ಕಾರ್ ಡ್ರೈವಿಂಗ್ ಕಲಿಯುವ ಮುನ್ನ ಅದರ ABCD ಬಗ್ಗೆ ನಿಮಗೂ ತಿಳಿದಿರಲಿ
ಕಾರ್ ಡ್ರೈವಿಂಗ್ ಕಲಿಯಲು ಹಲವು ಮೂಲಭೂತ ಅಂಶಗಳ ಬಗ್ಗೆ ತಿಳಿಯುವುದು ತುಂಬಾ ಅಗತ್ಯವಾಗಿದೆ. ನಾವಿಲ್ಲಿ ಕಾರ್ ಡ್ರೈವಿಂಗ್‌ಗೆ ಸಂಬಂಧಿಸಿದ ಮೋದರ ಪಾಠ ಅದರ ABCD ಬಗ್ಗೆ ನಿಮಗೆ ತಿಳಿಸುತ್ತೇವೆ. ಸಾಮಾನ್ಯವಾಗಿ ಕಾರ್ ಡ್ರೈವಿಂಗ್‌ನಲ್ಲಿ ABCD ಎಂಬ ಸಾಂಕೇತಿಕ ಪದಗಳನ್ನು ಬಳಸಲಾಗುತ್ತದೆ.
A ಎಂದರೆ - ವೇಗವರ್ಧಕ ಪೆಡಲ್. ಕಾರನ್ನು ವೇಗಗೊಳಿಸಲು ವೇಗವರ್ಧಕ ಪೆಡಲ್ ಅನ್ನು ಬಳಸಲಾಗುತ್ತದೆ. ಕಾರನ್ನು ವೇಗಗೊಳಿಸಲು ವೇಗವರ್ಧಕ ಪೆಡಲ್ಗಾಗಿ ಬಲ ಪಾದವನ್ನು ಬಳಸಲಾಗುತ್ತದೆ.
B ಎಂದರೆ ಬ್ರೇಕ್ ಪೆಡಲ್. ಇದನ್ನು ಕಾರ್ ನಿಲ್ಲಿಸಲು ಬಳಸಲಾಗುತ್ತದೆ. ಬ್ರೇಕ್ ಪೆಡಲ್ ಅನ್ನು ಬಳಸಲು ಕೂಡ ಬಲ ಪಾದವನ್ನೇ ಬಳಸಲಾಗುತ್ತದೆ. ಇದಕ್ಕಾಗಿ ನೀವು ವೇಗವರ್ಧಕ ಪೆಡಲ್ನಿಂದ ನಿಮ್ಮ ಬಲ ಪಾದವನ್ನು ತೆಗೆದುಕೊಳ್ಳಬೇಕು.
C ಎಂದರೆ - ಕ್ಲಚ್ ಪೆಡಲ್. ಕಾರಿನ ಗೇರ್ ಬದಲಾಹಿಸಲು ಈ ಪೆಡಲ್ ಬಹಳ ಮುಖ್ಯ. ಇದಕ್ಕಾಗಿ ಎಡಗಾಲಿನ ಪಾದವನ್ನು ಬಳಸಬೇಕು. ಚಾಲನೆ ಮಾಡುವಾಗ ಎಡ ಪಾದವನ್ನು ಕ್ಲಚ್ ಪೆಡಲ್ಗಾಗಿ ಮಾತ್ರ ಬಳಸಲಾಗುತ್ತದೆ ಎಂಬುದು ಗಮನಿಸಬೇಕಾದ ಅಂಶ.
D ಎಂದರೆ - ಡೆಡ್ ಪೆಡಲ್. ಕೆಲವೇ ಜನರಿಗೆ ಮಾತ್ರ ಅದರ ಬಗ್ಗೆ ತಿಳಿದಿದೆ. ಚಾಲಕನ ಎಡಗಾಲಿಗೆ ವಿಶ್ರಾಂತಿ ನೀಡಲು ಈ ಪೆಡಲ್ ನೀಡಲಾಗಿದೆ. ಕಾರ್ ಡ್ರೈವಿಂಗ್ ವೇಳೆ ಎಡಗಾಲು ಕಡಿಮೆ ಬಳಕೆಯಾಗಿರುವುದರಿಂದ ಬೇಕೆಂದಾಗ ಚಾಲಕರು ತಮ್ಮ ಎಡಗಾಲನ್ನು ಇದರ ಮೇಲೆ ಇಡಬಹುದು.