ಜನ್ಮಾಷ್ಟಮಿ ದಿನ ಈ ತಪ್ಪು ಮಾಡಬೇಡಿ!ವರ್ಷ ಪೂರ್ತಿ ಮನೆಯಲ್ಲಿ ಸಿರಿ ಸಂಪತ್ತು ತುಂಬಿರಬೇಕಾದರೆ ಕೃಷ್ಣಾಷ್ಟಮಿಗೂ ಮುನ್ನ ಈ ವಸ್ತು ತಂದಿಟ್ಟುಕೊಳ್ಳಿ
ಜನ್ಮಾಷ್ಟಮಿಯ ದಿನ ಶ್ರೀ ಕೃಷ್ಣನನ್ನು ವಿಶೇಷವಾಗಿ ಪೂಜಿಸುವುದರಿಂದ ಎಲ್ಲಾ ದುಃಖಗಳು ನಾಶವಾಗುತ್ತವೆ ಮತ್ತು ಸಂತೋಷ,ಸಮೃದ್ಧಿ ಮತ್ತು ಸಂಪತ್ತು ದೊರೆಯುತ್ತದೆ.
ಈ ವರ್ಷ, ಜನ್ಮಾಷ್ಟಮಿ ಹಬ್ಬವನ್ನು ಆಗಸ್ಟ್ 26ರ ಸೋಮವಾರ ಆಚರಿಸಲಾಗುತ್ತಿದೆ. ಜನ್ಮಾಷ್ಟಮಿಯ ದಿನ ನಾವು ಮಾಡುವ ಒಂದು ಕೆಲಸದಿಂದ ಶ್ರೀ ಕೃಷ್ಣ ಮಾತ್ರವಲ್ಲ ಲಕ್ಷ್ಮೀದೇವಿ ಕೂಡಾ ಪ್ರಸನ್ನಳಾಗುತ್ತಾಳೆ.
ಹೀಗೆ ಮಾಡಿದರೆ ವರ್ಷವಿಡೀ ಸಂಪತ್ತಿಗೆ ಕೊರತೆಯಾಗುವುದೇ ಇಲ್ಲ. ಬದಲಿಗೆ, ಮನೆಯಲ್ಲಿ ಯಾವಾಗಲೂ ಸಂಪತ್ತು ಹೆಚ್ಚುತ್ತಲೇ ಇರುತ್ತದೆ.ಮನೆಯಲ್ಲಿ ಸಕಾರಾತ್ಮಕತೆ ಮತ್ತು ಸಂತೋಷ ಇರುತ್ತದೆ.
ಮನೆಯಲ್ಲಿ ಲಡ್ಡು ಗೋಪಾಲನ ಮೂರ್ತಿಯನ್ನು ಇಟ್ಟು ಪೂಜಿಸುವುದು ಅತ್ಯಂತ ಶ್ರೇಯಸ್ಕರ.ಲಡ್ಡು ಗೋಪಾಲ ವಿಗ್ರಹ ಮನೆಗೆ ತರಲು ಜನ್ಮಾಷ್ಟಮಿಯೇ ಸೂಕ್ತ ದಿನ.
ಶ್ರೀಕೃಷ್ಣನಿಗೆ ಕೊಳಲು ಎಂದರೆ ತುಂಬಾ ಇಷ್ಟ.ಕೊಳಲು ಅನೇಕ ವಾಸ್ತು ದೋಷಗಳನ್ನು ನಿವಾರಿಸುತ್ತದೆ.ಜನ್ಮಾಷ್ಟಮಿ ಪೂಜೆಯ ಮೊದಲು,ಮನೆಯೊಳಗೆ ಕೊಳಲನ್ನು ತಂದು ದೇವರ ಮನೆಯಲ್ಲಿ ಇರಿಸಿದರೆ ಶಾಂತಿ,ನೆಮ್ಮದಿ ನೆಲೆಸುತ್ತದೆ.
ನವಿಲು ಗರಿಯಿಲ್ಲದೆ ಶ್ರೀಕೃಷ್ಣನನ್ನು ಕಲ್ಪಿಸಿಕೊಳ್ಳಲಾಗುವುದಿಲ್ಲ.ಮನೆಯಲ್ಲಿ ನವಿಲು ಗರಿಗಳನ್ನು ಇಡುವುದು ತುಂಬಾ ಮಂಗಳಕರ.ಜನ್ಮಾಷ್ಟಮಿಯಂದು ನವಿಲು ಗರಿಯನ್ನು ಪೂಜಿಸಿ ಸೂಕ್ತ ಸ್ಥಳದಲ್ಲಿ ಪ್ರತಿಷ್ಠಾಪಿಸಬೇಕು.ಇದರಿಂದ ಪತಿ-ಪತ್ನಿಯರ ನಡುವೆ ಪ್ರೀತಿ ಹೆಚ್ಚುತ್ತದೆ ಮತ್ತು ಮನೆಯಲ್ಲಿ ಸಂಪತ್ತು ಹೆಚ್ಚುತ್ತದೆ.
ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.