Holi 2024 ಕ್ಕೂ ಮುನ್ನವೇ ನಿರ್ಮಾಣಗೊಳ್ಳುತ್ತಿದೆ ಶನಿ, ಶುಕ್ರ ಹಾಗೂ ಸೂರ್ಯರ ತ್ರಿಗ್ರಹಿ ಯೋಗ, ಈ ಜನರಿಗೆ ಸಿಗಲಿದೆ ಅಪಾರ ಧನಸಂಪತ್ತು!
Trigrahi Yog 2024: ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ಕುಂಭ ರಾಶಿಯಲ್ಲಿ ಶುಕ್ರ, ಸೂರ್ಯ ಹಾಗೂ ಶನಿಯ ಮೈತ್ರಿಯಿಂದ ತ್ರಿಗ್ರಹಿ ಯೋಗ ರಚನೆಯಾಗುತ್ತಿದೆ. ಇದರಿಂದ ಮೂರು ರಾಶಿಗಳ ಜನರ ಅದೃಷ್ಟ ಚಿನ್ನದಂತೆ ಹೊಳೆಯಲಿದೆ. (Spiritual News In Kannada)
ಮಕರ ರಾಶಿ: ನಿಮ್ಮ ಜಾತಕದ ಧನ ಹಾಗೂ ವಾಣಿಯ ಭಾವದಲ್ಲಿ ತ್ರಿಗ್ರಹಿ ಯೋಗ ರಚನೆಯಾಗುತ್ತಿದೆ. ಇದರಿಂದ ಈ ಅವಧಿಯಲ್ಲಿ ನಿಮಗೆ ಆಕಸ್ಮಿಕ ಧನಲಾಭ ಉಂಟಾಗಲಿದೆ. ಇದರ ಜೊತೆಗೆ ವೃತ್ತಿ-ವ್ಯಾಪಾರದಲ್ಲಿ ನಿಮ್ಮ ಉನ್ನತಿಯಾಗಲಿದೆ. ಮಾನಸಿಕ ಸ್ಥಿತಿ ಬಲಗೊಳ್ಳಲಿದ್ದು, ಆತ್ಮ ವಿಶ್ವಾಸ ಹೆಚ್ಚಾಗಲಿದೆ. ಈ ಅವಧಿಯಲ್ಲಿ ನಿಮ್ಮ ಮಾತಿನಲ್ಲಿ ಪ್ರಭಾವ ಇರಲಿದ್ದು, ಜನ ನಿಮ್ಮತ್ತ ಆಕರ್ಷಿತರಾಗಲಿದ್ದಾರೆ. ಮಾರ್ಕೆಟಿಂಗ್, ಸಂವಹನ, ಕಲೆ ಹಾಗೂ ಶಿಕ್ಷಣ ಕ್ಷೇತ್ರಕ್ಕೆ ಸಂಬಂಧಿಸಿದ ಜನರಿಗೆ ಈ ಅವಧಿ ಸಾಕಷ್ಟು ಲಾಭದಾಯಕ ಸಾಬೀತಾಗಲಿದೆ.
ವೃಷಭ ರಾಶಿ: ನಿಮ್ಮ ಜಾತಕದ ಏಕಾದಶ ಭಾವದಲ್ಲಿ ಈ ಯೋಗ ರಚನೆಯಾಗುತ್ತಿದ್ದು, ಆದಾಯ ಮತ್ತು ಹೂಡಿಕೆಯ ದೃಷ್ಟಿಯಿಂದ ಇದು ನಿಮಗೆ ಅತ್ಯುತ್ತಮ ಸಾಬೀತಾಗಲಿದೆ. ಈ ಅವಧಿಯಲ್ಲಿ ನಿಮ್ಮ ಆದಾಯದಲ್ಲಿ ಜಬರ್ದಸ್ತ್ ಹೆಚ್ಚಳ ಇರಲಿದೆ. ಆದಾಯದ ಹೊಸ ಮಾರ್ಗಗಳು ನಿಮ್ಮ ಪಾಲಿಗೆ ತೆರೆದುಕೊಳ್ಳಲಿವೆ. ಇದರಿಂದ ನಿಮಗೆ ಅಪಾರ ಧನಲಾಭ ಉಂಟಾಗಲಿದೆ. ನಿಮ್ಮ ಗಳಿಕೆಯಲ್ಲಿ ಅಪಾರ ವೃದ್ಧಿಯಾಗಲಿದ್ದು, ಸ್ನೇಹಿತರ ಬೆಂಬಲ ನಿಮಗೆ ಸಿಗಲಿದೆ. ಆಮದು ಮತ್ತು ರಫ್ತು ವ್ಯವಹಾರದಲ್ಲಿರುವವರಿಗೆ ವಿಶೇಷ ಲಾಭ ಸಿಗಲಿದೆ.
ಮಿಥುನ ರಾಶಿ: ಈ ಸುಯೋಗ ನಿಮ್ಮ ಗೋಚರ ಜಾತಕದ ನವಮ ಭಾವದಲ್ಲಿ ರಚನೆಯಾಗುತ್ತಿದೆ. ಹೀಗಾಗಿ ನಿಮಗೆ ಅದೃಷ್ಟದ ಅಪಾರ ಬೆಂಬಲ ಸಿಗಲಿದೆ. ನಿಂತುಹೋದ ಕೆಲಸ ಕಾರ್ಯಗಳು ಪೂರ್ಣಗೊಳ್ಳಲಿವೆ, ಸುಖ ಸೌಕರ್ಯಗಳು ಹೆಚ್ಚಾಗಲಿವೆ. ವಿದ್ಯೆ-ಬುದ್ಧಿ ಕೂಡ ಹೆಚ್ಚಾಗಲಿದೆ. ಕೆಲಸ ಕಾರ್ಯಗಳ ನಿಮಿತ್ತ ಯಾತ್ರೆ ಸಂಭವಿಸುವ ಸಾಧ್ಯತೆ ಇದೆ. ಈ ಯಾತ್ರೆ ಶುಭ ಫಲಗಳನ್ನು ನೀಡಲಿದೆ. ಧಾರ್ಮಿಕ ಹಾಗೂ ಮಂಗಳ ಕಾರ್ಯಗಳಲ್ಲಿ ಭಾಗವಹಿಸುವಿರಿ. ವಿದ್ಯಾರ್ಥಿಗಳಿಗೆ ತ್ರಿಗ್ರಹಿ ಯೋಗ ಶುಭ ಸಾಬೀತಾಗಲಿದೆ. ಪರೀಕ್ಷೆಯಲ್ಲಿ ಯಶಸ್ಸು ಕಟ್ಟಿಟ್ಟ ಬುತ್ತಿ ಎಂದರೆ ತಪ್ಪಾಗಲಾರದು.
(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಯಾವುದೇ ಮಾಹಿತಿಯ ನಿಖರತೆ ಅಥವಾ ಸ್ಪಷ್ಟತೆಯನ್ನು ಜೀ ಕನ್ನಡ ನ್ಯೂಸ್ ಖಚಿತಪಡಿಸುವುದಿಲ್ಲ. ಜೋತಿಷಿಗಳು, ಪಂಚಾಂಗ, ಮಾನ್ಯತೆಗಳು ಅಥವಾ ಧರ್ಮ ಗ್ರಂಥಗಳಂತಹ ವಿವಿಧ ಮಾಧ್ಯಮಗಳಿಂದ ಸಂಗ್ರಹಿಸಲಾಗಿರುವ ಮಾಹಿತಿಯನ್ನು ನಿಮ್ಮ ಬಳಿ ತಲುಪಿಸುವುದು ಮಾತ್ರ ನಮ್ಮ ಉದ್ದೇಶವಾಗಿದೆ. ಈ ಮಾಹಿತಿಯ ನೈಜತೆ ಹಾಗೂ ಸ್ಪಷ್ಟತೆಯನ್ನು ಖಚಿತಪಡಿಸಲಾಗುವುದಿಲ್ಲ. ಹೀಗಾಗಿ ಯಾವುದೇ ರೀತಿಯಲ್ಲಿ ಈ ಮಾಹಿತಿಯನ್ನು ಬಳಸುವ ಮುನ್ನ ಸಂಬಂಧಿತ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ)