Side Effects Of Aloe Vera: ಆಲೋವೇರಾದ ಕೆಲವು ಅಡ್ಡ ಪರಿಣಾಮಗಳಿವು!
ಆಲೋವೇರಾ ದೇಹದಲ್ಲಿ ಪೊಟ್ಯಾಸಿಯಮ್ ಪ್ರಮಾಣವನ್ನು ಕಡಿಮೆ ಮಾಡುತ್ತದೆ. ಹೀಗಾಗಿ, ವಯಸ್ಸಾದವರು ಮತ್ತು ರೋಗಿಗಳು ಇದನ್ನು ತಿನ್ನಬಾರದು. ಏಕೆಂದರೆ ಇದು ಹೃದಯ ಬಡಿತದಲ್ಲಿ ಅನಿಯಮಿತತೆ, ದೌರ್ಬಲ್ಯ ಮತ್ತು ಆಯಾಸವನ್ನು ಉಂಟುಮಾಡುತ್ತದೆ.
ಆಲೋವೇರಾ ನೇರವಾಗಿ ಅಥವಾ ಕ್ಯಾಪ್ಸುಲ್ ರೂಪದಲ್ಲಿ ಮೌಖಿಕವಾಗಿ ತೆಗೆದುಕೊಳ್ಳಲು ಸುರಕ್ಷಿತವಲ್ಲ.
ಅಲೋವೆರಾದಲ್ಲಿನ ಲ್ಯಾಟೆಕ್ಸ್ ಹೊಟ್ಟೆ ಸೆಳೆತ ಮತ್ತು ನೋವನ್ನು ಉಂಟುಮಾಡುವ ಸಾಧ್ಯತೆಯಿದೆ. ಹೀಗಾಗಿ ಆಲೋವೇರಾ ಸೇವಿಸುವ ಮುನ್ನ ವೈದ್ಯರ ಸಲಹೆ ಪಡೆಯುವುದು ಉತ್ತಮ.
ಗರ್ಭಿಣಿಯರು ಮತ್ತು ಹಾಲುಣಿಸುವ ತಾಯಂದಿರು ಆಲೋವೇರಾ ತಿನ್ನುವುದನ್ನು ತಪ್ಪಿಸಬೇಕು ಎಂದು ತಜ್ಞರು ಹೇಳುತ್ತಾರೆ.
ಆರೋಗ್ಯ ಸಮಸ್ಯೆಗಳಿರುವವರು, ಗರ್ಭಿಣಿಯರು, ಹಾಲುಣಿಸುವ ತಾಯಂದಿರು ಆಲೋವೇರಾ ಬಳಸುವ ಮುನ್ನ ವೈದ್ಯಕೀಯ ಸಲಹೆಯನ್ನು ಪಡೆಯುವುದು ಉತ್ತಮ.