮುನ್ನ ತಿಳಿದುಕೊಳ್ಳಿ ಈ ವಿಚಾರ
ಶೀತ ಮತ್ತು ಕೆಮ್ಮಿನ ಸಂದರ್ಭದಲ್ಲಿ, ಇದರಿಂದ ಕಷಾಯವನ್ನು ತಯಾರಿಸಬಹುದು. ಲವಂಗ, ಕರಿಮೆಣಸು ಮತ್ತು ದಾಲ್ಚಿನ್ನಿ ಮುಂತಾದವುಗಳಿಂದ ಚಹಾ ಮಾಡಿ ಕುಡಿಯುವುದು ರುಚಿಯಾಗಿಯೂ ಇರುತ್ತದೆ. ದೇಹದ ರೋಗನಿರೋಧಕ ಶಕ್ತಿಯನ್ನು ಕೂಡಾ ಬಲಪಡಿಸುತ್ತದೆ.
ಮಳೆಗಾಲದಲ್ಲಿ ಹೆಚ್ಚು ಕರಿದ ಪದಾರ್ಥಗಳನ್ನು ತಿನ್ನುವುದರಿಂದ ಜೀರ್ಣಕ್ರಿಯೆ ಸಮಸ್ಯೆ ಎದುರಿಸಬೇಕಾಗುತ್ತದೆ. ಈ ಸಮಸ್ಯೆಯನ್ನು ಹೋಗಲಾಡಿಸಲು ಗರಂ ಮಸಾಲೆಗಳನ್ನು ಸೇವಿಸಬಹುದು. ಇದರಲ್ಲಿರುವ ಫೈಬರ್ ಹೊಟ್ಟೆಯ ಸಮಸ್ಯೆಗಳನ್ನು ನಿವಾರಿಸಾಲು ಸಹಾಯ ಮಾಡುತ್ತದೆ. ಮಲಬದ್ಧತೆಯ ಸಮಸ್ಯೆ ನಿವಾರಣೆಯಲ್ಲೂ ಇದು ಕೆಲಸ ಮಾಡುತ್ತದೆ.
ಗರಂ ಮಸಾಲೆಗಳು ಆ್ಯಂಟಿ ಇನ್ ಫ್ಲಮೆಟರಿ ಗುಣಗಳನ್ನು ಹೊಂದಿವೆ. ಇದು ನೋವು ಮತ್ತು ಊತವನ್ನು ಕಡಿಮೆ ಮಾಡುತ್ತವೆ. ದೇಹದಿಂದ ದೀರ್ಘಕಾಲದ ನೋವನ್ನು ತೆಗೆದುಹಾಕಲು ಸಹ ಇದು ಸಹಾಯ ಮಾಡುತ್ತದೆ.
ಇದರ ಬಳಕೆಯು ಮಧುಮೇಹದಲ್ಲಿಯೂ ಪ್ರಯೋಜನಕಾರಿಯಾಗಿದೆ. ಗರಂ ಮಸಾಲೆಯು ಜೀರಿಗೆಯನ್ನು ಹೊಂದಿದೆ. ಇದು ಆ್ಯಂಟಿ ಡಯಾಬೆಟಿಕ್ ಏಜೆಂಟ್ ಅನ್ನು ಹೊಂದಿದೆ. ಮಧುಮೇಹದ ಲಕ್ಷಣಗಳನ್ನು ಕಡಿಮೆ ಮಾಡಲು ಕೆಲಸ ಮಾಡುತ್ತದೆ.
ಗರಂ ಮಸಾಲೆಗಳು ಉಷ್ಣ ಗುಣವನ್ನು ಹೊಂದಿರುತ್ತದೆ. ಆದ್ದರಿಂದ ಗರಂ ಮಸಾಲೆಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಮತ್ತು ನಿರಂತರವಾಗಿ ಸೇವಿಸುವುದರಿಂದ ಹಾನಿ ಉಂಟಾಗಬಹುದು. ಎದೆಯುರಿ, ಅಸಿಡಿಟಿ , ಹೊಟ್ಟೆಯಲ್ಲಿ ಉರಿಯುವಂತಹ ಸಮಸ್ಯೆಗಳನ್ನು ಉಂಟುಮಾಡಬಹುದು.